ಕೆಲವರಿಗೆ ಮಾತ್ರ ಸೊಳ್ಳೆ ಜಾಸ್ತಿ ಕಚ್ಚೋದು ಯಾಕೆ?
ನಿಮ್ಮ ವಾಸನೆ ಇಷ್ಟವಾದರೆ ಸೊಳ್ಳೆ ಕಚ್ಚೋದು ಗ್ಯಾರಂಟಿ..!

ಕೆಲವರಿಗೆ ಮಾತ್ರ ಸೊಳ್ಳೆ ಜಾಸ್ತಿ ಕಚ್ಚೋದು ಯಾಕೆ?ನಿಮ್ಮ ವಾಸನೆ ಇಷ್ಟವಾದರೆ ಸೊಳ್ಳೆ ಕಚ್ಚೋದು ಗ್ಯಾರಂಟಿ..!

ಸೊಳ್ಳೆ ಅಂದ್ರೆ ಈಗೀಗ ಹೆದರಿಕೆಯೇ ಜಾಸ್ತಿ. ಸೊಳ್ಳೆ ಕಚ್ಚಿದ್ರೆ ಸಹಿಸಿಕೊಳ್ಳೋದು ದೊಡ್ಡ ವಿಚಾರವಲ್ಲ ಬಿಡಿ. ಆದ್ರೆ, ಆ ಸೊಳ್ಳೆಯಿಂದ ಕಚ್ಚಿಸಿಕೊಂಡ ಮೇಲೆ ಯಾವ ರೋಗ ಯಾವಾಗ ಕಾಣಿಸಿಕೊಳ್ಳುತ್ತೋ ಅನ್ನೋ ಭಯವಂತೂ ಇದ್ದೇ ಇರುತ್ತೆ. ಅದರಲ್ಲೂ, ನೀವೇನಾದ್ರೂ ಸೊಳ್ಳೆಗಳ ಅಯಸ್ಕಾಂತ ಕೇಂದ್ರವೇ ಆಗಿದ್ರೆ, ಇಲ್ವವೇ ಜನ ಜಂಗುಳಿಯಲ್ಲಿ ಅತೀ ಹೆಚ್ಚು ಬಾರಿ  ಸೊಳ್ಳೆಗಳಿಂದ ಕಚ್ಚಿಸಿಕೊಂಡ ಅನುಭವ ನಿಮಗೇನಾದ್ರೂ ಆಗಿದ್ರೆ ಈ ಸುದ್ದಿಯನ್ನು ಖಂಡಿತಾ ಓದಲೇಬೇಕು. ನ್ಯೂಯಾರ್ಕ್ ನ ರಾಕ್‌ಫೆಲ್ಲರ್ ಯೂನಿವರ್ಸಿಟಿಯವರು ನಡೆಸಿದ ಅಧ್ಯಯನದಲ್ಲಿ ಇದರ ಬಗೆಗಿನ ಆಸಕ್ತಿದಾಯಕ ಸಂಗತಿಯೊಂದು ಹೊರಬಂದಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಕಾಡುತ್ತಿದೆ ಕೆಂಗಣ್ಣು ಸೋಂಕಿನ ಕಿರಿಕಿರಿ

ಮನುಷ್ಯನ ಚರ್ಮದಲ್ಲಿ ಇರುವ ಕಾರ್ಬೋಕ್ಸಿಲಿಕ್ ಆ್ಯಸಿಡ್‌ನಿಂದ ಬಿಡುಗಡೆಯಾಗುವ ವಾಸನೆಯೂ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತದೆ. ಮನುಷ್ಯನ ಚರ್ಮದಲ್ಲಿರುವ ಅರೋಗ್ಯಕರ ಬ್ಯಾಕ್ಟೀರಿಯವೂ ಈ ಆಸಿಡ್ ತಿಂದು ಈ ನಿರ್ದಿಷ್ಟ ವಾಸನೆಯನ್ನ ಬಿಡುಗಡೆ ಮಾಡುತ್ತದೆಯಂತೆ. ಮನುಷ್ಯನ ಚರ್ಮ ದಲ್ಲಿರುವ ಈ ಆಸಿಡ್ ಮಟ್ಟ ಒಬ್ಬರಿಂದ ಇನ್ನೊಬ್ಬರಿಗೆ ವ್ಯತ್ಯಾಸವಿರುತ್ತದೆ. ಒಂದು ವೇಳೆ ನಿಮ್ಮ ಚರ್ಮದಲ್ಲಿ ಕಾರ್ಬೋಕ್ಸಿಲಿಕ್ ಆ್ಯಸಿಡ್ ಮಟ್ಟ ಜಾಸ್ತಿ ಇದ್ದರೆ ನೀವು ಸೊಳ್ಳೆಗಳ ಪಿಕ್ನಿಕ್ ಸ್ಪಾಟ್ ಆಗೋದಂತೂ ಗ್ಯಾರಂಟಿ. ಅಂದಹಾಗೆ ಇದು, ಜಿಕಾ, ಡೆಂಗ್ಯೂ, ಜ್ವರಗಳಿಗೆ ಕಾರಣವಾಗುವಂತಹ ಸೊಳ್ಳೆಗಳನ್ನ ಬಳಸಿ ಮಾಡಿದ ಅಧ್ಯಯನವಾಗಿದೆ. ಕೆಲವರಿಗೆ ಮಾತ್ರ ಯಾಕೆ ಸೊಳ್ಳೆಯಗಳು ಜಾಸ್ತಿ ಕಚ್ಚುತ್ತವೆ ಎನ್ನುವುದಕ್ಕೆ ಈ ಅಧ್ಯಯನ ಹೊಸ ಸಾಕ್ಷ್ಯ ಒದಗಿಸಿದೆ. ಸೊಳ್ಳೆ ಕಚ್ಚುವುದಕ್ಕೆ ಇದು ಕಾರಣವಾಗಿದ್ದರೂ ಸೊಳ್ಳೆಗಳಿಂದ ಬಚಾವಾಗಲು ಮಾತ್ರ ಎಚ್ಚರಿಕೆಯ ಕ್ರಮಗಳನ್ನು ಎಲ್ಲರೂ ಪಾಲಿಸಿಕೊಳ್ಳುವುದು ಉತ್ತಮ.

suddiyaana