ಸಿಎಸ್‌ಕೆ ಎದುರು ಕೆಕೆಆರ್ ಸೆಣಸಾಟ – ಸೋಲಿನ ಸುಳಿಯಿಂದ ಹೊರಬರುತ್ತಾ ಚೆನ್ನೈ ಟೀಮ್
ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು, ಎರಡು ಗೆಲುವು. ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರೋ ಸಿಎಸ್‌ಕೆ ತಂಡಕ್ಕೆ ಗೆಲುವೇ ಸವಾಲಾಗಿದೆ. ಯಾಕೋ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡ ಡಲ್ ಆಗಿಯೇ ಇದೆ. ಇವತ್ತು ಸಿಎಸ್‌ಕೆ ಟೀಮ್ ಬಲಿಷ್ಠ ಕೆಕೆಆರ್ ಜೊತೆ ಸೆಣಸಾಟ ನಡೆಸಲಿದೆ. ಕೊನೇ ಎರಡು ಪಂದ್ಯಗಳಲ್ಲಿ ಸೋತ ಚೆನ್ನೈ ಟೀಮ್‌ಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಕೂಡಾ ಇದೆ. ಶಿವಂ ದುಬೆ ಈ ಮೆಗಾ ಬ್ಯಾಟಲ್ನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ ಅನ್ನೋದು ಬಿಟ್ರೆ ಸಿಎಸ್‌ಕೆ ಟೀಮ್ ಯಾಕೋ ಈ ಸೀಸನ್‌ನಲ್ಲಿ ಅಬ್ಬರಿಸುತ್ತಿಲ್ಲ.
ಇದನ್ನೂ ಓದಿ: ಸಾಧನೆಗಳ ಶಿಖರ ರೋಹಿತ್ ಶರ್ಮಾ – 10 ವರ್ಷಗಳ ಕಾಲ ಎಂಐ ತಂಡದ ನಾಯಕನಾಗಿದ್ದ ಹಿಟ್‌ಮ್ಯಾನ್!
ಇತ್ತ ಕೆಕೆಆರ್ ಆಡಿರುವ ಎಲ್ಲಾ 3 ಪಂದ್ಯಗಳನ್ನು ಗೆದ್ದಿದ್ದು ಸಿಎಸ್‌ಕೆ ಎದುರು ಗೆಲುವಿನ ಓಟ ಮುಂದುವರೆಸೋ ಜೋಶ್‌ನಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ಶ್ರೇಯಸ್ ಅಯ್ಯರ್ ಪಡೆ ಜಯ ಗಳಿಸೋ ಉತ್ಸಾಹದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಮುಖಾಮುಖಿ ಅಂಕಿಅಂಶಗಳನ್ನು ನೋಡೋದಾದ್ರೆ, ಸಿಎಸ್‌ಕೆ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 28 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಚೆನ್ನೈ 18 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ 9 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಚೆಪಾಕ್ ಸ್ಟೇಡಿಯಂನಲ್ಲಿ ಉಭಯ ತಂಡಗಳು 10 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಸಿಎಸ್‌ಕೆ 7 ಹಾಗೂ ಕೆಕೆಆರ್ 3 ಪಂದ್ಯಗಳನ್ನು ಗೆದ್ದಿದೆ.