ಗುಜರಾತ್ ಟೈಟಾನ್ಸ್ ಗೆ ರೋಚಕ ಸೋಲು – – 9 ವಿಕೆಟ್ ಗಳಿಂದ ಗೆದ್ದು ಬೀಗಿದ ಆರ್ ಸಿಬಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. 9 ವಿಕೆಟ್‌ಗಳ ಅಂತರದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ.
ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನೀಡಿದ ಬೃಹತ್ ರನ್ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಬಿರುಸಿನ ಬ್ಯಾಟಿಂಗ್ ಮಾಡೋ ಭರದಲ್ಲಿ ಫಾಫ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿದ್ರು.
ಇದನ್ನೂ ಓದಿ:ಕ್ರಿಕೆಟ್.. ಕಾರು ಮತ್ತು ಕಾವ್ಯಾ!.. ಗಜಕೇಸರಿ ಯೋಗದಿಂದ SRH ಗೆಲುವು! – ಭಾರತದ ಹೊಸ ನ್ಯಾಷನಲ್ ಕ್ರಷ್!
ಫಾಫ್ ಆಡಿದ 12 ಬಾಲ್ನಲ್ಲಿ 24 ರನ್ ಚಚ್ಚಿದ್ರು. ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸ್ ಸಿಡಿಸಿದ ಫಾಫ್ 4ನೇ ಸಿಕ್ಸ್ಗೆ ಟ್ರೈ ಮಾಡಿ ಔಟಾದ್ರು. ಜತೆಗೆ ಒಂದು ಫೋರ್ ಕೂಡ ಬಾರಿಸಿದ್ರು. ಈ ಹಿಂದೆಯೂ ಹಲವು ಬಾರಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಫಾಫ್ ಔಟಾಗಿದ್ದರು. ಹೀಗಾಗಿ ಎಷ್ಟು ಬಾರಿ ಔಟಾದ್ರೂ ಫಾಫ್ ಇನ್ನೂ ಬುದ್ಧಿ ಕಲಿತಿಲ್ಲ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಡುಪ್ಲೆಸಿಸ್ ಔಟಾದ್ರೂ ಕ್ರೀಸ್ನಲ್ಲೇ ನಿಂತು ತಾಳ್ಮೆಯಿಂದ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಕೇವಲ 44 ಬಾಲ್ನಲ್ಲಿ ಕೊಹ್ಲಿ 3 ಸಿಕ್ಸರ್, 6 ಫೋರ್ ಸಮೇತ 70 ರನ್ ಸಿಡಿಸಿದ್ರು.
ಇನ್ನಿಂಗ್ಸ್ ಉದ್ಧಕ್ಕೂ ಬೆಂಡೆತ್ತಿದ ವಿಲ್ ಜಾಕ್ಸ್ ಕೇವಲ 41 ಬಾಲ್ನಲ್ಲಿ 10 ಸಿಕ್ಸರ್, 5 ಫೋರ್ ಸಮೇತ ಶತಕ ಸಿಡಿಸಿದ್ರು. ಆರ್‌ಸಿಬಿ ಕೇವಲ 16 ಓವರ್ನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸೋ ಮೂಲಕ ಗೆಲುವು ಸಾಧಿಸಿದೆ.