ಸೌಜನ್ಯ ಹೆಸ್ರಲ್ಲಿ ಬಿಜೆಪಿ ರಾಜಕೀಯ? – ನೋಟಾದಿಂದ ಪ್ರಯೋಜನವೇನು? 

ಸೌಜನ್ಯ ಹೆಸ್ರಲ್ಲಿ ಬಿಜೆಪಿ ರಾಜಕೀಯ? – ನೋಟಾದಿಂದ ಪ್ರಯೋಜನವೇನು? 

ಸೌಜನ್ಯ ಸಾವಿನ ನ್ಯಾಯಕ್ಕೆ ಆಗ್ರಹಿಸಿ ನೀಡಿರೋ ನೋಟ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದ್ದು, ಲಕ್ಷಾಂತರ ಮಂದಿ ನೋಟಕ್ಕೆ ಮತ ಹಾಕಲು ಒಗ್ಗೂಡುತ್ತಿದ್ದಾರೆ. 2 ಲಕ್ಷಕ್ಕೂ ಅಧಿಕ ಮತಗಳು ನೋಟಾಗೆ ಬೀಳುವ ಸಾಧ್ಯತೆ ಇದ್ದು, ರಾಜಕೀಯ ಚಿತ್ರಣವೇ ಬದಲಾಗುವ ಎಲ್ಲಾ ಲಕ್ಷಣಗಳೂ ಕಾಣ್ತಿವೆ.  ಅಷ್ಟಕ್ಕೂ ನೋಟಾ ಯಾವಾಗ ಅಸ್ತಿತ್ವಕ್ಕೆ ಬಂದು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಸೌಜನ್ಯಗಾಗಿ ನೋಟಾ ಅಭಿಯಾನ! – ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆ!

2013ರಲ್ಲಿ ಭಾರತದಲ್ಲಿ ನೋಟಾ ಮತವನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಆನಂತರದ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಇವಿಎಂ ಮಷಿನ್ ಗಳಲ್ಲಿಯೇ ನೋಟಾ ಬಟನ್ ಕಡ್ಡಾಯ ಮಾಡಲಾಗಿದೆ. ಪಿಯುಸಿಎಲ್ ದಾಖಲಿಸಿದ ಅರ್ಜಿಯೊಂದರ ಮೇಲೆ ಸುಪ್ರೀಂ ಕೋರ್ಟ್, ಇವಿಎಂ ಮೆಷಿನ್ನಲ್ಲಿ ನೋಟಾ ಮತಕ್ಕೆ ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತ್ತು ರಾಜಕೀಯ ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತೆ ಪ್ರೇರಣೆ ನೀಡಲು ನೋಟಾ ಮತ ಚಲಾವಣೆಗೆ ತರಲಾಗಿತ್ತು. ಆದರೆ ನೋಟಾ ಮತಗಳಿಗೆ ಮೌಲ್ಯ ಇರುವುದಿಲ್ಲ. ನೋಟಾ ಪರವಾಗಿ ಎಷ್ಟು ಮತ ಬಿದ್ದರೂ ಅವನ್ನು ಅಸಿಂಧು ಎಂದೇ ಪರಿಗಣಿಸಲಾಗುತ್ತದೆ. 100 ಮತಗಳು ಇರುವಲ್ಲಿ ನೋಟಾಗೆ 99 ಮತಗಳು ಬಿದ್ದರೂ ಅವೆಲ್ಲ ಅಸಿಂಧು ಅಷ್ಟೇ, ಅಭ್ಯರ್ಥಿಗೆ ಒಂದು ಮತ ಬಿದ್ದರೂ ಆತನೇ ಆಯ್ಕೆಯಾಗುತ್ತಾನೆ. ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳ ಬಗ್ಗೆ ನೆಗೆಟಿವ್ ಇಮೇಜ್ ಮೂಡಿಸಲು ಮಾತ್ರ ಇದು ಕಾರಣವಾಗುತ್ತದೆ. ಇದರಿಂದ ಚುನಾವಣೆ ರದ್ದುಪಡಿಸುವುದಾಗಲೀ, ಆಯ್ಕೆ ರದ್ದುಪಡಿಸುವುದಾಗಲೀ ಸಾಧ್ಯವಿಲ್ಲ.

ಒಟ್ನಲ್ಲಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ದಕ್ಷಿಣ ಕನ್ನಡದಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ. ನೋಟಾ ಅಭಿಯಾನ ಕೂಡ ತೀವ್ರ ಸ್ವರೂಪ ಪಡೆಯುತ್ತಿದೆ. ಆದ್ರೆ ಅಂತಿಮವಾಗಿ ಸೌಜನ್ಯಗೆ ನ್ಯಾಯ ಸಿಗುತ್ತಾ ಅನ್ನೋದೇ ಈಗಿರುವ ಪ್ರಶ್ನೆ.

Shwetha M