ಹಾರ್ದಿಕ್ ಪಡೆಗೆ ಮುಂಬೈನಲ್ಲೂ ಮುಖಭಂಗ – ಮುಂಬೈ ಇಂಡಿಯನ್ಸ್​ಗೆ ಸತತ 3ನೇ ಸೋಲು

ಹಾರ್ದಿಕ್ ಪಡೆಗೆ ಮುಂಬೈನಲ್ಲೂ ಮುಖಭಂಗ – ಮುಂಬೈ ಇಂಡಿಯನ್ಸ್​ಗೆ ಸತತ 3ನೇ ಸೋಲು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹ್ಯಾಟ್ರಿಕ್‌ ಸೋಲನುಭವಿಸಿದೆ. ತವರಿನಲ್ಲೇ ಮುಂಬೈ ತಂಡದ ಹೀನಾಯ ಸೋಲು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇತ್ತ ರಾಜಸ್ಥಾನ್‌ ರಾಯನ್ಸ್‌ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ಮೆಟ್ರೋ ಮಾರ್ಗದಲ್ಲಿ ಮಳೆನೀರು ಕೊಯ್ಲು ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನ

ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ರಾಜಸ್ತಾನ್​ ರಾಯಲ್ಸ್​​​ ಕೇವಲ 15.3 ಓವರ್​ನಲ್ಲಿ 127 ರನ್​ ಗಳಿಸೋ ಮೂಲಕ ಗೆದ್ದು ಬೀಗಿದೆ. ರಾಜಸ್ತಾನ್​ ಪರ ಯಶಸ್ವಿ ಜೈಸ್ವಾಲ್​​ 10, ಜೋಸ್​ ಬಟ್ಲರ್​ 13, ಸಂಜು ಸ್ಯಾಮ್ಸನ್​​ 12, ರಿಯಾನ್​ ಪರಾಗ್​​ 3 ಸಿಕ್ಸರ್​​ ಮತ್ತು 5 ಫೋರ್​ ಸಮೇತ 54 ರನ್​ ಸಿಡಿಸಿದ್ರು. ಆರ್​ ಅಶ್ವಿನ್​ 16, ಶುಭಂ ದುಬೆ 8 ರನ್​ ಸಿಡಿಸಿದ್ರು.

ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​​​ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿತ್ತು. ಹೀಗಾಗಿ ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಮುಂಬೈ ಇಂಡಿಯನ್ಸ್​ ಬಿಗ್​ ಸ್ಕೋರ್​ ಕಲೆ ಹಾಕುವ ಭರದಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮುಂಬೈ ಇಂಡಿಯನ್ಸ್​ ಪರ ಓಪನರ್​ ಆಗಿ ಬಂದ ರೋಹಿತ್​ ಶರ್ಮಾ ಟ್ರೆಂಟ್​ ಬೌಲ್ಟ್​​ ಮೊದಲನೇ ಓವರ್​ನಲ್ಲೇ ಫಸ್ಟ್​ ಬಾಲ್​ಗೆ ಕ್ಯಾಚ್​​ ನೀಡಿ ಡಕೌಟ್​​ ಆದರು. ನಮನ್​​, ಬ್ರೆವೀಸ್​ ಕೂಡ ಡಕೌಟ್​ ಆದ್ರು. ಇಶಾನ್​ ಕಿಶನ್​ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​ ಸಿಡಿಸಿ ಕ್ಯಾಚ್​​ ಕೊಟ್ಟರು.

ಒಂದಷ್ಟು ಓವರ್​ಗಳು ಕ್ರೀಸ್​ನಲ್ಲಿ ನಿಂತು ಆಡಿದ ತಿಲಕ್​ ವರ್ಮಾ 2 ಫೋರ್​ ಸಮೇತ 32 ರನ್​ ಗಳಿಸಿದ್ರು. ಹಾರ್ದಿಕ್​ ಪಾಂಡ್ಯ 6 ಫೋರ್​ ಸಮೇತ 34 ರನ್​ ಬಾರಿಸಿದ್ರು. ಟೀಮ್​ ಡೇವಿಡ್​​ 17, ಪಿಯೂಷ್​​ ಚಾವ್ಲಾ 3, ಗೆರಾಲ್ಡ್​​ 4, ಬೂಮ್ರಾ 8, ಆಕಾಶ್​​ 4 ರನ್​ ಕಲೆ ಹಾಕಿದ್ರು. ಈ ಮೂಲಕತ 20 ಓವರ್​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 125 ರನ್​ ಗಳಿಸಿತ್ತು.

Shwetha M