ಈ ಬಾರಿಯೂ ಉತ್ತರ ಪ್ರದೇಶದ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ ರಾಹುಲ್‌?

ಈ ಬಾರಿಯೂ ಉತ್ತರ ಪ್ರದೇಶದ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ ರಾಹುಲ್‌?

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈಗಾಗಲೇ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇದೀಗ ರಾಹುಲ್‌ ಗಾಂಧಿ  ಬಾರಿಯೂ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ  ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ವಿಜಯಪುರದ ಗೊಡ್ಡೆಮ್ಮೆ ಯತ್ನಾಳ್‌.. ಒದರಿ..ಒದರಿ ಸಾಯೋ ಪರಿಸ್ಥಿತಿ ಬರುತ್ತದೆ – ವಿಜಯಾನಂದ ಕಾಶಪ್ಪನವರ್ ಹೀಗೆ ಹೇಳಿದ್ಯಾಕೆ?

ರಾಹುಲ್‌ ಗಾಂಧಿ ಅಮೇಥಿಯಲ್ಲಿ 2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ರಾಹುಲ್ 55 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಬಿಜೆಪಿಯ ಸ್ಮೃತಿ ಇರಾನಿ 4,68,514 ಮತಗಳನ್ನು ಪಡೆದಿದ್ದರೆ ರಾಹುಲ್‌ 4,13,394 ಮತಗಳನ್ನು ಪಡೆದಿದ್ದರು. ರಾಹುಲ್‍ರ ಈ ಸೋಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿತ್ತು. ಇದೀಗ ಅದೇ ಕ್ಷೇತ್ರದಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿಯ ಚುನಾವಣಾ ರಾಜಕಾರಣಕ್ಕೆ ಜನ್ಮ ನೀಡಿದ್ದ ಉತ್ತರ ಪ್ರದೇಶ ಅಮೇಥಿ ಕ್ಷೇತ್ರದಲ್ಲಿರುವ  ಅವರ ಮನೆಯನ್ನು ನವೀಕರಣ ಮಾಡಲಾಗುತ್ತಿದೆ.  ಗೌರಿಗಂಜ್‌ ನಗರದಲ್ಲಿರುವ ರಾಹುಲ್‌ ಅವರ ನಿವಾಸವನ್ನು ಸುಣ್ಣಬಣ್ಣ ಬಳಿದು ಸ್ವಚ್ಛಗೊಳಿಸಿ ಉದ್ಯಾನವನ್ನು ಅಂದಗೊಳಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೇ ಚುನಾವಾಣಾ ಪ್ರಚಾರದ ಭಿತ್ತಿಪತ್ರಗಳನ್ನೂ ತಂದಿರಿಸಲಾಗಿದೆ. ಈ ಕೆಲಸಗಳನ್ನು ನೋಡಿ ಮತ್ತೆ ರಾಹುಲ್‌ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಇದೆ.

Shwetha M