ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶಾಕಿಂಗ್ ಸುದ್ದಿಯೊಂದಿದೆ. ಈ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳಿಗೆ ಟೋಲ್ ದರ ಹೆಚ್ಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ನನ್ನ ಹೆಣ ಬೀಳಿಸೋಕು ರೆಡಿ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಪ್ರಕಟಣೆ ಹೊರಡಿಸಲಿದೆ. ಟ್ರಕ್, ಬಸ್ಗಳ ಒಂದೇ ಪ್ರಯಾಣಕ್ಕೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಂಗಳೂರೂ-ಮೈಸೂರು ಹೆದ್ದಾರಿಯನ್ನು ಬಳಸುವ ಕಾರುಗಳಿಗೆ ಟೋಲ್ ದರದಲ್ಲಿ 10 ರೂ. ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಹೊಸ ದರ ಅನ್ವಯವಾಗಲಿದೆ. ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾದ ಟೋಲ್ ಶುಲ್ಕ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾ
- ನಾಲ್ಕು ಚಕ್ರವಾಹನ
ಏಕಮುಖ ಪ್ರಯಾಣ – 170 ರೂ.
ದ್ವಿಮುಖ ಪ್ರಯಾಣ – 255 ರೂ.
ತಿಂಗಳ ಪಾಸ್ – 5,715
ಲೋಕಲ್ ತಿಂಗಳ ಪಾಸ್ – 340
- ಎಲ್ಸಿವಿ, ಎಲ್ಜಿವಿ/ಮಿನಿಬಸ್
ಏಕಮುಖ ಪ್ರಯಾಣ – 275 ರೂ.
ದ್ವಿಮುಖ ಪ್ರಯಾಣ – 415 ರೂ.
ತಿಂಗಳ ಪಾಸ್ – 9,230 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
- ಟ್ರಕ್, ಬಸ್ 2 ಎಕ್ಸೆಲ್
ಏಕಮುಖ ಪ್ರಯಾಣ – 580 ರೂ.
ದ್ವಿಮುಖ ಪ್ರಯಾಣ – 870 ರೂ.
ತಿಂಗಳ ಪಾಸ್ – 19,345 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
- 3 ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 635 ರೂ.
ದ್ವಿಮುಖ ಪ್ರಯಾಣ – 950 ರೂ.
ತಿಂಗಳ ಪಾಸ್ – 21,100 ರೂ.
ಲೋಕಲ್ ತಿಂಗಳ ಪಾಸ್ – 340 ರೂ.
- ಮಲ್ಟಿ ಎಕ್ಸೆಲ್ ವೆಹಿಕಲ್, ಹೆವಿ ಕನ್ಸಟ್ರಕ್ಷನ್, ಮಿಷನರಿ ಮೂವಿಂಗ್ ವೆಹಿಕಲ್
ಏಕಮುಖ ಪ್ರಯಾಣ – 910 ರೂ.
ದ್ವಿಮುಖ ಪ್ರಯಾಣ – 1,365 ರೂ.
ತಿಂಗಳ ಪಾಸ್ – 30,335 ರೂ.
- ಓವರ್ ಸೈಜ್ ವೆಹಿಕಲ್ 7 ಕ್ಕಿಂತ ಹೆಚ್ಚು ಎಕ್ಸೆಲ್ ವೆಹಿಕಲ್
ಏಕಮುಖ ಪ್ರಯಾಣ – 1,110 ರೂ.
ದ್ವಿಮುಖ ಪ್ರಯಾಣ – 1,660 ರೂ.
ತಿಂಗಳ ಪಾಸ್ – 36,930 ರೂ.