ಬ್ಯೂಟಿಗಾಗಿ ಬ್ಯೂಟಿಪಾರ್ಲರ್ ಗೆ ಹೋದ್ಲು.. – ಟ್ರೀಟ್ಮೆಂಟ್ ತೆಗೆದುಕೊಂಡವಳಿಗೆ ಕಾದಿತ್ತು ಬಿಗ್ ಶಾಕ್!

ಮಹಿಳೆಯರಿಗೂ ಬ್ಯೂಟಿ ಪಾರ್ಲರ್ ಗೂ ಬಿಡಿಸಲಾರದ ನಂಟಿದೆ. ಬ್ಯೂಟಿ ಪಾರ್ಲರ್ ಹಾಗೂ ಹೇರ್ ಸಲೂನ್ ಗೆ ಹೋಗಿ ಅನೇಕರು, ಹೇರ್ ಸ್ಪಾ.. ಹೇರ್ ಕಟ್, ಹೇರ್ ವಾಶ್, ಹೆಡ್ ಮಸಾಜ್ ಮಾಡಿಸಿಕೊಳ್ತಾರೆ. ಬ್ಯೂಟಿ ಸಲೂನ್ ಸೌಂದರ್ಯ ಹೆಚ್ಚಿಸುತ್ತದೆ ಅಂತಾ ಏನೇನೋ ಚಿಕಿತ್ಸೆಗಳಿಗೆ ಅನೇಕರು ಒಳಗಾಗುತ್ತಾರೆ. ಇದೀಗ ಇಲ್ಲೊಬ್ಬಳು ಸೌಂದರ್ಯ ಚಿಕಿತ್ಸೆಗೆ ಒಳಗಾಗಿ ಆನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಚಿಕಿತ್ಸೆಯ ನಂತರ ಬ್ಯೂಟಿ ಹೆಚ್ಚಾಗುವ ಬದಲು ಮುಖ ಕುರೂಪವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಹೋಟೆಲ್ಗೆ ಬಾಂಬ್ ಬೆದರಿಕೆ! – ಕೆಫೆ ಬ್ಲಾಸ್ಟ್ ಮಾಡಿದ್ದು ನಾನೇ ಎಂದು ಪೊಲೀಸರಿಗೆ ಪತ್ರ ಬರೆದ ಅನಾಮಿಕ!
ಡೇನಿಯಲ್ ಹಬಾರ್ಡ್ ಎಂಬಾಕೆ ತನ್ನ ಹುಬ್ಬು ಸುಂದರವಾಗಲು ಬಯಸಿದ್ದಳು. ಹೀಗಾಗಿ ಡೇನಿಯಲ್ ಮಾಲ್ಟಾದಲ್ಲಿ 12 ಪೌಂಡ್ಗಳ ಅಂದರೆ ಸುಮಾರು 1237 ರೂಪಾಯಿ ಮೌಲ್ಯದ ಸೌಂದರ್ಯ ಚಿಕಿತ್ಸೆಯನ್ನು ಬುಕ್ ಮಾಡಿದ್ದಳು. ಬಳಿಕ ಆಕೆ ಬ್ಯೂಟಿ ಪಾರ್ಲರ್ನಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದಾಳೆ. ಚರ್ಮದ ಅಲರ್ಜಿ ಪರೀಕ್ಷೆಯನ್ನು ಮಾಡಿಸದೇ ಬ್ಯೂಟಿಷನ್ ನೇರವಾಗಿ ಹುಬ್ಬುಗಳಿಗೆ ಬಣ್ಣ ಬಳಿಯಲು ಪ್ರಾರಂಭಿಸಿದ್ದಾಳೆ. ಇದರಿಂದಾಗಿ ಆಕೆ ಚಿಕಿತ್ಸೆ ಪಡೆದ ಮರುದಿನ ಮುಖ ವಿಚಿತ್ರವಾಗಿದೆ. ಮುಖದಲ್ಲಿ ದದ್ದುಗಳು ಕಾಣಿಸಿಕೊಂಡಿದೆ. ಕಣ್ಣು ಸಂಪೂರ್ಣವಾಗಿ ಊದಿಕೊಂಡಿದೆ. ಬಳಿಕ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.
“ಬ್ಯೂಟಿಷಿಯನ್ ನನ್ನ ಚರ್ಮದ ಬಗ್ಗೆ ಯಾವುದೇ ಪರೀಕ್ಷೆ ಮಾಡಿಸಿಲ್ಲ. ಆದರೂ ಚಿಕಿತ್ಸೆಯ ನಂತರ, ಆರಂಭದಲ್ಲಿ ಮುಖವು ಚೆನ್ನಾಗಿತ್ತು, ಆದರೆ ಮರುದಿನ ಬೆಳಿಗ್ಗೆ ನನ್ನ ಎಡಗಣ್ಣು ತುಂಬಾ ಊದಿಕೊಂಡಿದೆ” ಎಂದು ಮಹಿಳೆ ಹೇಳಿದ್ದಾಳೆ.
ರಾಯಲ್ ಬ್ಲಾಕ್ಬರ್ನ್ ಆಸ್ಪತ್ರೆಯಲ್ಲಿ ಅಲರ್ಜಿಯ ಪ್ರತಿಕ್ರಿಯೆಗೆ ಚಿಕಿತ್ಸೆ ನೀಡಲು ಸ್ಟೀರಾಯ್ಡ್ಗಳನ್ನು ನೀಡಲಾಗಿದ್ದು, ಸದ್ಯ ಗುಣಮುಖರಾಗುತ್ತಿದ್ದಾಳೆ. ಇದಾದ ಬಳಿಕ ಮತ್ತೊಮ್ಮೆ ಬ್ಯೂಟಿಪಾರ್ಲರ್ಗೆ ತೆರಳಿ ದೂರು ನೀಡಿ ನಷ್ಟದ ಹಣ ವಾಪಸು ಪಡೆಯಲು ಮುಂದಾದರೂ ಬ್ಯೂಟಿಷಿಯನ್ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡಲಿಲ್ಲ, ಕ್ಷಮೆ ಯಾಚಿಸಲಿಲ್ಲ. ಆದ್ದರಿಂದ ಬ್ಯೂಟಿ ಪಾರ್ಲರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಡೇನಿಯಲ್ ವಕೀಲರನ್ನು ಸಂಪರ್ಕಿಸಿದ್ದಾಳೆ ಎಂದು ತಿಳಿದುಬಂದಿದೆ.