ಕೆಕೆಆರ್ ವಿರುದ್ಧ ಸೋತ ಡೆಲ್ಲಿ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

ಕೆಕೆಆರ್ ವಿರುದ್ಧ ಸೋತ ಡೆಲ್ಲಿ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿದೆ. ಕೇವಲ 7 ವಿಕೆಟ್‌ಗಳ ಅಂತದಲ್ಲಿ ಕೋಲ್ಕತ್ತಾ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 9 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 157 ರನ್‌ ಹೊಡೆದು ಜಯಗಳಿಸಿತು.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡಿದ್ರೆ ಸಿನಿಮಾ ನೋಡಲ್ಲ ಎಂದ ಫ್ಯಾನ್ಸ್‌ – ಕಾರಣವೇನು ಗೊತ್ತಾ?

ಕೋಲ್ಕತ್ತಾ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ಆರಂಭದಲ್ಲೇ ಅಬ್ಬರಿಸಲು ಆರಂಭಿಸಿದ್ದರು. 68 ರನ್‌(33 ಎಸೆತ, 7 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಔಟಾದರು. ಕೊನೆಯಲ್ಲಿ ಮುರಿಯದ 4ನೇ ವಿಕೆಟಿಗೆ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ 43 ಎಸೆತಗಳಲ್ಲಿ 57 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ ಔಟಾಗದೇ 33 ರನ್‌(23 ಎಸೆತ, 3 ಬೌಂಡರಿ, 1 ಸಿಕ್ಸ್‌) ವೆಂಕಟೇಶ್‌ ಅಯ್ಯರ್ ಔಟಾಗದೇ 26 ರನ್‌(23‌ ಎಸೆತ, 2 ಬೌಂಡರಿ,1 ಸಿಕ್ಸ್‌) ಹೊಡೆದರು.

ಡೆಲ್ಲಿ ಪರ ನಾಯಕ ರಿಷಭ್‌ ಪಂತ್‌ 27 ರನ್ ಹೊಡೆದರೆ ಕೊನೆಯಲ್ಲಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಔಟಾಗದೇ 35 ರನ್‌ (26 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡ 150 ರನ್‌ಗಳ ಗಡಿಯನ್ನು ದಾಟಿತು. ಕೋಲ್ಕತ್ತಾ ಪರ ವರುಣ್‌ ಚಕ್ರವರ್ತಿ 16 ರನ್‌ ನೀಡಿ 3 ವಿಕೆಟ್‌ ಕಿತ್ತರೆ ವೈಭವ್‌ ಅರೋರಾ ಮತ್ತು ಹರ್ಷಿತ್‌ ರಾಣಾ ತಲಾ 2 ವಿಕೆಟ್‌ ಪಡೆದರು.

Shwetha M