ಫಾಫ್ ಡುಪ್ಲೆಸಿಸ್ ರೋಮ್ಯಾಂಟಿಕ್ ಫೋಟೋ ವೈರಲ್ – ಪತ್ನಿ ಜೊತೆ RCB ತಂಡದ ನಾಯಕನ ರೋಮ್ಯಾನ್ಸ್

ಫಾಫ್ ಡುಪ್ಲೆಸಿಸ್ ರೋಮ್ಯಾಂಟಿಕ್ ಫೋಟೋ ವೈರಲ್ – ಪತ್ನಿ ಜೊತೆ RCB ತಂಡದ ನಾಯಕನ ರೋಮ್ಯಾನ್ಸ್

RCB ತಂಡದ ನಾಯಕ ಫಾಫ್ ಡುಪ್ಲೆಸಿಸ್ ರೋಮ್ಯಾಂಟಿಕ್ ಪತಿ ಕೂಡಾ ಹೌದು. ಪತ್ನಿ ಇಮರಿ ಮಿಸ್ಸರ್ ಜೊತೆಯಲ್ಲಿದ್ರೆ ಫಾಫ್ ಸಂಭ್ರಮವೇ ಬೇರೆ. ಇದೀಗ RCB ತಂಡದ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಪತ್ನಿ ಇಮರಿ ವಿಸ್ಸರ್ ಅವರ ರೊಮ್ಯಾಂಟಿಕ್‌ ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್‌ ಸೌಂಡ್ ಮಾಡ್ತಿವೆ. ಆದ್ರೆ, ಈ ಫೋಟೋ ನೋಡಿ ಅಭಿಮಾನಿಗಳು ಮಾತ್ರ ಮೊದ್ಲು ತಂಡವನ್ನು ಗೆಲ್ಲಿಸಿ ಕ್ಯಾಪ್ಟನ್,  ನಂತರ ಎಲ್ಲಿ ಬೇಕಾದ್ರೂ ಸುತ್ತಾಡಿ ಅಂತಿದ್ದಾರೆ.

ಇದನ್ನೂ ಓದಿ: RCB ವಿರುದ್ಧ ಸೋತ ಸಿಟ್ಟಲ್ಲಿ ಕಮಿನ್ಸ್ ಸಿಡಿಮಿಡಿ – SRH ತಂಡದ ಓನರ್ ಕಾವ್ಯ ಮಾರನ್ ನೋವಿಗೂ ಕೊನೆಯಿಲ್ಲ..!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿರುವ ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್ ಸೆನ್ಸೇಷನ್ ಫಾಫ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾದ ಅಭಿಮಾನಿಗಳ ಫೆವರೇಟ್ ಕ್ರಿಕೆಟಿಗ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಡುಪ್ಲೆಸಿಸ್ ಇದೀಗ ಪತ್ನಿ ಜೊತೆ ಕಳೆದ ಆತ್ಮೀಯ ಕ್ಷಣಗಳ ಫೋಟೋ ವೈರಲ್ ಆಗಿದೆ. ಫಾಫ್ ಡುಪ್ಲೆಸಿಸ್ ಪತ್ನಿ ಇಮರಿ ವಿಸ್ಸರ್ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಪೋಟೋಗಳು ಸಖತ್‌ ವೈರಲ್‌ ಆಗಿದ್ದು, ಅದರಲ್ಲಿ ಕ್ರಿಕೆಟರ್‌ ಅವರ ಪತ್ನಿ ಇಮರಿ ವಿಸ್ಸರ್ ಅವರೊಂದಿಗೆ ಅಮೂಲ್ಯ ಕ್ಷಣಗಳನ್ನು ಆನಂದಿಸುತ್ತಾರೆ. ಫೋಟೋಗಳಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಇಮರಿ ವಿಸ್ಸರ್ ಅವರ  ಪ್ರೀತಿ, ಬೆಂಬಲ ಮತ್ತು ಪರಸ್ಪರ ಮೆಚ್ಚುಗೆಯನ್ನು ಸಂಕೇತಿಸುತ್ತದೆ.

ಇಮರಿ ವಿಸ್ಸರ್, ಫಾಫ್ ಡು ಪ್ಲೆಸಿಸ್ ಅವರ ಪತ್ನಿ, ಹಿಂದೆ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದು, ಬ್ಯಾಚುಲರ್ ಆಫ್ ಕಾಮರ್ಸ್ ಪದವಿಯನ್ನು ಹೊಂದಿದ್ದಾರೆ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ.

Sulekha