ಬುಮ್ರಾ ಲವ್ವಲ್ಲಿ ಬಿದ್ದಿದ್ದು ಹೇಗೆ? – ಸೋಷಿಯಲ್ ಮೀಡಿಯಾ ಲವ್ ಕಹಾನಿ!
ಜಸ್ಪ್ರೀತ್ ಬುಮ್ರಾ.. ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಾಟ್ ಫೇವರೇಟ್ ವೇಗದ ಬೌಲರ್… ಬೂಮ್ ಬೂಮ್ ಬೂಮ್ರಾ ಎಂದು ಅಭಿಮಾನಿಗಳ ಬಾಯಲ್ಲಿ ಕರೆಸಿಕೊಳ್ಳುವ ಬೂಮ್ರ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಬೌಲರ್.. ಆದ್ರೆ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ಭಯ ಹುಟ್ಟಿಸುವ ಬುಮ್ರಾ ತನ್ನ ಬಾಳ ಸಂಗಾತಿಯ ಹೃದಯ ಗೆದ್ದ ರೀತಿ ಮಾತ್ರ ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ..
ಇದನ್ನೂ ಓದಿ: ರಾಮಾಯಣ ಶೂಟಿಂಗ್‌ನ ಫೋಟೋ ಲೀಕ್ – ಶೂಟಿಂಗ್ ವೇಳೆ ಮೊಬೈಲ್ ನಿಷೇಧ
ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈಗ ವಿಶ್ವದ ನಂಬರ್ ವನ್ ಬೌಲರ್.. ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನಕ್ಕೆ ಏರಿರುವ ಬೂಮ್ರಾ, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅಷ್ಟೇ ಅಪಾಯಕಾರಿ ಬೌಲರ್.. ಆದ್ರೆ, ಬೌಲಿಂಗ್‌ನಲ್ಲಿ ಎದುರಾಳಿಯನ್ನೇ ಸ್ಟನ್ ಆಗಿಸೋ ಬೂಮ್ರಾ ಹಾರ್ಟ್‌ನಲ್ಲಿ ಪ್ರೀತಿ ಚಿಗುರಿದೆ. ಕ್ರಿಕೆಟ್ ಲೋಕದಲ್ಲಿ ವಿಹರಿಸೋ ಬೂಮ್ರಾ ಪ್ರೇಮಲೋಕಕ್ಕೆ ಬಂದರೆ ಲವ್ವರ್ ಬಾಯ್. ನಂಬರ್ ಒನ್ ಬೌಲರ್‌ನ ಲವ್ ಸ್ಟೋರಿ ಯಾವ ಸಿನಿಮಾ ಕಥೆಗೆ ಕಮ್ಮಿಯಿಲ್ಲ.
ಬೂಮ್ರಾ ಹಾಗೂ ಸಂಜನಾ ಮೊದಲ ಬಾರಿಗೆ 2017 ರಲ್ಲಿ ಐಪಿಎಲ್ ಸಮಯದಲ್ಲಿ ಭೇಟಿಯಾಗಿದ್ದರು. ಸ್ವಲ್ಪ ನಾಚಿಕೆಯ ಸ್ವಭಾವದ ಬುಮ್ರಾ ಕಣ್ಣಿಗೆ, ಮೊದಲ ಭೇಟಿಯಲ್ಲಿ ಸಂಜನಾ ತುಂಬಾ ದುರಾಹಂಕಾರಿಯಂತೆ ಕಂಡಿದ್ದರಂತೆ.. ಸೆಲೆಬ್ರಿಟಿ ಆ್ಯಂಕರ್ ಆಗಿದ್ದ ಸಂಜನಾ ಓವರ್ ಆಟಿಟ್ಯೂಡ್ ಇರಬೇಕು ಎಂಬ ಅಭಿಪ್ರಾಯ ಮೂಡಿತ್ತು ಎನ್ನುವುದನ್ನು ಸ್ವತಃ ಬುಮ್ರಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಆದ್ರೆ ಈ ವೇಗಿಯನ್ನು ನೋಡಿದ್ದ ಸಂಜನಾ ಮನಸ್ಸಿನಲ್ಲೂ ನನ್ ಕನಸಿನ ಹುಡುಗ ಇವನೇ ಅಂತ ಅನ್ನಿಸಿದೆ.. ಹಾಗಿದ್ದರೂ ಹೆಚ್ಚಾಗಿ ತನ್ನ ಜೊತೆ ಮಾತಾಡದ ಬುಮ್ರಾನನ್ನು ಕ್ರಿಕೆಟ್ ಸೆಲೆಬ್ರಿಟಿ ಎಂಬ ದುರಹಂಕಾರ ತಲೆಯಲ್ಲಿ ತುಂಬ್ಕೊಂಡಿದೆ ಎಂದು ಸಂಜನಾ ಕೂಡ ಅಂದ್ಕೊಂಡಿದ್ದರಂತೆ.. ಆದ್ರೆ ನೇರವಾಗಿ ಭೇಟಿಯಾದಾಗ ಜಾಸ್ತಿ ಮಾತಾಡದಿದ್ದರೂ ನಂತರ ಬುಮ್ರಾ ಮೆಲ್ಲನೆ ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಜೊತೆ ಕನೆಕ್ಟ್ ಆಗಿದ್ದಾರೆ.. ಸಂಜನಾ ಕೂಡ ಸೋಷಿಯಲ್ ಮೀಡಿಯಾದಲ್ಲೇ ಬುಮ್ರಾರನ್ನು ಹೆಚ್ಚು ಅರ್ಥ ಮಾಡ್ಕೊಂಡು, ಮುಕ್ತವಾಗಿ ತಮ್ಮ ಮನಸ್ಸಿನ ಮಾತುಗಳನ್ನು ಶೇರ್ ಮಾಡ್ಕೊಂಡಿದ್ದಾರೆ.. ಹೀಗೆ ಮೊದ್ಲು ಸೋಶಿಯಲ್ ಮೀಡಿಯಾ ಮೂಲಕ ಸ್ನೇಹಿತರಾದವರು ನಂತರ ನಿಧಾನಕ್ಕೆ ಪ್ರೇಮ ನೌಕೆ ಏರಿದ್ದರು. ಕ್ರಮೇಣ ಪರಸ್ಪರರ ಮೇಲಿನ ಪ್ರೀತಿಯನ್ನು 2019 ರಲ್ಲಿ ಹೇಳಿಕೊಂಡರು ಎಂದು ಬುಮ್ರಾ ರಿವೀಲ್ ಮಾಡಿದ್ದಾರೆ.. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್’ಗಳನ್ನು ಯಾರ್ಕರ್’ನಲ್ಲಿ ಬೌಲ್ಡ್ ಮಾಡಿದ ಬುಮ್ರಾ, ಸಂಜನಾ ಮೇಲಿನ ಪ್ರೀತಿಯಿಂದ ಸ್ವತಃ ಕ್ಲೀನ್ ಬೌಲ್ಡ್ ಆಗಿದ್ದರು.
ಇದಾದ ಬಳಿಕ ಬುಮ್ರಾ ಮತ್ತು ಸಂಜನಾ ಎರಡು ವರ್ಷಗಳ ಕಾಲ ರಹಸ್ಯವಾಗಿ ಡೇಟಿಂಗ್ ಮಾಡ್ತಾ ಬಂದಿದ್ರು. ಅವರಿಬ್ಬರು ಡೇಟಿಂಗ್ ಅನ್ನು ಎಷ್ಟು ಸೀಕ್ರೆಟ್ ಆಗಿ ಮೇಂಟೇನ್ ಮಾಡಿದ್ದರು ಅಂದ್ರೆ ಬುಮ್ರಾ ಸ್ನೇಹಿತರಿಗಾಗ್ಲೀ, ಸಂಜನಾ ಫ್ರೆಂಡ್ಸ್‌ಗಾಗ್ಲಿ ಇವರಿಬ್ಬರ ನಡುವೆ ಒಡನಾಟ ಇದೆ ಎನ್ನುವುದು ಗೊತ್ತೇ ಇರಲಿಲ್ಲ.. ಆದ್ರೆ ಪ್ರೀತಿಯಲ್ಲಿ ತೇಲುತ್ತಿದ್ದ ಜೋಡಿ. 2021 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಬುಮ್ರಾ ಬಿಸಿಸಿಐನಿಂದ ದೀರ್ಘಾವಧಿಯ ವಿಶ್ರಾಂತಿಯನ್ನು ಪಡೆದಿದ್ದರು. ಇದೇ ಸಂದರ್ಭದಲ್ಲಿ ಅವರ ಮದುವೆಯ ವಿಷಯ ಬಹಿರಂಗವಾಯಿತು. ಮಾರ್ಚ್ 15, 2021 ರಂದು, ಬುಮ್ರಾ ಮತ್ತು ಸಂಜನಾ ಮದುವೆಯಾದರು.
ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್. ಸ್ಟಾರ್ ಸ್ಪೋರ್ಟ್ಸ್’ನ ಪ್ರಸಿದ್ಧ ಆಂಕರ್. ವರ್ಲ್ಡ್ ಕಪ್ 2019 ರ ಸಮಯದಲ್ಲಿ ‘ಮ್ಯಾಚ್ ಪಾಯಿಂಟ್’ ಮತ್ತು ‘ಚೀಕಿ ಸಿಂಗಲ್ಸ್’ ನಂತಹ ಪ್ರಸಿದ್ಧ ಶೋಗಳನ್ನು ಸಂಜನಾ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆಸಿಕೊಟ್ಟಿದ್ದಾರೆ. ಸಂಜನಾ ಗಣೇಶನ್ ಕೆಕೆಆರ್ ಟಿವಿಯ ಪ್ರೀಮಿಯರ್ ಹೋಸ್ಟ್ ಕೂಡ ಆಗಿದ್ದಾರೆ.
ಸಂಜನಾ ಗಣೇಶನ್ ಸ್ಪೋರ್ಟ್ಸ್ ಆಂಕರ್ ಆಗುವ ಮೊದಲು ಮಾಡೆಲಿಂಗ್ ಲೋಕದಲ್ಲೂ ಸಾಕಷ್ಟು ಹೆಸರು ಗಳಿಸಿದ್ದರು. ಪ್ರಸಿದ್ಧ ಶೋ ಮಿಸ್ ಇಂಡಿಯಾದಲ್ಲಿ ಸಂಜನಾ ಫೈನಲ್ ತಲುಪಿದ್ದರು. ಅವರ ಕ್ರಿಕೆಟ್ ಜ್ಞಾನ ಅದ್ಭುತವಾಗಿದೆ ಎಂದು ಬುಮ್ರಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಬೂಮ್ರಾ ದಂಪತಿಗೆ ಅಂಗದ್ ಜಸ್ಪ್ರೀತ್ ಬುಮ್ರಾ ಎಂಬ ಮಗ ಕೂಡ ಇದ್ದಾನೆ..