ಪ್ಯಾಂಟ್ ಬಿಚ್ಚಿ ಊರೆಲ್ಲಾ ಸುತ್ತಾಡುತ್ತಾರೆ ಇಲ್ಲಿನ ಜನ! – ನೋ ಪ್ಯಾಂಟ್ ಡೇ ಯಾಕೆ ಆಚರಿಸ್ತಾರೆ ಗೊತ್ತಾ?
ಮದರ್ಸ್ ಡೇ, ಫಾದರ್ಸ್ ಡೇ, ಟೀಚರ್ಸ್ ಡೇಯನ್ನು ನಾವು ಸೆಲಬ್ರೇಟ್ ಮಾಡುವುದನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ನೋ ಪ್ಯಾಂಟ್ಸ್ ಡೇ ಅನ್ನು ಸೆಲಬ್ರೇಟ್ ಮಾಡಲಾಗುತ್ತಿದೆ. ಅದೂ ನ್ಯಾಷನಲ್ ನೋ ಪ್ಯಾಂಟ್ಸ್ ಡೇ!
ಅಚ್ಚರಿಯಾದ್ರು ಸತ್ಯ.. ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ನಾವು ಕೇಳಿದ್ದೇವೆ. ಆದ್ರೆ ಅಮೆರಿಕ, ಲಂಡನ್, ಬರ್ಲಿನ್, ಪ್ರಾಗ್ನ ಜನರು ನೋ ಪ್ಯಾಂಟ್ಸ್ ಡೇ ಆಚರಿಸುತ್ತಾರೆ. ಈ ದಿನದಂದು ಜನರು ಪ್ಯಾಂಟ್ ಧರಿಸದೇ ಹಾಗೇ ನಗರದಾದ್ಯಂತ ಓಡಾಡುತ್ತಾರೆ. ಮೇ 3 ರಂದು ಅಮೆರಿಕ, ಲಂಡನ್ ಸೇರಿದಂತೆ ಕೆಲ ದೇಶಗಳ ಜನರು ಪ್ಯಾಂಟ್ ಧರಿಸದೇ ನೋ ಪ್ಯಾಂಟ್ ಡೇ ಸೆಲಬ್ರೇಷನ್ ಮಾಡಿದ್ದಾರೆ. ಬರೀ ಪ್ಯಾಂಟಿಯಲ್ಲಿ ಮೆಟ್ರೋ, ಹೈವೇ, ಹೋಟೆಲ್ ಹೋಗಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: 8ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ಹೈರಾಣ – ಬರೋಬ್ಬರಿ 12 ವರ್ಷಗಳ ನಂತರ ಸೇಡು ತೀರಿಸಿಕೊಂಡ ಕೆಕೆಆರ್
ಅಂದ ಹಾಗೇ ಈ ನೋ ಪ್ಯಾಂಟ್ ಡೇ ಅನ್ನು 1980ರ ದಶಕದಲ್ಲಿ ಟೆಕ್ಸಾಸ್ನ ಆಸ್ಟಿನ್ನಲ್ಲಿ ರಾಷ್ಟ್ರೀಯ ನೋ ಪ್ಯಾಂಟ್ ದಿನದ ಮೊದಲ ನಿದರ್ಶನವು ಪ್ರಾರಂಭವಾಯಿತು. ಆ ಬಳಿಕ ಪ್ರತಿ ವರ್ಷ ಮೇ ಮೊದಲ ಶುಕ್ರವಾರ ನೋ ಪ್ಯಾಂಟ್ಸ್ ಡೇ ಆಚರಿಸಲಾಗುತ್ತಿದೆ.
ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನೈಟ್ಹುಡ್ ಆಫ್ ಬುಹ್ ಎಂಬ ಹೆಸರಿನ ಕ್ಲಬ್ ತಮ್ಮ ಪರೀಕ್ಷೆ ಮುಗಿದ ಸಂಭ್ರಮ ಆಚರಿಸಲು ಪ್ಯಾಂಟ್ ಕಳಚಿ ಒಳಉಡುಪಿನಲ್ಲಿ ಓಡಾಡಿದರು. ಅಲ್ಲಿಂದ ಇದೊಂದು ಸಂಪ್ರದಾಯದಂತೆ ಮುಂದುವರಿಯಿತು. ಹಲವು ದೇಶಗಳು ಇದನ್ನು ಅನುಸರಿಸಿದವು.
ನ್ಯಾಶನಲ್ ನೋ ಪ್ಯಾಂಟ್ ಡೇ ರೀತಿಯಲ್ಲಿಯೇ, ನೋ ಪ್ಯಾಂಟ್ ಸಬ್ವೇ ರೈಡ್ ಡೇ ಅನ್ನು 2002 ರಲ್ಲಿ ಇಂಪ್ರೂವ್ ಎವೆರಿವೇರ್, ಹಾಸ್ಯ ಸಂಸ್ಥೆ ಪ್ರಾರಂಭಿಸಿತು. ನಂತರ ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ನಗರಗಳಿಗೆ ಹರಡಿತು. ಈ ಆಚರಣೆಯನ್ನು ತಮಾಷೆ, ಸಂತೋಷಕ್ಕಾಗಿ ಮಾತ್ರ ಆಚರಿಸಲಾಗುತ್ತದೆ. ಯಾವುದೇ ಉದ್ದೇಶ ಹೊಂದಿಲ್ಲ. ಇದನ್ನು ನಾನ್ಸೆನ್ಸ್ ಡೇ ಎಂದೂ ಕರೆಯಬಹುದು ಎನ್ನುತ್ತಾರೆ ಆಯೋಜಕರು.
ಹಲವರು ತಾವು ಪ್ಯಾಂಟ್ ಧರಿಸಿಲ್ಲ ಎಂಬುದು ಸುತ್ತಲಿರುವವರಿಗೆ ಅಚ್ಚರಿ ಉಂಟು ಮಾಡುವುದನ್ನು ಎಂಜಾಯ್ ಮಾಡುತ್ತಾರೆ. ತಾವು ಸಂಪೂರ್ಣ ದೈನಂದಿನ ರೀತಿಯಲ್ಲಿ ಪುಸ್ತಕ ಓದುತ್ತಲೋ, ಮೊಬೈಲ್ ಹಿಡಿದೋ ಸುತ್ತಲಿನವರ ಗಮನ ಸೆಳೆಯುತ್ತಾರೆ. ಈ ದಿನ ಹಲವರು ತಮ್ಮ ಕಂಫರ್ಟ್ ಝೋನ್ ನಿಂದ ಹೊರಬಂದು ತಮ್ಮನ್ನು ತಾವು ತಮಾಷೆಯ ವಸ್ತುವಾಗಿ ನೋಡಲು ಕಲಿಯುತ್ತಾರೆ. ಇದೊಂದು ಉತ್ತಮ ಕಲಿಕೆ ಎಂಬುದು ಆಯೋಜಕರು ಹೇಳುತ್ತಾರೆ.