ಕಪ್ ಗೆಲ್ಲೋ ಮೊದಲು ಪ್ಲೇ ಆಫ್‌ಗೆ ರೀಚ್ ಆಗಿ – ಆರ್‌ಸಿಬಿ ಫ್ಯಾನ್ಸ್ ಕೋರಿಕೆ ಈಡೇರುತ್ತಾ?

ಕಪ್ ಗೆಲ್ಲೋ ಮೊದಲು ಪ್ಲೇ ಆಫ್‌ಗೆ ರೀಚ್ ಆಗಿ – ಆರ್‌ಸಿಬಿ ಫ್ಯಾನ್ಸ್ ಕೋರಿಕೆ ಈಡೇರುತ್ತಾ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮೊದಲ ಪಂದ್ಯ ದೇವರಿಗೆ ಅರ್ಪಣೆ ಮಾಡಿದ್ರೂ ಎರಡನೇ ಪಂದ್ಯದಲ್ಲಿ ಗೆದ್ದು ವಿಜಯ ಪತಾಕೆ ಹಾರಿಸಿತ್ತು. ನಂತರ ಮತ್ತೆ ಸೋಲಿನ ಹಾದಿಗೆ ಮುಖ ಮಾಡಿತ್ತು. ಮೂರು ಪಂದ್ಯದಲ್ಲಿ ಒಂದೇ ಒಂದು ಗೆಲುವು ಸಾಧಿಸಿರೋ ಆರ್‌ಸಿಬಿಗೆ ಇವತ್ತು ಇಂಪಾರ್ಟೆಂಟ್ ಮ್ಯಾಚ್.

ಇದನ್ನೂ ಓದಿ: ಗಂಭೀರ್-ಕೊಹ್ಲಿ ದೋಸ್ತಿಯಾದ್ರಾ? – RCB ಕಂದ ಕೊಹ್ಲಿ ಎಂದಿದ್ಯಾರು?

ಪಾಯಿಂಟ್ ಪಟ್ಟಿಯಲ್ಲಿ ಜಂಪ್ ಆಗ್ಬೇಕಂದ್ರೆ ಲಕ್ನೋ ಸೂಪರ್ ಜೈಂಟ್ಸ್ ಎದುರು ವಿನ್ ಆಗ್ಲೇಬೇಕು. ಆದ್ರೆ, ಮ್ಯಾಚ್ ಗೂ ಮುನ್ನ ಆರ್‌ಸಿಬಿ ಟೀಮ್‌ಗೆ ಮೇಜರ್ ಸರ್ಜರಿಯಂತೂ ಆಗ್ಲಬೇಕು. ಬೌಲಿಂಗ್ ವಿಭಾಗದಲ್ಲಿ ಚೇಂಜಸ್ ಬೇಕು ಮತ್ತು ಟೀಮ್ ಗೇಮ್ ಬೇಕೇ ಬೇಕು. ಆರ್‌ಸಿಬಿಗೆ ಈ ಬಾರಿ ಕಪ್​ ಗೆಲ್ಲೋ ಗುರಿಯೇನೋ ಇದೆ. ಆದ್ರೆ, ಕೇವಲ ಕಿಂಗ್ ಕೊಹ್ಲಿ ದರ್ಬಾರ್ ಮಾತ್ರ ಕಾಣಿಸ್ತಿದೆ. ಆರ್‌ಸಿಬಿ ನೆಚ್ಚಿಕೊಂಡಿರೋದು ಒಬ್ಬರನ್ನ ಮಾತ್ರ. ಇದನ್ನ ನೋಡಿದ್ರೆ, ಕಪ್​ ಗೆಲ್ಲೋದಲ್ಲ. ಪ್ಲೇ ಆಫ್​ಗೆ ರೀಚ್​ ಆಗೋದು ಕಷ್ಟ ಅನ್ನಿಸ್ತಿದೆ. ಕ್ರಿಕೆಟ್ ಅನ್ನೋದೇ ಟೀಮ್ ಗೇಮ್​.. ಇಲ್ಲಿ ಒಬ್ಬನೇ ಪ್ಲೇಯರ್​ ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲೋದೂ ಉಂಟು. ಸಿಂಗಲ್ ಮಿಸ್ಟೇಕ್​​ಗೆ ಮ್ಯಾಚ್ ಸೋಲೋದು ಉಂಟು. ಆದ್ರೆ, ಎಲ್ಲ ಮ್ಯಾಚ್​ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ವಿನ್ ಆಗೋಕೆ ಸಾಧ್ಯವೇ ಇಲ್ಲ. ಈ ಸಿಂಪಲ್​ ಲಾಜಿಕ್​ ಆರ್​​ಸಿಬಿಗೆ ಅರ್ಥವಾಗ್ತಿಲ್ವಾ?  8 ಮಂದಿಯ ಫ್ಲಾಪ್ ಶೋ​..​ ಕಿಂಗ್​​ ಕೊಹ್ಲಿ ಎಂಬ ಒಂಟಿ ಸಿಂಹದ ಘರ್ಜನೆ. ಇದೇ ಆರ್‌ಸಿಬಿ ಮ್ಯಾಚ್ ಎಂಬಂತಾಗಿದೆ.

3 ಪಂದ್ಯಗಳನ್ನಾಡಿರುವ ಆರ್​ಸಿಬಿ, ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಈ 3 ಪಂದ್ಯಗಳಲ್ಲಿ 8 ಮಂದಿ ಬ್ಯಾಟರ್​ಗಳು ಬ್ಯಾಟ್ ಬೀಸಿದ್ದಾರೆ. ಒಟ್ಟು 498 ರನ್ ಕಲೆಹಾಕಿದ್ದಾರೆ. ಆದ್ರೆ, ಈ 8 ಮಂದಿ ಬ್ಯಾಟರ್​ಗಳ ಪೈಕಿ ಅರ್ಧಶತಕ ಗಳಿಸಿದ ಒನ್​ ಆ್ಯಂಡ್ ಒನ್ಲಿ ಬ್ಯಾಟ್ಸ್​​ಮನ್​ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ. ಪ್ರಸಕ್ತ ಸೀಸನ್​ನಲ್ಲಿ ಆರ್​ಸಿಬಿ ಬ್ಯಾಟರ್ಸ್​ ಈ ಸೀಸನ್​​ನಲ್ಲಿ ಆರ್​ಸಿಬಿ ಗಳಿಸಿರುವ 498 ರನ್​ಗಳ ಪೈಕಿ ಕೊಹ್ಲಿಯ ಬ್ಯಾಟ್​ನಿಂದಲೇ 181 ರನ್​ಗಳು ಸಿಡಿದಿವೆ. 128 ಎಸೆತ ಎದುರಿಸಿರುವ ವಿರಾಟ್, 141.41ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ದಿನೇಶ್​ 44 ಎಸೆತಗಳಿಂದ 195.45ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ರೆ. ಉಳಿದ ಬ್ಯಾಟರ್​ಗಳು 184 ಎಸೆತಗಳಿಂದ ಕೇವಲ 230 ರನ್ ಗಳಿಸಿದ್ದಾರೆ. ಒಂದೇ ಒಂದು ಫಿಫ್ಟಿ ಸಿಡಿಸದ ಇತರೆ ಬ್ಯಾಟರ್ಸ್​ ಕೇವಲ 125ರ ಸ್ಟ್ರೈಕ್​ರೇಟ್​ನಲ್ಲಿ ರನ್​ಗಳಿಸಿದ್ದಾರೆ. ಚೆನ್ನೈ ಎದುರಿನ ಮೊದಲ ಪಂದ್ಯವೊಂದು ಬಿಟ್ಟರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವಿರಾಟ್ ಮೇಲೆ ಡಿಪೆಂಡ್​​ ಆಗಿದೆ. ಪಂಜಾಬ್ ಎದುರು ಚೇಸಿಂಗ್ ಮಾಸ್ಟರ್​ 77 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರೆ. ಕೆಕೆಆರ್ ಎದುರು ಏಕಾಂಗಿ ಹೋರಾಟ ನಡೆಸಿ ತಂಡದ ಮಾನ ಕಾಪಾಡಿದ್ರು. ಈ ಮೂರು ಮ್ಯಾಚ್​​ಗಳಲ್ಲಿ ವಿರಾಟ್​ ಜೊತೆ ತಂಡಕ್ಕೆ ಒಂದಿಷ್ಟು ಭರವಸೆ ಮೂಡಿಸಿದ್ದು ದಿನೇಶ್​ ಕಾರ್ತಿಕ್ ಮಾತ್ರ. ಇವರಿಬ್ಬರನ್ನ ಬಿಟ್ರೆ ಉಳಿದೆಲ್ಲ ಬ್ಯಾಟರ್​ಗಳು ಇದ್ದು, ಇಲ್ಲದಂತಿದ್ದಾರೆ. ಮ್ಯಾಚ್ ಫಿನಿಷರ್​ಗಳಾಗಿ ಗುರುತಿಸಿಕೊಳ್ಳಬೇಕಾದ ಗ್ಲೆನ್ ಮ್ಯಾಕ್ಸ್​ವೆಲ್​, ಕ್ಯಾಮರೂನ್​ ಗ್ರೀನ್​ ಪರದಾಡ್ತಿದ್ರೆ, ರಜತ್ ಪಟಿದಾರ್​ ನನಗೂ ಬ್ಯಾಟಿಂಗ್​ಗೂ ಸಂಬಂಧವೇ ಇಲ್ಲ ಎಂಬಂತೆ ಬ್ಯಾಟ್​ ಬೀಸ್ತಿದ್ದಾರೆ. ಇವತ್ತು ಎಲ್‌ಎಸ್‌ಜಿ ಎದುರು ಆರ್‌ಸಿಬಿ ಬ್ಯಾಟರ್‌ಗಳು ಸೌಂಡ್ ಮಾಡದೇ ಇದ್ರೆ, ಈ ಸಲ ಕಪ್ ಬಿಡಿ, ಪ್ಲೇ-ಆಫ್​​ಗೂ ಆರ್​​ಸಿಬಿ ಎಂಟ್ರಿ ಕೊಡಲ್ಲ.

ಇನ್ನು ಬೌಲಿಂಗ್ ವಿಭಾಗದಲ್ಲಿ ನೋಡೋದಾದ್ರೆ, ಕಳೆದ ಮೂರೂ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೀಮರ್ ಅಲ್ಜಾರಿ ಜೋಸೆಫ್ ದುಬಾರಿಯಾದ್ರು. ಜೋಸೆಫ್‌ರ ನೀರಸ ಪ್ರದರ್ಶನದಿಂದ ಇವರು ಪ್ಲೇಯಿಂಗ್ XI ನಿಂದ ಔಟ್ ಆಗುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಸ್ಟಾರ್ ವೇಗಿ ಲಾಕಿ ಫರ್ಗುಸನ್ ಎಂಟ್ರಿಯಾಗಬಹುದು. ಜೊತೆಗೆ ಬೌಲಿಂಗ್ ವಿಭಾಗ ಇನ್ನಷ್ಟೂ ಸ್ಟ್ರಾಂಗ್ ಆಗಬೇಕಿದೆ. ಬ್ಯಾಟಿಂಗ್‌ನಲ್ಲಾದ್ರೆ, ವಿಕೆಗೆ ಡಿಕೆ ಸಾಥ್ ನೀಡಬಹುದು. ಆದ್ರೆ, ಬೌಲರ್ಸ್ ಮಾತ್ರ ಸಿಕ್ಕಾಪಟ್ಟೆ ಡಲ್ ಆಗಿದ್ದಾರೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದೋನೇ ಬಾಸ್. ಸ್ಟೇಡಿಯಂ ಚಿಕ್ಕಾದಾಗಿರೋದ್ರಿಂದ ಸಿಕ್ಸ್, ಫೋರ್‌ಗಳ ಸಿಡಿಲಬ್ಬರ ನಿರೀಕ್ಷೆ ಮಾಡಬಹುದು. ಅದೇನೇ ಇದ್ದರೂ ಕನ್ನಡಿಗ ಕೆ.ಎಲ್ ರಾಹುಲ್ ಬೆಂಗಳೂರಲ್ಲಿ ಆರ್‌ಸಿಬಿಯನ್ನ ಎದುರಿಸ್ತಾರೆ. ಕನ್ನಡಿಗನ ಟೀಮ್‌ಗೆ ಬೆಂಗಳೂರು ಟೀಮ್ ಎದುರಾಳಿ.

Sulekha