ಅಯ್ಯಯ್ಯೋ.. ಪುರುಷ ಸಿಬ್ಬಂದಿಯ ಮುಂದೆಯೇ ಬಟ್ಟೆ ಬಿಚ್ಚಿ ಟ್ರಯಲ್ ನೋಡಿದ ಯುವತಿ!
ಈಗ ಕಾಲ ಕೆಟ್ಟು ಹೋಗಿದೆ. ಜನರ ಮನಸ್ಥಿತಿ ಸಂಪೂರ್ಣ ಬದಲಾಗಿದೆ. ಯುವಕ, ಯುವತಿರು ಸೋಶಿಯಲ್ ಮೀಡಿಯಾ ಗುಂಗಿನಲ್ಲೇ ಇರ್ತಾರೆ. ರೀಲ್ಸ್ ಮಾಡುವ ಹುಚ್ಚು ತುಸು ಹೆಚ್ಚಾಗಿಯೇ ಇದೆ. ಮೆಟ್ರೋ, ರೈಲ್ವೇ ಸ್ಟೇಷನ್ ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಸಾರ್ವಜನಿಕರನ್ನು ಮುಜುಗರಕ್ಕೀಡು ಮಾಡುತ್ತದೆ. ತಾವೇನು ಮಾಡುತ್ತಿದ್ದೇವೆ.. ಎಲ್ಲಿದ್ದೇವೆ ಅಂತಾ ಅವರಿಗೆ ಅರಿವೇ ಇರೋದಿಲ್ಲ. ಅಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ದಾಸರಾಗಿದ್ದಾರೆ. ಇದೀಗ ಇಲ್ಲೊಬ್ಬಳು ಯುವತಿ ಡ್ರೆಸ್ ಅಂಗಡಿಯ ಪುರುಷ ಸಿಬ್ಬಂದಿಯ ಮುಂದೆಯೇ ಬಟ್ಟೆ ಬಿಚ್ಚಿ ಟ್ರಯಲ್ ನೋಡಿದ್ದಾಳೆ.. ಇದೀಗ ಆ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಸಿಎಂ ಸಿದ್ಧರಾಮಯ್ಯ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು! – ಡಿಕೆ ಸುರೇಶ್
ಹಿಂದೆಲ್ಲ ಬಟ್ಟೆ ಅಂಗಡಿಗೆ ಹೋದ್ರೆ ಇಷ್ಟವಾದ ಡ್ರೆಸ್ ಅನ್ನು ಟ್ರಯಲ್ ರೂಮ್ಗೆ ಹೋಗಿ ಧರಿಸಿ ನೋಡ್ತಾ ಇದ್ರು. ಆದ್ರೆ ಈಗ ಕಾಲ ಬದಲಾಗಿದೆ ಅಂತಾ ಹೇಳೋದಕ್ಕೆ ವೈರಲ್ ಆಗಿರೋ ವಿಡಿಯೋನೇ ಸಾಕ್ಷಿ.. ದೆಹಲಿಯ ಪಾಲಿಕಾ ಬಜಾರ್ನಲ್ಲಿ ಯುವತಿಯೊಬ್ಬಳು ಡ್ರೆಸ್ ಅಂಗಡಿಗೆ ಹೋಗಿ ಹೊಸ ಬಟ್ಟೆಯನ್ನು ಖರೀದಿಸಿ ಅಂಗಡಿಯ ಪುರುಷ ಸಿಬ್ಬಂದಿಗಳ ಮುಂದೆಯೇ ಬಟ್ಟೆ ಬಿಚ್ಚಿ ಅರೆನಗ್ನ ಸ್ಥಿತಿಯಲ್ಲಿ ಹೊಸ ಬಟ್ಟೆ ತೊಟ್ಟು ಟ್ರಯರ್ ನೋಡಿದ್ದಾಳೆ. ಇಷ್ಟೇ ಅಲ್ಲದೇ ಬಟ್ಟೆ ಬಿಚ್ಚಿರುವುದನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದಾಳೆ.
दिल्ली के पालिका बाजार मे कपडे की दुकान पर.. #INSTA वाली लड़कियों के मुजरे के बाद अब एक नया वीडियो.. हर कपडे की दुकान पर चेंजिंग रूम उपलब्ध है मगर यहाँ इस लड़की ने हदे ही पर कर दी। संभवत: वीडियो भी खुद बनवाई या किसी ने बनाई.. यह वीडियो अब वायरल है।#viralvideo pic.twitter.com/XJfsKVchpR
— TRUE STORY (@TrueStoryUP) April 9, 2024
ಇದೀಗ @TrueStoryUP ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಏಪ್ರಿಲ್ 09ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಮಹಿಳೆ ಪುರುಷ ಸಿಬ್ಬಂದಿಯ ಮುಂದೆ ಬಟ್ಟೆ ಬಿಚ್ಚಿದಂತೆ, ಆಕೆಯ ಜಾಗದಲ್ಲಿ ಪುರುಷರು ಯಾರದಾರೂ ಮಹಿಳಾ ಸಿಬ್ಬಂದಿಯ ಮುಂದೆ ಬಟ್ಟೆ ಬಿಚ್ಚಿ ಟ್ರಯಲ್ ನೋಡಿದ್ದರೆ ಆತನ ಸ್ಥಿತಿ ಈಗ ಹೇಗಿರುತ್ತಿತ್ತುಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನಿಸಿದ್ದಾರೆ. ಪುರುಷ ಸಿಬ್ಬಂದಿಗಳ ಮುಂದೆ ಮಹಿಳೆಯ ಅಸಭ್ಯ ವರ್ತನೆ ತೋರಿದ ಯುವತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.