ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? – ಅರ್ಜಿ ಶುಲ್ಕ ಎಷ್ಟು ಗೊತ್ತಾ?
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ರಾಜ್ಯಾದ್ಯಂತ ಶೇಕಡಾ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳಿಗೆ ತಮಗೆ ಬರಬೇಕಾದ ಅಂಕ ಬಂದಿಲ್ಲ ಅಥವಾ ಬಂದಿರುವ ಅಂಕಗಳ ಬಗ್ಗೆ ಸಂದೇಹಗಳಿರುತ್ತದೆ. ಇದೀಗ ಇಂತಹ ಗೊಂದಲಗಳಿದ್ದರೆ ಮರು ಮೌಲ್ಯಮಾಪನ ಮಾಪನ ಮಾಡಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮೌಲ್ಯಮಾಪನ ಮಂಡಳಿ ಹೇಳಿದೆ.
ಇದನ್ನೂ ಓದಿ: ಆರ್ಸಿಬಿ & ಪಂಜಾಬ್ ಟೀಮ್ ಪಾಲಿಗೆ ಕ್ಯಾಪ್ಟನ್ ಗಳೇ ದುಷ್ಮನ್ ಗಳಾದ್ರಾ?
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಏಪ್ರಿಲ್ 16ರ ತನಕ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಏಪ್ರಿಲ್ 19ರ ತನಕ, ಮತ್ತು ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಏಪ್ರಿಲ್ 14 ರಿಂದ 20ರವರೆಗೆ ಅವಕಾಶವಿದೆ.
ದ್ವೀತಿಯ ಪಿಯುಸಿ ಪರೀಕ್ಷೆ 1ರ ವಿದ್ಯಾರ್ಥಿಗಳ ಫಲಿತಾಂಶ ಪ್ರತಿಯನ್ನು ಕೆಎಸ್ಇಬಿಯು ಈಗಾಗಲೆ ಆಯಾ ಕಾಲೇಜು ಮಂಡಳಿಗಳಿಗೆ ಕಳುಹಿಸಿದೆ. ಇನ್ನು ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವವರು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಮಂಡಳಿಯು, kseab.karnataka.gov.inಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಮರುಮೌಲ್ಯಮಾಪನ ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್ಸೈಟ್ – kseab.karnataka.gov.in ಗೆ ಭೇಟಿ ನೀಡಿ
ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಫಾರ್ಮ್ ಡೌನ್ಲೋಡ್ ಮಾಡಿ
ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪಿಡಿಎಫ್ ನ್ನು ಸ್ವೀಕರಿಸುತ್ತಾರೆ. ನಂತರ ಅವರು ಮರುಪರಿಶೀಲಿಸಲು ಬಯಸುವ ಉತ್ತರಗಳನ್ನು ಶಾರ್ಟ್ಲಿಸ್ಟ್ ಮಾಡಬಹುದು. ಮರುಮೌಲ್ಯಮಾಪನ ಅರ್ಜಿಯನ್ನು ಇದೇ ರೀತಿ ಭರ್ತಿ ಮಾಡಿ. ಪ್ರತಿ ವಿಷಯದ ಸ್ಕ್ಯಾನ್ ಮಾಡಿದ ಪ್ರತಿಗೆ 530ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಮೌಲ್ಯಮಾಪನಕ್ಕೆ 1,670 ರೂಪಾಯಿ ನಿಗದಿ ಮಾಡಲಾಗಿದೆ.