ಬ್ರಿಟನ್​​ನ ಉದ್ಯಾನವನದಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಸಸ್ಯ ಪತ್ತೆ

ಬ್ರಿಟನ್​​ನ ಉದ್ಯಾನವನದಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಸಸ್ಯ ಪತ್ತೆ

ಜಗತ್ತಿನ ಅತ್ಯಂತ ವಿಷಕಾರಿ ಸಸ್ಯವೊಂದು ಬ್ರಿಟನ್ ನ  ಪಾರ್ಕ್​​ನಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಸ್ಯ ರಿಕಿನಸ್ ಕಮ್ಯುನಿಸ್ (Ricinus communis) ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಸಾಮಾನ್ಯವಾಗಿ ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ- ಡೊನಾಲ್ಡ್ ಟ್ರಂಪ್ ಘೋಷಣೆ

ಮಹಿಳೆಯೊಬ್ಬಳು ಪಾರ್ಕ್ ನಲ್ಲಿ ನಡೆಯುತ್ತಿದ್ದಾಗ ಈ ಸಸ್ಯ ಪತ್ತೆಯಾಗಿದೆ. ಈ ಸಸ್ಯ ಸೈನೈಡ್‌ಗಿಂತ 6,000 ಪಟ್ಟು ಹೆಚ್ಚು ವಿಷಕಾರಿ ವಸ್ತುವನ್ನು ಹೊಂದಿರುತ್ತದೆ. ಕಾನ್ವಿ ಕೌನ್ಸಿಲ್ ಗ್ರೌಂಡ್‌ಕೀಪರ್‌ಗಳು ಈ ವಾರ ಕೊಲ್ವಿನ್ ಬೇ (Colwyn Bay)ಯಲ್ಲಿರುವ ಕ್ವೀನ್ ಗಾರ್ಡನ್ಸ್ ಪಾರ್ಕ್‌ನಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದರು. ಈ ಸಸ್ಯವು ಹೂವುಗಳು ಮತ್ತು ಪೊದೆಗಳ ನಡುವೆ ಇತ್ತು. ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂಬ ಈ ಸಸ್ಯ ರಿಸಿನ್ ಅನ್ನು ಒಳಗೊಂಡಿದೆ.ಇದು ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧವೆಂದು ಪರಿಗಣಿಸಲ್ಪಟ್ಟ ನಿಷೇಧಿತ ವಸ್ತುವಾಗಿದೆ.

ಸಸ್ಯವನ್ನು ಮುಟ್ಟುವಾಗ ಕೈಗವಸುಗಳನ್ನು ಬಳಸಬೇಕಾಗುತ್ತದೆ. ಇದರ  ಬೀಜಗಳು ಮತ್ತು ಒಣಗಿದ ಪುಷ್ಪಗಳನ್ನು ಸೇವಿಸಿದರೆ ಹೆಚ್ಚಿನ ಅಪಾಯವಿದೆ. ಕೇವಲ 1 ರಿಂದ 10 ಬೀಜಗಳನ್ನು ಸೇವಿಸಿದರೆ ಸಾವು ಸಂಭವಿಸಬಹುದು ಎಂದು ವರದಿಯಾಗಿದೆ.

suddiyaana