ಅರುಣಾಚಲ ಪ್ರದೇಶ ಭಾರತದ ಭೂ ಪ್ರದೇಶ, ಇದು ಚೀನಾದ ಹಕ್ಕಲ್ಲ – ಯುನೈಟೆಡ್ ಸ್ಟೇಟ್ಸ್
ಅರುಣಾಚಲ ಪ್ರದೇಶ ತನ್ನದೆಂದು ಪ್ರತಿಪಾದಿಸುತ್ತಾ ಬಂದಿರೋ ಚೀನಾ ಪದೇ ಪದೇ ತನ್ನ ನರಿ ಬುದ್ದಿಯನ್ನು ತೋರಿಸುತ್ತಿದೆ. ಭಾರತದ ಅಕ್ಸಾಯ್ ಚಿನ್ ತನ್ನದೆಂದು ತೋರಿಸುವ ಸಲುವಾಗಿ ಹೊಸ ನಕ್ಷೆಯನ್ನು ಕೂಡ ಬಿಡುಗಡೆ ಮಾಡಿತ್ತು. ಅಷ್ಟೇ ಅಲ್ಲದೇ ರಹಸ್ಯವಾಗಿ ಸುರಂಗ ಮತ್ತು ಬಂಕರ್ ನಿರ್ಮಾಣ ಚಟುವಟಿಕೆ ಕೂಡ ನಡೆಸಿತ್ತು. ಇದೀಗ ಯುನೈಟೆಡ್ ಸ್ಟೇಟ್ಸ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಅರುಣಾಚಲ ಪ್ರದೇಶ ನಮ್ಮದು, ನಮ್ಮದು ಎಂದು ಹೇಳುತ್ತಿದ್ದ ಚೀನಾಕ್ಕೆ ಇದೀಗ ಭಾರೀ ಮುಖಭಂಗವಾಗಿದೆ.
ಇದನ್ನೂ ಓದಿ: ಡಾಕ್ಟರ್ ಗೆ ಬೆದರಿದ್ರಾ ಡಿಕೆ ಬ್ರದರ್ಸ್? – ಜನಮನ ಗೆಲ್ಲಲು ಸೀರೆ, ಕುಕ್ಕರ್ ಹಂಚಿದ್ರಾ?
ಅರುಣಾಚಲ ಪ್ರದೇಶ ಭಾರತದ ಭೂ ಪ್ರದೇಶ. ಇದು ಭಾರತಕ್ಕೆ ಸಂಬಂಧಿಸಿದ್ದು, ಇದು ಚೀನಾದ ಹಕ್ಕಲ್ಲ. ನೈಜ ನಿಯಂತ್ರಣ ರೇಖೆಯ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಇದೀಗ ಈ ಹೇಳಿಕೆ ಚೀನಾಕ್ಕೆ ಭಾರೀ ಮುಖಭಂಗವನ್ನು ಉಂಟು ಮಾಡಿದೆ. ಅರುಣಾಚಲ ಪ್ರದೇಶ ನಮ್ಮದು ನಮ್ಮದು ಎನ್ನುತ್ತಿದ್ದ ಚೀನಾಕ್ಕೆ ಇದು ಸರಿಯಾದ ಉತ್ತರ ಎಂದು ಹೇಳಲಾಗಿದೆ.
ಚೀನಾದ ರಕ್ಷಣಾ ಸಚಿವಾಲಯದ ಹಿರಿಯ ವಕ್ತಾರ ಕರ್ನಲ್ ಜಾಂಗ್ ಕ್ಸಿಯೋಗಾಂಗ್ ಅವರು ಕ್ಸಿಜಾಂಗ್ನ ದಕ್ಷಿಣ ಭಾಗ ಚೀನಾದ ಭೂಪ್ರದೇಶದ ಅಂತರ್ಗತ ಭಾಗವಾಗಿದೆ ಮತ್ತು ಈ ಭಾಗವನ್ನು ಅರುಣಾಚಲ ಪ್ರದೇಶ ಕರೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಭಾಗದಲ್ಲಿ ಭಾರತ ತನ್ನ ಹಿಡಿತವನ್ನು ಅಕ್ರಮವಾಗಿ ಮಾಡಿಕೊಂಡಿದೆ ಎಂದು ಚೀನಾ ಹೇಳಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುವ ಚೀನಾ, ಈ ಭಾಗಕ್ಕೆ ಭಾರತದ ನಾಯಕರು ಬರುವುದನ್ನು ವಿರೋಧಿಸುತ್ತಿದೆ.
ಮಾರ್ಚ್ 9 ರಂದು, ಪ್ರಧಾನಿ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ಲೋಕರ್ಣಾಪಣೆಯನ್ನು ಮಾಡಿದರು. ಇದು ಆಯಕಟ್ಟಿನ ಸುರಂಗವಾಗಿದ್ದು, ಎಲ್ಲ ಹವಾಮಾನಕ್ಕೂ ಹೊಂದಿಕೊಳ್ಳುತ್ತದೆ. ಮತ್ತು ಗಡಿ ಪ್ರದೇಶದ ಉದ್ದಕ್ಕೂ ಸೈನಿಕರ ಉತ್ತಮ ಚಲನೆ ಬಗ್ಗೆಯು ಅವರು ಪರಿಶೀಲನೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅರುಣಾಚಲ ಪ್ರದೇಶವನ್ನು ಯುನೈಟೆಡ್ ಸ್ಟೇಟ್ಸ್ ಭಾರತೀಯ ಪ್ರದೇಶವೆಂದು ಗುರುತಿಸುತ್ತದೆ. ಆಕ್ರಮಣಗಳು ಅಥವಾ ಅತಿಕ್ರಮಣಗಳು, ಮಿಲಿಟರಿ ಅಥವಾ ನಾಗರಿಕರ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ವಿರೋಧಿಸುತ್ತದೆ ಎಂದು ಹೇಳಿದೆ.
ಅರುಣಾಚಲ ಪ್ರದೇಶದ ಮೇಲೆ ಚೀನಾದ ಪ್ರಾದೇಶಿಕ ಹಕ್ಕುಗಳನ್ನು ಭಾರತ ವಿರೋಧಿಸುತ್ತ ಬಂದಿದೆ. ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗವಾಗಿದೆ. ಈ ಪ್ರದೇಶದ ಹೆಸರನ್ನು ಬದಲಾಯಿಸುವ ಚೀನಾ ಪ್ರಯತ್ನವನ್ನು ಭಾರತ ವಿಫಲಗೊಳಿಸುತ್ತ ಬಂದಿದೆ. ಅರುಣಾಚಲ ಪ್ರದೇಶದ ವಿಚಾರವಾಗಿ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಅರುಣಾಚಲ ಪ್ರದೇಶ ಭಾರತದ ಕೈಯಲ್ಲೇ ಇತ್ತು ಹಾಗೂ ಅದು ಭಾರತ ಅವಿಭಾಜ್ಯ ಅಂಗವಾಗಿದೆ ಎಂದು ವೇದಾಂತ್ ಪಟೇಲ್ ಹೇಳಿದ್ದಾರೆ.