ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಸೆಣಸಾಟ – ಮೊದಲ ಪಂದ್ಯದಲ್ಲಿ ಯಾರಾಗ್ತಾರೆ ಕಿಂಗ್?

ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಸೆಣಸಾಟ – ಮೊದಲ ಪಂದ್ಯದಲ್ಲಿ ಯಾರಾಗ್ತಾರೆ ಕಿಂಗ್?

ಪಂಜಾಬ್ ಕಿಂಗ್ಸ್ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್. ಮಾರ್ಚ್ 23ಕ್ಕೆ ತವರಿನಲ್ಲಿ ಡಿಸಿ ಟೀಮ್ ನ ಫೇಸ್ ಮಾಡಲಿದೆ ಪಂಜಾಬ್ ಕಿಂಗ್ಸ್. ಒಂದು ಕಡೆ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌.. ಮತ್ತೊಂದು ಕಡೆ ರಿಷಬ್‌ ಪಂತ್‌ ಕಂಬ್ಯಾಕ್‌ ನಂತರ ಹೊಸ ಜೋಶ್​ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌.. ಇವರಿಬ್ಬರಲ್ಲಿ ಯಾರು ಗೆಲ್ತಾರೆ ಅನ್ನೋದಕ್ಕಿಂತ ಪಂತ್‌ ಮೈದಾನಕ್ಕೆ 14 ತಿಂಗಳ ನಂತರ ಕಾಲಿಡುವಾಗ ಹೇಗೆ ಆಡ್ತಾರೆ ಅನ್ನೋದನ್ನು ನೋಡೋದಿಕ್ಕೆ ಕ್ರಿಕೆಟ್‌ ಅಭಿಮಾನಿಗಳು ಕಾಯ್ತಿದ್ದಾರೆ.. ಹಾಗಿದ್ದರೂ ಐಪಿಎಲ್‌ನಲ್ಲಿ ಈ ಎರಡೂ ತಂಡಗಳ ರೆಕಾರ್ಡ್ಸ್‌, ಆಡಿರುವ ಆಟಗಳು, ಮಾಡಿರುವ ಸಾಧನೆಗಳನ್ನು ನೋಡೋದು ಕೂಡ ಅಷ್ಟೇ ಮುಖ್ಯ..

ಇದನ್ನೂ ಓದಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಪಂದ್ಯ – ಆರೆಂಜ್ ಆರ್ಮಿ ವಿರುದ್ಧ ಅಬ್ಬರಿಸ್ತಾರಾ ರಿಂಕು ಸಿಂಗ್?

ಪಂಜಾಬ್ ಕಿಂಗ್ಸ್ ಇದುವರೆಗೂ ಐಪಿಎಲ್ ಕಿಂಗ್ ಆಗಿ ಮೆರೆದೇ ಇಲ್ಲ. ತಂಡದ ದಶಕದ ಕನಸೆಂದರೆ ಈ ಬಾರಿ ಚಾಂಪಿಯನ್ ಪಟ್ಟಕ್ಕೇ ಏರಲೇಬೇಕು ಅನ್ನೋದು. ಟ್ರೋಫಿ ಗೆಲ್ಲೋದಿಕ್ಕೆ ಬೇಕಿರುವ ಫಾರ್ಮುಲಾ ಕಂಡುಕೊಳ್ಳಲು ಪಂಜಾಬ್‌ ಕಿಂಗ್ಸ್ ತಂಡ ಎಡವುತ್ತಲೇ ಇದೆ. ಐಪಿಎಲ್​​ ಶುರುವಾದಾಗಿನಿಂದಲೇ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿದೆ.. 2021ರಲ್ಲಿ ಹೆಸರು ಬದಲಾಯಿಸಿಕೊಂಡಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್‌ನ ಸಹ ಮಾಲೀಕ ನೆಸ್‌ ವಾಡಿಯಾ ಟೀಂಗೆ ಪಂಜಾಬ್‌ ಕಿಂಗ್ಸ್‌ ಅಂತ ಹೆಸರಿಟ್ಟಿರೋದ್ರಿಂದ ಈಗ್ಲಾದ್ರೂ ನಾವು ಕಪ್‌ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು.. ಕಳೆದ 16 ಸೀಜನ್‌ಗಳಿಂದಲೂ ಆಡಿರುವ ಪ್ರೀತಿ ಜಿಂಟಾ ಓನರ್​​ಶಿಪ್​​ನ ಪಂಜಾಬ್ ಒಳ್ಳೆಯ ಟೀಂ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಆದ್ರೆ ಕಿಂಗ್ಸ್‌ ಹೆಸರಿಟ್ಟುಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಕಪ್‌ ಮೇಲೆ ಕಪ್‌ ಗೆದ್ರೂ ಪಂಜಾಬ್‌ ಟೀಂ ಮಾತ್ರ ಹೆಸರಿಗಷ್ಟೇ ಕಿಂಗ್ ಆಗಿದೆ. ಟ್ರೋಫಿ ಗೆದ್ದು ನಾವು ರಿಯಲ್ ಕಿಂಗ್ಸ್​ ಅನ್ನೋದು ಇದುವರೆಗೂ ಪ್ರೂವ್ ಮಾಡೋಕೆ ಅವರಿಂದಾಗಿಲ್ಲ. 2014ರಲ್ಲಿ ಫೈನಲ್ ಆಡಿರೋದೆ ಪಂಜಾಬ್​ ಟೀಮ್​ನ ಇದುವರೆಗಿನ ಶ್ರೇಷ್ಟ ಸಾಧನೆ. ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೈಲಿ ಆಗ ಟೀಮ್ ಕ್ಯಾಪ್ಟನ್ ಆಗಿದ್ರು. ಅದೊಂದು ಬಾರಿ ಮಾತ್ರ ಫೈನಲ್‌ ಗೆ ತಲುಪಿದ್ದ ಪಂಜಾಬ್ ತಂಡ  ಐಪಿಎಲ್​ ಫೈನಲ್​ ಆಡದೆ 10 ವರ್ಷಗಳೇ ಆಯ್ತು. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಭರವಸೆ ಮೂಡಿಸುವ ಪಂಜಾಬ್‌ ಕಿಂಗ್ಸ್‌ ನಂತರ ಸೋತು ಮನೆಗೆ ನಡೆಯುವುದು ರೂಢಿಯಾಗಿದೆ. ಕಳೆದ ವರ್ಷವಂತೂ ಪಂಜಾಬ್‌ ಕಿಂಗ್ಸ್‌ ತಂಡ ಶಿಖರ್‌ ಧವನ್‌ ಸಾರಥ್ಯದಲ್ಲಿ ಪ್ಲೇ ಆಫ್ಸ್‌ ತಲುಪುವ ಭರವಸೆ ಮೂಡಿಸಿತ್ತು. ಲೀಗ್‌ ಹಂತದ ಕೊನೇ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್‌ ಎದುರು ಮಂಡಿಯೂರಿ ಮನೆಗೆ ನಡೆಯಿತು. 14 ಪಂದ್ಯಗಳಲ್ಲಿ ಒಟ್ಟು 6 ಜಯ ದಾಖಲಿಸುವ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಆದರೆ, ಈ ಸೀಸನ್‌ನಲ್ಲಿ ಫುಲ್ ಜೋಶ್‌ನೊಂದಿಗೆ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಡಲಿದೆ ಪಂಜಾಬ್ ಕಿಂಗ್ಸ್.

ಟೀಂ ಇಂಡಿಯಾದಲ್ಲಿ ಚಾನ್ಸ್‌ ಮಿಸ್‌ ಮಾಡ್ಕೊಂಡಿದ್ದರೂ ಪಂಜಾಬ್‌ ಕಿಂಗ್ಸ್‌ ಕ್ಯಾಪ್ಟನ್‌ ಶಿಖರ್‌ ಧವನ್‌ ಯಾವತ್ತಿದ್ದರೂ ಡೇಂಜರಸ್‌ ಬ್ಯಾಟ್ಸ್​​ಮನ್‌ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಈ ಗಬ್ಬರ್‌ಸಿಂಗ್‌ ಸಿಡಿದ್ರೆ ಟೀಂ ಬಿಗ್‌ ಸ್ಕೋರ್‌ ಕಲೆ ಹಾಕೋದು ಗ್ಯಾರಂಟಿ.. ಧವನ್‌ ತನ್ನಲ್ಲಿನ್ನೂ ಕ್ರಿಕೆಟ್‌ ಉಳಿದಿದೆ ಅನ್ನೋದನ್ನು ತೋರಿಸಿಕೊಡಲು ಐಪಿಎಲ್‌ ಬೆಸ್ಟ್‌ ವೇದಿಕೆ.. ಹೀಗಾಗಿ ಈ ಬಾರಿ ಶಿಖರ್‌ ಧವನ್‌ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.. ಶಿಖರ್‌ ಧವನ್‌ ಜೊತೆಗೆ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾರನ್ನು ವೈಸ್‌ ಕ್ಯಾಫ್ಟನ್‌ ಆಗಿ ನೇಮಿಸಲಾಗಿದೆ..ಕಳೆದ ಸೀಸನ್‌ನಲ್ಲಿ ಹೊಡಿಬಡಿ ಆಟದಿಂದ ಮಿಂಚಿದ್ದ ಜಿತೇಶ್‌, ವಿಕೆಟ್‌ ಹಿಂದೆಯೂ ಅಷ್ಟೇ ಪ್ರಭಾವಿಯಾಗಿದ್ದಾರೆ.. ಇನ್ನು ಓಪನಿಂಗ್‌ನಲ್ಲಿ ಜಾನಿ ಬೈರ್‌ಸ್ಟೋ ಅದ್ಭುತ ಬ್ಯಾಟ್ಸ್​ಮನ್‌.. ಜಾನಿ-ಶಿಖರ್‌ ಜೋಡಿ ಕನ್ಸಿಸ್ಟೆನ್ಸಿ ತೋರಿಸಿದ್ರೆ ಪಂಜಾಬ್‌ ಕಿಂಗ್ಸ್‌ ಕಪ್‌ವರೆಗೂ ಕಣ್ಣಿಡಬಹುದು.. ಇವರ ಜೊತೆಗೆ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ತಂಡದ ಮತ್ತೊಬ್ಬ ಸ್ಟಾರ್‌ ಆಟಗಾರ.. ಇತ್ತ ಬೌಲಿಂಗ್‌ನಲ್ಲಿ ಅರ್ಷದೀಪ್‌ ಸಿಂಗ್‌ ಜೊತೆಗೆ ಆರ್‌ಸಿಬಿಯಲ್ಲಿ ಸ್ಟಾರ್‌ ಆಟಗಾರ ಆಗಿದ್ದ ಹರ್ಷಲ್‌ ಪಟೇಲ್ ಕೂಡ ಸೇರಿಕೊಂಡಿರೋದು ಪಂಜಾಬ್‌ನ ಬಲ ಹೆಚ್ಚಿಸಿದೆ.. ಇವರನ್ನು ಲೀಡ್‌ ಮಾಡಲು ಸೌತ್‌ ಆಫ್ರಿಕಾದ ಅನುಭವಿ ಬೌಲರ್‌ ಕಗಿಸೊ ರಬಾಡ ಇದ್ದಾರೆ.. ಹೀಗಾಗಿ ಪಂಜಾಬ್‌ನ ಬೌಲಿಂಗ್‌ ಯುನಿಟ್‌ನಲ್ಲಿ ಬಹಳಷ್ಟು ವೇರಿಯೇಷನ್‌ ಕೂಡ ಇದೆ.. ಆಲ್‌ರೌಂಡರ್‌ ರಿಷಿ ಧವನ್‌ ಕೂಡ ತಂಡದ ನಾಲ್ಕನೇ ಬೌಲರ್‌ ಆಗಿ ಕಾಣಿಸಿಕೊಳ್ಳಬಹುದು.. ಜೊತೆಗೆ ಕನ್ನಡಿಗ ವಿದ್ವತ್‌ ಕಾವೇರಪ್ಪ ತಂಡದಲ್ಲಿ ಚಾನ್ಸ್‌ ಪಡೀತಾರಾ ಅನ್ನೋದನ್ನು ನೋಡಬೇಕಿದೆ.. ಹೀಗೆ ಪೇಪರ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್‌ಡ್‌ ಟೀಂ ಆಗಿ ಪಂಜಾಬ್‌ ಕಿಂಗ್ಸ್‌ ಕಾಣಿಸ್ತಿದ್ದರೆ ಅವರ ಎದುರಾಳಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸಿಕ್ಕಾಪಟ್ಟೆ ಜೋಷ್‌ನಲ್ಲಿದೆ.. ಯಾಕಂದ್ರೆ ಮತ್ತೆ ಈಗ ಡೆಲ್ಲಿ ಕ್ಯಾಪಿಟಲ್ಸ್‌ ಲೀಡ್‌ ಮಾಡೋದಿಕ್ಕೆ ರಿಷಬ್‌ ಪಂಥ್‌ ಎಂಟ್ರಿಯಾಗಿದ್ದಾರೆ..

 

Sulekha