ಸಿಲಿಕಾನ್ ಸಿಟಿ ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ನೀರಿನ ಸಂಕಷ್ಟ – ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡಲು ಹೆಚ್ಚಾಯ್ತು ಆಗ್ರಹ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹಲವು ಅಪಾರ್ಟ್ಮೆಂಟ್ಗಳಲ್ಲಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಇದೀಗ ಅಪಾರ್ಟ್ಮೆಂಟ್ಗಳ ಮಾಲೀಕರಿಗೆ ತಲೆಬಿಸಿ ತಂದೊಡ್ಡಿದೆ.
ಹೌದು, ನಗರದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಸ್ವಿಮ್ಮಿಂಗ್ ಫೂಲ್, ವಾಹನ ತೊಳೆಯುವುದನ್ನು ನಿಷೇಧಿಸಲಾಗಿದೆ. ನೀರಿನ ಕೊರತೆಯಿಂದಾಗಿ ನಗರದ ಕೆಲವೆಡೆ ಬಾಡಿಗೆ ಮನೆ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಕಾವೇರಿ ನೀರಿನ ಸಂಪರ್ಕ ಇರದ ಪ್ರದೇಶಗಳ ಅಪಾರ್ಟ್ಮೆಂಟ್ಗಳಲ್ಲಿ ಖಾಲಿ ಇರುವ ಫ್ಲ್ಯಾಟ್ಗಳಿಗೆ ಬಾಡಿಗೆಗೆ ಬರಲು ಜನ ಹಿಂದೆಟು ಹಾಕುತ್ತಿದ್ದಾರೆ. ಫ್ಲ್ಯಾಟ್ಗಳ ಬದಲು ಮನೆಗಳನ್ನೇ ಜನ ಹುಡುಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೆಡಿ – ಹೇಗಿದೆ ಸಿಎಸ್ಕೆ ಹವಾ?
ನೀರು ಮೂಲಭೂತ ಅವಶ್ಯಕತೆಯಾಗಿರುವುದರಿಂದ ಜನರು ಫ್ಲ್ಯಾಟ್ ಬದಲು ಇಂಡಿವಿಜುವಲ್ ಹೌಸ್ಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಕೋಣನಕುಂಟೆ ಕ್ರಾಸ್, ತಲಘಟ್ಟಪುರ ಹಾಗೂ ಅಂಜನಾಪುರ ಜನ ಮನೆ ಖರೀದಿಸಲು ಹಿಂದೇಟಯ ಹಾಕುತ್ತಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಬಾಡಿಗೆಯಲ್ಲಿ ಶೇಕಡ ಹತ್ತರಷ್ಟು ಕಡಿಮೆ ಮಾಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ನಗರದ ಅನೇಕ ಅಪಾರ್ಟ್ಮೆಂಟ್ಗಳಲ್ಲಿ ನೀರು ಪೂರೈಕೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಕೆಲವೇ ಗಂಟೆಗಳ ಕಾಲ ನೀರು ಬಿಡಲಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಗ್ರಾಹಕರು ಬಾಡಿಗೆ ಕಡಿಮೆ ಮಾಡುವಂತೆ ಕೇಳುತ್ತಿದ್ದಾರೆ ಎಂದು ಜೆಪಿ ನಗರ ಮತ್ತು ಕನಕಪುರ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳುತ್ತಿದ್ದಾರೆ.