ಅಯ್ಯೋ ಎಂಥಾ ಕಾಲ ಬಂತಪ್ಪಾ!.. – ಫೋನ್‌ ಮೂಲಕವೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮಹಿಳೆ!

ಅಯ್ಯೋ ಎಂಥಾ ಕಾಲ ಬಂತಪ್ಪಾ!.. – ಫೋನ್‌ ಮೂಲಕವೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮಹಿಳೆ!

ಇದು ಡಿಜಿಟಲ್‌ ಯುಗ. ಕುಂತ್ರೂ, ನಿಂತ್ರೂ ಕೈಯಲ್ಲಿ ಫೋನ್‌ ಇರಲೇಬೇಕು.. ಈಗಿನ ಕಾಲದಲ್ಲಿ ಅಗತ್ಯ ಕೆಲಸಗಳು ಫೋನ್‌ ಮೂಲಕವೇ ನಡೆಯುತ್ತದೆ. ಇತ್ತೀಚೆಗೆ ಮದುವೆ ಹೋಗಲು ಸಾಧ್ಯವಾಗಿಲ್ಲ ಅಂತಾದ್ರೆ ವಿಡಿಯೋ ಕಾಲ್‌ ಮೂಲಕವೇ ವಧು – ವರನಿಗೆ ವಿಶ್‌ ಮಾಡುತ್ತಾರೆ.. ಇನ್ನೂ ದೂರದ ಊರಿನಲ್ಲಿ ಮದುವೆ ಆಗುತ್ತಿದ್ದರೆ, ಆನ್‌ಲೈನ್‌ ನಲ್ಲೇ ಮದುವೆ ಅಟೆಂಡ್‌ ಆಗಿರುವ ಅನೇಕ ವಿಡಿಯೋಗಳು ವೈರಲ್‌ ಆಗಿತ್ತು. ಇದೀಗ ಇಲ್ಲೊಬ್ಬಳು ವಿಡಿಯೋ ಕಾಲ್‌ ಮೂಲಕವೇ ದೇವರ ದರ್ಶನ ಪಡೆದಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಮದುವೆಗೆ ಕರೆಯದ ನಾದಿನಿ – ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

ಇಷ್ಟು ದಿನ ದೇವಸ್ಥಾನಗಳಿಗೆ ಹೋಗಿ ದೇವರಿಗೆ ಕೈಮುಗಿಯಲಾಗುತ್ತಿತ್ತು. ದೇವರ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಇದೀಗ ಇಲ್ಲೊಬ್ಬಳು ಮಹಿಳೆ ವಿಡಿಯೋ ಕಾಲ್‌ ಮೂಲಕ ತನ್ನ ಪ್ರಾರ್ಥನೆ ಸಲ್ಲಿಸಿದ್ದಾಳೆ. ಇದರ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋವನ್ನು ನಮ್ಮ ಕಲಬುರ್ಗಿ ಟ್ರೋಲ್ಸ್ (@namma_kalaburgi_trolls) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋಗೆ  “ಎಂಥಾ ಕಾಲ ಬಂತು ಗುರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಸಾಯಿಬಾಬಾ ದೇವಾಲಯಕ್ಕೆ ಬಂದಂತಹ ಮಹಿಳೆಯೊಬ್ಬರು, ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಗೊಬ್ಬರಿಗೆ ಫೋನ್ ಮಾಡಿ ಬಳಿಕ ಆ ಮೊಬೈಲ್ ಅನ್ನು ದೇವರ ಮೂರ್ತಿಯ ಬಳಿ ಇಟ್ಟು ಪ್ರಾರ್ಥನೆ ಸಲ್ಲಿಸು ಎಂದು ಹೇಳುವ ದೃಶ್ಯವನ್ನು ಕಾಣಬಹುದು. ಮತ್ತು ಫೋನ್ ಕಾಲ್ ಅಲ್ಲಿ ಇರುವ ವ್ಯಕ್ತಿ ಕಾಲ್ ಮುಖಾಂತರವೇ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡಿದ್ದಾರೆ.

Shwetha M