ಡೆಲ್ಲಿ, ರಾಜಸ್ತಾನ್​ ರಾಯಲ್ಸ್​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್‌ –  ರಾಯಲ್ಸ್‌ಗೆ 12 ರನ್‌ಗಳ ಗೆಲುವು

ಡೆಲ್ಲಿ, ರಾಜಸ್ತಾನ್​ ರಾಯಲ್ಸ್​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್‌ –  ರಾಯಲ್ಸ್‌ಗೆ 12 ರನ್‌ಗಳ ಗೆಲುವು

ಇಂಡಿಯನ್​ ಪ್ರೀಮಿಯರ್​ ಲೀಗ್​ 9 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಜಸ್ತಾನ್​ ರಾಯಲ್ಸ್​​ ಭರ್ಜರಿ ಗೆಲುವು ಸಾಧಿಸಿದೆ. ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ  ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ದೆಹಲಿ ತಂಡವನ್ನು 12 ರನ್ ಗಳಿಂದ ಮಣಿಸಿದೆ.

ಇದನ್ನೂ ಓದಿ: ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ

ಟಾಸ್ ಗೆದ್ದ ದೆಹಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ತಾನ್​ ರಾಯಲ್ಸ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​​ ಪರ ಡೇವಿಡ್​ ವಾರ್ನರ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಎದುರಿಸಿದ 34 ಬಾಲ್​ನಲ್ಲಿ 3 ಸಿಕ್ಸರ್​, 5 ಫೋರ್​ ಸಮೇತ 49 ರನ್​ ಸಿಡಿಸಿದ ವಾರ್ನರ್​ ವಿಕೆಟ್​ ಒಪ್ಪಿಸಿದ್ರು. ಮಿಚೆಲ್​ ಮಾರ್ಷ್​​ 23, ಪಂತ್​​ 28 ರನ್​ ಗಳಿಸಿದ್ರು. ಬಳಿಕ ಬಂದ ಸ್ಟಬ್ಸ್​​ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. 3 ಸಿಕ್ಸರ್​, 2 ಫೋರ್​ ಸಮೇತ 44 ರನ್​​ ಗಳಿಸಿದ್ರು. ಅಕ್ಷರ್​ ಪಟೇಲ್​​ 15 ರನ್​ ಗಳಿಸಿದ್ರೂ ಡೆಲ್ಲಿ 12 ರನ್​ನಿಂದ ಸೋತಿದೆ.

ಟಾಸ್​ ಸೋತರೂ ಬ್ಯಾಟಿಂಗ್​ ಮಾಡಿದ ರಾಜಸ್ತಾನ್​ ರಾಯಲ್ಸ್​ ಪರ ಓಪನರ್​ ಆಗಿ ಬಂದ ಯಶಸ್ವಿ ಜೈಸ್ವಾಲ್​​ 5, ಜೋಸ್​ ಬಟ್ಲರ್​​ 11 ರನ್​ ಮಾತ್ರ ಗಳಿಸಿ ಕೈಕೊಟ್ಟರು. ಸ್ಯಾಮ್ಸನ್​​ ಕೂಡ ಕೇವಲ 15 ರನ್​ಗೆ ಔಟಾದ್ರು. ಬಳಿಕ ಬಂದ ರಿಯಾನ್​ ಪರಾಗ್​​​ ಡೆಲ್ಲಿ ಬೌಲರ್​ಗಳ ಬೆಂಡೆತ್ತಿದ್ರು.

ಅಂದು ಬ್ಯಾಟಿಂಗ್​ ಮಾಡದ ಕಾರಣಕ್ಕೆ ಟ್ರೋಲ್​ ಆಗಿದ್ದ ರಿಯಾಗ್​​ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ 45 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 84 ರನ್​ ಚಚ್ಚಿದ್ರು. ಕೊನೇ ಓವರ್​​ನಲ್ಲಿ ರಿಯಾನ್ ಪರಾಗ್ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಎನ್ರಿಚ್ ನೋಕಿಯಾಗೆ ಬರೋಬ್ಬರಿ 25 ರನ್​ ಸಿಡಿಸಿದ್ರು.

ಅಶ್ವಿನ್​ 29, ಧೃವ್​ ಜುರೆಲ್​ 20, ಹೆಟ್ಮೇರ್​​ 14 ರನ್​ ಗಳಿಸಿದ್ರು. ಆರಂಭಿಕ ಬ್ಯಾಟರ್​ಗಳ ವೈಫಲ್ಯದಿಂದ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಪರಾಗ್​ 84 ರನ್​ ಆಸರೆಯಾಯ್ತು. ಹೀಗಾಗಿ ರಾಜಸ್ತಾನ್​ 185 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

Shwetha M