ಬೆಂಗಳೂರು ಈಗ ಬೆಂದಕಾಳೂರು! – 8 ವಲಯಗಳಲ್ಲಿ ದಾಖಲೆಯ ತಾಪಮಾನ
ಸಿಲಿಕಾನ್ ಸಿಟಿ ಬೆಂಗಳೂರು ಈಗ ಬೆಂದಕಾಳೂರು ಆಗಿದೆ. ತಾಪಮಾನ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ಎದುರಾಗಿದೆ. ಬರೋಬ್ಬರಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಏರಿಕೆಯಾಗಿದ್ದು, ಮೂರು ವರ್ಷಗಳ ದಾಖಲೆ ಸರಿಗಟ್ಟಿದೆ.
ಇದನ್ನೂ ಓದಿ: ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ.. ಕರ್ನಾಟಕದಲ್ಲಿ ಗೆಲ್ಲೋದ್ಯಾರು?
ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಗೆ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಒಟ್ಟು ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಆದರೆ ಬೆಂಗಳೂರಿನ ಎಂಟು ವಲಯಗಳಲ್ಲಿ ತಾಪಮಾನ ದಾಖಲೆ ಬರೆದಿದೆ. ಆರ್ಆರ್ ನಗರದಲ್ಲಿ 38.60 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಪೂರ್ವ ದಲ್ಲಿ 37 ಡಿಗ್ರಿ ಸೆಲ್ಸಿಯಸ್, ಯಲಹಂಕದಲ್ಲಿ 34.90 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ದಕ್ಷಿಣದಲ್ಲಿ 35.90 ಡಿಗ್ರಿ ಸೆಲ್ಸಿಯಸ್, ದಾಸರಹಳ್ಳಿಯಲ್ಲಿ 36.60 ಡಿಗ್ರಿ ಸೆಲ್ಸಿಯಸ್, ಬೊಮ್ಮನಹಳ್ಳಿಯಲ್ಲಿ 36.70 ಡಿಗ್ರಿ ಸೆಲ್ಸಿಯಸ್, ಮಹಾದೇವಪುರದಲ್ಲಿ 34.80 ಡಿಗ್ರಿ ಸೆಲ್ಸಿಯಸ್, ಪಶ್ಚಿಮ ವಲಯದಲ್ಲಿ 35.40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಮರ ಗಿಡಗಳು ಕಡಿಮೆ ಇದೆಯೋ ಅಲ್ಲಿ ತಾಪಮಾನ ಏರಿಕೆ ಆಗಿದೆ. ಎಲ್ಲೆಲ್ಲಿ ಮರ ಗಿಡಗಳು ಇವೆ ಆ ಭಾಗದಲ್ಲಿ ತಾಪಮಾನ ಕಡಿಮೆ ಇದೆ. ಗಾಳಿಯ ವೇಗ ಕೂಡ ಕಡಿಮೆ ಇದೆ. ಜನರು ಕೂಡ ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕು. ಬಿಸಿಲಿನಿಂದ ಎಚ್ಚರ ವಹಿಸಬೇಕು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.