ತವರಿನಲ್ಲೇ ಸಿಎಸ್‌ಕೆಗೆ ಹೀನಾಯ ಸೋಲು – 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಪಂಜಾಬ್‌

ತವರಿನಲ್ಲೇ ಸಿಎಸ್‌ಕೆಗೆ ಹೀನಾಯ ಸೋಲು – 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಪಂಜಾಬ್‌

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಪಂಜಾಬ್‌ ರೋಚಕ ಗೆಲುವು ಸಾಧಿಸಿದೆ.  ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳಿಂದ ತವರಿನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿದೆ.  ಈ ಗೆಲುವಿನೊಂದಿಗೆ ಪಂಜಾಬ್ ನ ಪ್ಲೇ ಆಫ್‌ ರೇಸ್‌ನಲ್ಲಿ ಉತ್ಸಾಹ ಹೆಚ್ಚಿದೆ.

ಇದನ್ನೂ ಓದಿ: ಹಿಟ್‌ ಮ್ಯಾನ್‌ ಆಸ್ತಿ ಎಷ್ಟಿದೆ ಗೊತ್ತಾ? – ಕಾರು.. ವಾಚ್.. ಲೆಕ್ಕವೆಷ್ಟು?

ಚೆಪಾಕ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 162 ರನ್ ಪೇರಿಸಿತ್ತು.ರುತುರಾಜ್ ಗಾಯಕ್ವಾಡ್ 62 ರನ್ ಹಾಗೂ ಅಜಿಂಕ್ಯ ರಹಾನೆ 29 ರನ್ ಗಳಿಸಿದರು. ಪಂಜಾಬ್ ಪರ ಹರ್‌ಪ್ರೀತ್ ಬ್ರಾರ್ ಮತ್ತು ರಾಹುಲ್ ಚಹಾರ್ 2-2 ವಿಕೆಟ್ ಪಡೆದರು. ಕಗಿಸೊ ರಬಾಡ ಮತ್ತು ಅರ್ಷದೀಪ್ ಸಿಂಗ್ 1-1 ವಿಕೆಟ್ ಪಡೆದರು. ಕೊನೆಯ ಎಸೆತದಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗಿದ್ದು ಈ ಋತುವಿನಲ್ಲಿ ಅವರು ಮೊದಲ ಬಾರಿಗೆ ಔಟಾಗಿದ್ದಾರೆ.

ಚೆನ್ನೈ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ ಪಂಜಾಬ್ ನ ಆರಂಭ ಕೆಟ್ಟಿತ್ತು. ಪ್ರಭಾಸಿಮ್ರಾನ್ 13 ರನ್ ಗಳಿಸಿ ಔಟಾದರು. ಇದರ ನಂತರ ರಿಲೆ ರೂಸೋ ಮತ್ತು ಜಾನಿ ಬೈರ್‌ಸ್ಟೋವ್ ಉತ್ತಮ ಜೊತೆಯಾಟವಾಡಿದರು. ಇಬ್ಬರೂ ಎಚ್ಚರಿಕೆಯ ಆಟವಾಡಿ ತಂಡವನ್ನು 100ರ ಸಮೀಪಕ್ಕೆ ಕೊಂಡೊಯ್ದರು. ಬೈರ್‌ಸ್ಟೋವ್ 46 ರನ್ ಮತ್ತು ರಿಲೆ ರೂಸೋ 43 ರನ್ ಗಳಿಸಿ ಔಟಾದರು.

ಇದಾದ ಬಳಿಕ ನಾಯಕ ಸ್ಯಾಮ್ ಕುರ್ರಾನ್ ಅಜೇಯ 26 ಮತ್ತು ಶಶಾಂಕ್ ಸಿಂಗ್ ಅಜೇಯ 25 ರನ್ ಗಳ ನೆರವಿನಿಂದ ಪಂಜಾಬ್ 17.5 ಓವರ್‌ಗಳಲ್ಲಿ 163 ರನ್ ಗಳಿಸುವ ಮೂಲಕ ಪಂಜಾಬ್ ಗೆಲುವಿಗೆ ಕಾರಣರಾದರು. ಚೆನ್ನೈ ತಂಡದ ಮೂವರು ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು.

Shwetha M