ಹೆಣ್ಣು ಕೊಟ್ಟ ಅತ್ತೆಯನ್ನೇ ಬುಟ್ಟಿಗೆ ಹಾಕಿಕೊಂಡ – ಮಾವನ ಸಮ್ಮುಖದಲ್ಲೇ ಮದುವೆ ಆದ ಭೂಪ!

ಹೆಣ್ಣು ಕೊಟ್ಟ ಅತ್ತೆಯನ್ನೇ ಬುಟ್ಟಿಗೆ ಹಾಕಿಕೊಂಡ – ಮಾವನ ಸಮ್ಮುಖದಲ್ಲೇ ಮದುವೆ ಆದ ಭೂಪ!

ಪ್ರೀತಿಗೆ ಕಣ್ಣಿಲ್ಲ.. ಪ್ರೀತಿ ಕುರುಡು ಅನ್ನೋ ಮಾತಿದೆ. ಅದಕ್ಕೆ ವಯಸ್ಸಿನ ಮಿತಿ ಇಲ್ಲ.. ಇತ್ತೀಚಿನ ದಿನಗಳಲ್ಲಿ ಅಪ್ಪ, ಅಮ್ಮನ ವಯಸ್ಸಿನವರೊಂದಿಗೆ ಮದುವೆ ಆಗುವ ವಿಚಿತ್ರ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಇಲ್ಲೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾನೆ. ಮಾವನ ಒಪ್ಪಿಗೆ ಪಡೆದು ಮದುವೆಯಾಗಿದ್ದಾನೆ.

ಇದನ್ನೂ ಓದಿ: ಎಸ್‌ಆರ್‌ಹೆಚ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸಿಎಸ್‌ಕೆ – ಋತುರಾಜ್‌ ಅಬ್ಬರದ ಆಟಕ್ಕೆ ಮಂಕಾದ ಸನ್ ರೈಸರ್ಸ್!

ಅಚ್ಚರಿಯಾದ್ರೂ ಸತ್ಯ,. ಈ ವಿಚಿತ್ರ ಘಟನೆ ಬಿಹಾರ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್​ಮೋತಿ ಗ್ರಾಮದಲ್ಲಿ ನಡೆದಿದೆ. ಹೀರ್​ಮೋತಿ ಗ್ರಾಮದ ಸಿಕಂದರ್ ಯಾದವ್, ಅತ್ತೆ ಗೀತಾ ದೇವಿ (45)ಯನ್ನು ಮದುವೆಯಾದ ಅಳಿಯ.  ಕೆಲವು ವರ್ಷಗಳ ಹಿಂದೆ ತಮ್ಮ ಮಗಳನ್ನು ಸಿಕಂದರ್ ಯಾದವ್​ಗೆ ಕೊಟ್ಟು ಈ ದಂಪತಿ ಮದುವೆ ಮಾಡಿರುತ್ತಾರೆ. ಆದ್ರೆ ಕೆಲವು ಕಾರಣಗಳಿಂದ ಪತ್ನಿ ಸಾವನ್ನಪ್ಪುತ್ತಾಳೆ. ನಂತರ ಅಳಿಯ ಅತ್ತೆ ಮನೆಯಲ್ಲಿ ಇರಲು ಪ್ರಾರಂಭಿಸುತ್ತಾನೆ ಎನ್ನಲಾಗಿದೆ.

ಅಳಿಯ, ಅತ್ತೆ ಮನೆಯಲ್ಲಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಮೂಡಿದೆ. ಈ ಬಗ್ಗೆ ಕುಟುಂಬದಲ್ಲಿ ಅನುಮಾನ ಬಂದಿರುತ್ತದೆ. ಆದರೆ ಅಧಿಕೃತವಾಗಿ ಯಾರೂ ಪ್ರಸ್ತಾಪ ಮಾಡಿರುವುದಿಲ್ಲ. ಆದರೆ ಒಂದು ದಿನ ಇಬ್ಬರು ಮನೆಯಲ್ಲಿ ಪ್ರಣಯಾದಲ್ಲಿ ಇರುವಾಗ ಗಂಡ ದಿಲೇಶ್ವರ್ ದರ್ವೆ ಕೈಗೆ ರೆಡ್​​ ಆ್ಯಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಕುಟುಂಬದಲ್ಲಿ ಸಂಘರ್ಷ ಏರ್ಪಟ್ಟು ಗ್ರಾಮ ಪಂಚಾಯತಿವರೆಗೆ ಸುದ್ದಿ ಹೋಗುತ್ತದೆ. ಆಗ ಅಳಿಯನು ಅತ್ತೆ ಮೇಲಿರುವ ಪ್ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಇನ್ನು ಏನು ಮಾಡೋಕೆ ಆಗುವುದಿಲ್ಲ ಎಂದು ಗಂಡನ ಹಾಗೂ ಗ್ರಾಮದ ಹಿರಿಯರ ಒಪ್ಪಿಗೆ ಪಡೆದುಕೊಂಡು ಇಬ್ಬರು ಎಲ್ಲರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

Shwetha M