‘ಪಕ್ಷದಲ್ಲಿದ್ದು ಕೆಲ್ಸ ಮಾಡೋದಾದ್ರೆ ಮಾಡು, ಇಲ್ಲದಿದ್ರೆ ಬೇರೆ ಪಕ್ಷಕ್ಕೆ ಹೋಗು!’- ರೇಣುಕಾಚಾರ್ಯಗೆ ಎಚ್ಚರಿಕೆ ಕೊಟ್ಟ ಬಿಎಸ್‌ವೈ!
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಯು ಹತ್ತಿರ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಸರ್ಕಸ್ ಮಾಡುತ್ತಿದೆ. ಮತದಾನ ಪ್ರಚಾರ ಶುರು ಮಾಡಿಕೊಂಡಿದೆ. ಹೀಗಿರುವಾಗ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ಎಂ.ಪಿ ರೇಣುಕಾಚಾರ್ಯ ಬಣ ಪಟ್ಟು ಹಿಡಿದಿದೆ. ಈ ವಿಚಾರ ಈಗ ಬಿಜೆಪಿ ಹೈಕಮಾಂಡ್ ಕಿವಿಗೂ ಬಿದ್ದಿದೆ. ಈ ಬೆನ್ನಲ್ಲೇ ರೇಣುಕಾಚಾರ್ಯಗೆ ಮಾಜಿ ಸಿಎಂ ಬಿಎಸ್‌ವೈ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಅಧಿಕೃತ ಚಾಲನೆ – ಮೊದಲ ಹಂತದ ಚುನಾವಣೆಗೆ ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭ
ಸಂಸದ ಸಿದ್ದೇಶ್ವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ರೇಣುಕಾಚಾರ್ಯ ಸಿಟ್ಟಾಗಿದ್ದರು. ಬಹಿರಂಗ ಟಿಕೆಟ್ ಬದಲಿಸುವಂತೆ ಅತೃಪ್ತರ ತಂಡ ಕಟ್ಟಿಕೊಂಡು ಸಭೆ ನಡೆಸುತಿದ್ದರು. ಟಿಕೆಟ್ ಘೋಷಣೆಯಾದ ಮೇಲೆ ಹೈಕಮಾಂಡ್ ಗೆ ಟಿಕೆಟ್ ಬದಲಿಸುವಂತೆ ರೇಣುಕಾಚಾರ್ಯ ಟೀಮ್ ಕೇಳಿದ್ದರು. ಇದೇ ವಿಚಾರವಾಗಿ ರೇಣುಕಾಚಾರ್ಯ ಟೀಮ್ ಸಭೆ ಸೇರಿದ್ದಕ್ಕೆ ಹೈಕಮಾಂಡ್ಗೂ ದೂರು ಹೋಗಿತ್ತು. ದಾವಣಗೆರೆ ಗೊಂದಲ ಸರಿಪಡಿಸುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಸೂಚನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ರೇಣುಕಾಚಾರ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶಾಸಕ ರೇಣುಕಾಚಾರ್ಯಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಪಕ್ಷದಲ್ಲಿ ಇದ್ದು ಕೆಲಸ ಮಾಡುವುದಾದರೆ ಮಾಡು. ಹೈಕಮಾಂಡ್ ನಾಯಕರು ಕೂಡ ಕರೆ ಮಾಡಿ ಪಕ್ಷದಿಂದ ಹೊರ ಹಾಕುವಂತೆ ಸೂಚಿಸಿದ್ದಾರೆ. ಇಲ್ಲ ಬೇರೆ ಯಾವುದಾದರೂ ಪಕ್ಷಕ್ಕೆ ನೀನು ಹೋಗು ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.