ತಮಿಳುನಾಡು ಬಳಿಕ ರಾಜ್ಯದಲ್ಲಿಯೂ ಲಿಕ್ವಿಡ್ ನೈಟ್ರೋಜನ್ ನಿಷೇಧ?

ತಮಿಳುನಾಡು ಬಳಿಕ ರಾಜ್ಯದಲ್ಲಿಯೂ ಲಿಕ್ವಿಡ್ ನೈಟ್ರೋಜನ್ ನಿಷೇಧ?

ರೆಸ್ಟೋರೆಂಟ್‌, ಹೋಟೆಲ್‌ಗಳಲ್ಲಿ ಇತ್ತೀಚೆಗೆ ಫ್ಯಾನ್ಸಿ ಫುಡ್‌ಗಳ ಹಾವಳಿ ಹೆಚ್ಚಾಗಿದೆ. ಗ್ರಾಹಕರನ್ನು ಸೆಳೆಯಲು ಆಹಾರಗಳಿಗೆ ಟೇಸ್ಟಿಂಗ್‌ ಪೌಡರ್, ಕಲರ್‌ ಪೌಡರ್‌, ಕೆಲ ಕೆಮಿಕಲ್‌ಗಳನ್ನು ಹಾಕುತ್ತಿದ್ದಾರೆ. ಅದ್ರಲ್ಲಿ ಲಿಕ್ವಿಡ್ ನೈಟ್ರೋಜನ್ ಕೂಡ ಒಂದು. ಇತ್ತೀಚೆಗೆ ಲಿಕ್ವಿಡ್ ನೈಟ್ರೋಜನ್ ಬಳಸಿದ ಆಹಾರ ಸೇವಿಸಿ ಮಕ್ಕಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ತಮಿಳುನಾಡಿನಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ ಮಾಡಲಾಗಿತ್ತು. ಇದೀಗ ಕರ್ನಾಟಕದಲ್ಲೂ ಲಿಕ್ವಿಡ್ ನೈಟ್ರೋಜನ್ ಬ್ಯಾನ್‌ ಮಾಡಲು ಚಿಂತನೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಡತನದಿಂದ ಮೇಲೆದ್ದ ಕ್ರಿಕೆಟರ್‌! – ಓದಿದ್ದು 8 ಕ್ಲಾಸ್‌.. ಈಗ ಫೇಮಸ್ ಆಟಗಾರ!

ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಬಾಲಕನೊಬ್ಬ “ಸ್ಮೋಕ್ ಬಿಸ್ಕೆಟ್” ಸೇವಿಸಿದ್ದಾನೆ. ಬಾಲಕ ಹೊಗೆ ಬಿಸ್ಕೆಟ್ ತಿಂದು ತೀವ್ರ ಅಸ್ವಸ್ಥಗೊಂಡಿದ್ದ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ತಮಿಳುನಾಡು ಆರೋಗ್ಯ ಇಲಾಖೆ ಏಪ್ರಿಲ್ 25 ರಂದು ಲಿಕ್ವಿಡ್‌ ನೈಟ್ರೋಜನ್‌ ಬ್ಯಾನ್‌ ಮಾಡಿ ಹೊರಡಿಸಿದ ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ಆಹಾರ ಪದಾರ್ಥ ಅಥವಾ ಪಾನೀಯವನ್ನು ನೀಡುವ ಮೊದಲು ದ್ರವ ಸಾರಜನಕವನ್ನು ಸಂಪೂರ್ಣವಾಗಿ ಆವಿಯಾಗಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇನ್ನು ತಮಿಳುನಾಡು ನಂತರ ಕರ್ನಾಟಕ ಕೂಡ ಬಿಸ್ಕೆಟ್ ಮತ್ತು ಐಸ್ ಕ್ರೀಮ್‌ಗಳಂತಹ ಆಹಾರ ಪದಾರ್ಥಗಳ ಜೊತೆಗೆ ಲಿಕ್ವಿಡ್ ನೈಟ್ರೋಜನ್ ನ್ನು ನೇರ ಬಳಕೆಗೆ ಬಳಸುವ ಯಾವುದೇ ಆಹಾರ ವ್ಯಾಪಾರ ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ರಂದೀಪ್ ಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಪ್ರಕಾರ ಅಂತಹ ನಿದರ್ಶನಗಳು ಕಂಡುಬಂದರೆ ಕ್ರಮ ಕೈಗೊಳ್ಳಲು ಇಲಾಖೆಯು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಕೇಳಿದೆ.

ಆಹಾರ ಮತ್ತು ಪಾನೀಯಗಳಲ್ಲಿ ದ್ರವರೂಪದ ಸಾರಜನಕದ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಒತ್ತಿಹೇಳಿದ ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಸೇವೆಗಳ ಮುಖ್ಯಸ್ಥ ಎಡ್ವಿನಾ ರಾಜ್, ದ್ರವ ಸಾರಜನಕವು ಬಣ್ಣರಹಿತ ಮತ್ತು ವಾಸನೆಯಿಲ್ಲದ ಸಾರಜನಕವಾಗಿದ್ದು ಅದು ಕಡಿಮೆ ತಾಪಮಾನದಲ್ಲಿ ಇರುತ್ತದೆ ಎಂದು ಹೇಳಿದ್ರು.

ದ್ರವ ಸಾರಜನಕ, ಅದರ ಕುದಿಯುವ ಬಿಂದು -196 ಡಿಗ್ರಿ ಸೆಲ್ಸಿಯಸ್, ಅಸಾಧಾರಣವಾಗಿ ತಂಪಾಗಿರುತ್ತದೆ ಮತ್ತು ಅಂಗಾಂಶಗಳನ್ನು ಫ್ರೀಜ್ ಮಾಡಬಹುದು, ಇದು ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸುವ ಮೂಲಕ ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ. ದ್ರವ ಸಾರಜನಕವನ್ನು ತಪ್ಪಾಗಿ ನಿರ್ವಹಿಸುವುದು ಅಥವಾ ಆಕಸ್ಮಿಕವಾಗಿ ಸೇವಿಸುವುದರಿಂದ ಅದರ ಅತ್ಯಂತ ಕಡಿಮೆ ತಾಪಮಾನದಿಂದಾಗಿ ಚರ್ಮ ಮತ್ತು ದೇಹದ ಅಂಗಗಳಿಗೆ ತೀವ್ರ ಹಾನಿ ಉಂಟಾಗುತ್ತದೆ ಎಂದು ಹೇಳಿದರು.

Shwetha M