ದಶಕ ಕಳೆದರೂ ಕೈಗೆ ಬಂದಿಲ್ಲ ಕಪ್..! – ನಾಲ್ಕು ಫ್ರಾಂಚೈಸಿಗಳು ಒಂದೇ ಒಂದು ಬಾರಿ ಟೂರ್ನಿಯನ್ನ ಗೆದ್ದೇ ಇಲ್ಲ
ಇದುವರೆಗೆ 16 ಐಪಿಎಲ್ ಟೂರ್ನಿಗಳಾಗಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಐದು ಬಾರಿ ಟ್ರೋಫಿ ಗೆದ್ದಿವೆ. ಅಲ್ಲಿಗೆ 10 ಐಪಿಎಲ್ ಟ್ರೋಫಿಗಳು ಎರಡು ಫ್ರಾಂಚೈಸಿಗಳ ಪಾಲಾದಂತಾಯ್ತು. ಇನ್ನುಳಿದಂತೆ ಹೈದರಾಬಾದ್ ಎರಡು ಬಾರಿ, ಕೊಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ, ರಾಜಸ್ಥಾನ ಒಂದು ಬಾರಿ, ಗುಜರಾತ್ ಟೈಟಾನ್ಸ್ ಒಂದು ಬಾರಿ ಚಾಂಪಿಯನ್ ಆಗಿದೆ. ಇನ್ನೂ ನಾಲ್ಕು ಫ್ರಾಂಚೈಸಿಗಳು ಒಂದೇ ಒಂದು ಬಾರಿ ಟೂರ್ನಿಯನ್ನ ಗೆದ್ದಿಲ್ಲ. ಅದ್ರಲ್ಲೂ ಹಲವು ವರ್ಷಗಳಿಂದ ಆಡ್ತಾ ಇರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಪಂಜಾಬ್, ದೆಹಲಿ ಕ್ಯಾಪಿಟಲ್ಸ್ ಐಪಿಎಲ್ನ ಅತ್ಯಂತ ಫ್ಲಾಪ್ ಟೀಮ್ಗಳಾಗಿಯೇ ಗುರುತಿಸಿಕೊಂಡಿವೆ. ಲಕ್ನೋ ಸೂಪರ್ ಜೈಂಟ್ಸ್ ಬಿಡಿ ಹೊಸ ಫ್ರಾಂಚೈಸಿ. ಎರಡು ಸೀಸನ್ಗಳನ್ನಷ್ಟೇ ಆಡಿವೆ. ತನ್ನ ಫಸ್ಟ್ ಐಪಿಎಲ್ನಲ್ಲೇ ಫೈನಲ್ಗೂ ರೀಚ್ ಆಗಿತ್ತು. ಇನ್ನು ಗುಜರಾತ್ ಟೈಟಾನ್ಸ್ ಡೆಬ್ಯೂ ಐಪಿಎಲ್ ಟೂರ್ನಿಯಲ್ಲೇ ಚಾಂಪಿಯನ್ ಆಗಿತ್ತು. ಆದ್ರೆ, ಆರ್ಸಿಬಿ ಸೇರಿ ಮೂರು ಟೀಮ್ಗಳು ಐಪಿಎಲ್ ಆಡೋಕೆ ಶುರು ಮಾಡಿ ದಶಕವೇ ಆದ್ರೂ ಇನ್ನೂ ಕಪ್ ಗೆಲ್ಲೋಕೆ ಆಗಿಲ್ಲ.
ಇದನ್ನೂ ಓದಿ:RCB ಗೆಲುವಿನ ರೂವಾರಿ ಕನ್ನಡತಿ ಶ್ರೇಯಾಂಕಾ ಪಾಟೀಲ್ – ಫೈನಲ್ ಪಂದ್ಯದಲ್ಲಿ ಕಲಬುರ್ಗಿ ಕುವರಿಯಿಂದ ಇತಿಹಾಸ ಸೃಷ್ಟಿ
ಐಪಿಎಲ್ ಶುರುವಾದಾಗಿನಿಂದಲೇ ಪಂಜಾಬ್ ಕಿಂಗ್ಸ್ ಟೂರ್ನಿಯನ್ನ ಆಡ್ತಾನೆ ಬಂದಿದೆ. ಕಳೆದ 16 ಸೀಸನ್ಗಳಲ್ಲೂ ಈ ಫ್ರಾಂಚೈಸಿ ಆಡಿತ್ತು. ಪ್ರೀತಿ ಜಿಂಟಾ ಓನರ್ಶಿಪ್ನ ಪಂಜಾಬ್ ವನ್ ಆಫ್ ದಿ ಸ್ಟಾರ್ ಟೀಮ್. ಅನ್ಫಾರ್ಚ್ಯುನೇಟ್ಲಿ ಈ ಟೀಮ್ ಹೆಸರಿಗಷ್ಟೇ ಕಿಂಗ್ ಆಗಿದೆ. ಟ್ರೋಫಿ ಗೆದ್ದು ನಾವು ರೀಯಲ್ ಕಿಂಗ್ಸ್ ಅನ್ನೋದು ಇದುವರೆಗೂ ಪ್ರೂವ್ ಮಾಡೋಕೆ ಅವರಿಂದಾಗಿಲ್ಲ. 2014ರಲ್ಲಿ ಫೈನಲ್ ಆಡಿರೋದೆ ಪಂಜಾಬ್ ಟೀಮ್ನ ಇದುವರೆಗಿನ ಸಾಧನೆ. ಜಾರ್ಜ್ ಬೈಲಿ ಆಗ ಟೀಮ್ ಕ್ಯಾಪ್ಟನ್ ಆಗಿದ್ರು. ಫೈನಲ್ಗೆ ತಲುಪಿರೋದು ಕೂಡ ಒಂದು ಬಾರಿ ಮಾತ್ರ. ಕಿಂಗ್ಸ್-11 ಪಂಜಾಬ್ ಐಪಿಎಲ್ ಫೈನಲ್ ಆಡದೆ 10 ವರ್ಷಗಳೇ ಆಯ್ತು. ಹಾಗಿದ್ರೆ ಆ ಟೀಮ್ ಯಾವ ರೇಂಜಿಗೆ ಕೊಲ್ಯಾಪ್ಸ್ ಆಗಿದೆ ನೋಡಿ. ಹಾಗಿದ್ರೆ ಒಂದೇ ಒಂದು ಬಾರಿಯೂ ಪಂಜಾಬ್ಗೆ ಟೂರ್ನಿ ಗೆಲ್ಲೋಕೆ ಸಾಧ್ಯವಾಗಿಲ್ಲ ಯಾಕಂದರೆ, ಪಂಜಾಬ್ ತಂಡದಲ್ಲಿ ನಾಯಕತ್ವದ ಕೊರತೆಯಿದೆ. ಪಂಜಾಬ್ ತಂಡದ ಮಿಡ್ಲ್ ಆರ್ಡರ್ ಬಲಿಷ್ಠವಾಗಿರಲಿಲ್ಲ . ಪಂಜಾಬ್ ತಂಡದಲ್ಲಿ ಆಲ್ರೌಂಡರ್ ಗಳ ಕೊರತೆಯೂ ಇದೆ. ವಿಕೆಟ್ ಪಡೆಯುಂಥಾ ಸ್ಪಿನ್ನರ್ಸ್ ಗಳ ಕೊರತೆಯೂ ಇದೆ.
ಇನ್ನು ದೆಹಲಿ ಕ್ಯಾಪಿಟಲ್ಸ್ ಕೂಡ ಓಲ್ಡ್ ಫ್ರಾಂಚೈಸಿ. 2020ರಲ್ಲಿ ಫೈನಲ್ಗೆ ಬಂದು ಮುಂಬೈ ವಿರುದ್ಧ ಸೋತಿದ್ದೇ ಇವರ ಸಾಧನೆ. 12 ಸೀಸನ್ಗಳನ್ನ ಆಡಿದ ಬಳಿಕ ದೆಹಲಿ ಕ್ಯಾಪಿಟಲ್ಸ್ ಫಸ್ಟ್ ಟೈಮ್ ಫೈನಲ್ ಆಡಿತ್ತು. ಆದ್ರೆ ಇದುವರೆಗೂ ಟ್ರೋಫಿಯಂತೂ ಗೆಲ್ಲೋಕೆ ಆಗಿಲ್ಲ. ದೆಹಲಿ ಕ್ಯಾಪಿಟಲ್ಸ್ ಎಡವಿರೋದು ಎಲ್ಲಿ ಅನ್ನೋದನ್ನ ನೋಡ್ತಾ ಹೋದ್ರೆ ಕೆಲ ಸಂಗತಿಗಳು ಹೈಲೈಟ್ ಆಗುತ್ತೆ. ದೆಹಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ಸ್ ಕೊರತೆಯಿದೆ. 15 ಸೀಸನ್ ಗಳಲ್ಲಿ 13 ಕ್ಯಾಪ್ಟನ್ಸ್ ಬದಲಾಗಿದ್ದಾರೆ. ದೆಹಲಿಗೆ ಕ್ವಾಲಿಟಿ ಓಪನರ್ಸ್ ಗಳು ಸಿಕ್ಕಿಲ್ಲ. ವಾರ್ನರ್-ಪೃಥ್ವಿ ಇದ್ರೂ ಪರ್ಫಾಮ್ ಮಾಡಿಲ್ಲ. ಓಪನಿಂಗ್ ನಲ್ಲಿ ಒಳ್ಳೆಯ ಪಾಟ್ನರ್ ಶಿಪ್ ಆಗಿಲ್ಲ. ಆಲ್ರೌಂಡರ್ ಗಳ ಕೊರತೆಯಿದೆ. ಈ ಎಲ್ಲಾ ಕಾರಣಗಳಿಂದಾಗಿ, ಒಂದು ತಂಡವಾಗಿ ಪರ್ಫಾಮ್ ಮಾಡುವಲ್ಲಿ ಫೇಲ್ ಆಗಿದ್ರಿಂದಾಗಿಯೇ ದೆಹಲಿ ಕ್ಯಾಪಿಟಲ್ಸ್ ಇದುವರೆಗೂ ಒಂದೇ ಒಂದು ಬಾರಿ ಐಪಿಎಲ್ ಚಾಂಪಿಯನ್ ಆಗಿಲ್ಲ.
ಇನ್ನು ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜಯಾಂಟ್ಸ್ ಎರಡು ಸೀಸನ್ಗಳನ್ನಷ್ಟೇ ಆಡಿದೆ. ಇವರ ಮೇಲೆ ಕಪ್ ಗೆದ್ದಿಲ್ಲ ಅಂತಾ ಬ್ಲ್ಯಾಕ್ ಮಾರ್ಕ್ ಹಾಕೋಕೆ ಈಗ ಆಗೋದಿಲ್ಲ. ಐಪಿಎಲ್ಗೆ ಈಗಷ್ಟೇ ಎಂಟ್ರಿಯಾಗಿರೋ ಟೀಮ್. ಬಟ್ ಆಡಿರೋ ಎರಡೂ ಸೀಸನ್ಗಳಲ್ಲೂ ಇಂಪ್ರೆಸಿವ್ ಆಗಿ ಪರ್ಫಾಮ್ ಮಾಡಿದ್ರು. 2022ರಲ್ಲಿ ಫೈನಲ್ ರೀಚ್ ಆಗಿದ್ರು. 2023ರಲ್ಲಿ ಸೆಮಿಫೈನಲ್ ಆಡಿದ್ರು. ಆದ್ರೂ ಲಕ್ನೋ ಸೂಪರ್ ಜಯಾಂಟ್ಸ್ನ ಮಿಡ್ಲ್ ಆರ್ಡರ್ ವೀಕ್ ಇದೆ. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಮೇಲೆಯೇ ಹೆಚ್ಚು ಡಿಪೆಂಡ್ ಆಗಿದೆ. ಹಾಗೆಯೇ ಟೀಮ್ನಲ್ಲಿ ಕ್ವಾಲಿಟಿ ಆಲ್ರೌಂಡರ್ಸ್ಗಳ ಶಾರ್ಟೇಜ್ ಕೂಡ ಇದೆ. ಸ್ಪಿನ್ನರ್ಸ್ಗಳ ವಿಚಾರಕ್ಕೆ ಬರೋದಾದ್ರೆ ರವಿ ಬಿಷ್ಣೋಯಿ ಮಾತ್ರ ಇರೋದು. ಸೋ ಸ್ಪಿನ್ ವಿಭಾಗ ಕೂಡ ವೀಕ್ ಆಗಿದೆ. ಈ ಎಲ್ಲಾ ಏರಿಯಾಗಳಲ್ಲೂ ರಾಹುಲ್ ಟೀಮ್ ಇಂಪ್ರೂವ್ ಆಗಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು..ನಮ್ಮ ಆರ್ಸಿಬಿ.. ಈ ಬಾರಿ ಕಪ್ ನಮ್ದೇ..ಈ ಬಾರಿ ಕಪ್ ನಮ್ದೇ ಅಂತಾ 16 ಸೀಸನ್ಗಳಿಂದಲೂ ಹೇಳ್ತಾನೆ ಇದ್ದೀವಿ.. ಹೇಳ್ತಾನೆ ಇದ್ದೀವಿ.. ಅನ್ಫಾರ್ಚ್ಯುನೇಟ್ಲಿ ಐಪಿಎಲ್ ಕಪ್ ಅಂತೂ ನಮ್ಮ ಕೈಗೆ ಸಿಕ್ಕಿಲ್ಲ. ಫ್ಯಾನ್ ಬೇಸ್ನಲ್ಲಿ ನಂಬರ್-1 ಟೀಮ್. ಆರ್ಸಿಬಿಗೆ ಇರುವಷ್ಟು ಅಭಿಮಾನಿಗಳು..ಎಸ್ಪೆಷಲಿ ಲಾಯಲ್ ಫ್ಯಾನ್ಸ್ ಇನ್ಯಾವ ಟೀಮ್ಗೂ ಇಲ್ಲ. ಇದನ್ನ ಮಾತ್ರ ಎಲ್ಲರೂ ಒಪ್ಪಲೇಬೇಕಾಗುತ್ತೆ. 2009, 2011, 2016ರಲ್ಲಿ ಆರ್ಸಿಬಿ ಫೈನಲ್ ರೀಚ್ ಆಗಿತ್ತು. ಇನ್ನೇನು ಕಪ್ ಸಿಕ್ಕೇ ಬಿಡ್ತು ಅನ್ನೋವಷ್ಟರಲ್ಲಿ ಸೋತು ಬಿಟ್ಟಿದ್ರು. ಎಂತೆಂಥಾ ಸ್ಟಾರ್ ಆಟಗಾರರು ಆರ್ಸಿಬಿಯಲ್ಲಿ ಆಡಿ ಹೋಗಿದ್ದಾರೆ ಅನ್ನೋದು ನಿಮಗೆ ಗೊತ್ತೇ ಇದೆ. ನಮ್ಮ ಆರ್ಸಿಬಿ ಟೀಮ್ ಕಪ್ ಗೆದ್ದಿಲ್ಲ ಅಂದ ಮಾತ್ರಕ್ಕೆ ಅವರು ಪೂವರ್ ಆಗಿ ಪರ್ಫಾಮ್ ಮಾಡಿದ್ರು ಅಂತೇನಲ್ಲ. ಮೂವರು ಬಾರಿ ಫೈನಲ್ಗೆ ಬಂದಿದ್ದಾರೆ ಅದು ಸುಮ್ನೆ ಅಲ್ಲ. ಬಟ್ ಒಂದು ಮಾತ್ರ ನಮ್ಮ ಕೈಯಲ್ಲಿ ಇಲ್ಲ.. ದಟ್ ಈಸ್ ಲಕ್.. ಆರ್ಸಿಬಿ ಈಸ್ ದಿ ಮೋಸ್ಟ್ ಬ್ಯಾಡ್ಲಕ್ ಟೀಮ್ ಅಂದ್ರೆ ತಪ್ಪಾಗೋದಿಲ್ಲ. ಸ್ಟಿಲ್..ಒಂದು ಟೀಮ್ ಆಗಿ ಇಡೀ ಟೂರ್ನಿಯಲ್ಲಿ ಫುಲ್ ಫೋರ್ಸ್ನೊಂದಿಗೆ ಎಲ್ಲರೂ ಪರ್ಫಾಮ್ ಮಾಡಿದ್ರು ಅಂದ್ರೆ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ. ಲೆಟ್ಸ್ ಹೋಪ್ ಫಾರ್ ದ್ಯಾಟ್.. ಸ್ಟಿಲ್ ಆರ್ಸಿಬಿಯಲ್ಲಿರೋ ಲ್ಯಾಪ್ಸ್ ಏನು ಅನ್ನೋ ಬಗ್ಗೆ ಒಂದಷ್ಟು ಪಾಯಿಂಟ್ಸ್ ನೋಟ್ ಮಾಡಿಕೊಳ್ಳಲೇಬೇಕು.
RCB ಕಪ್ ಗೆದ್ದಿಲ್ಲ ಯಾಕೆ?
- RCB ಬೌಲಿಂಗ್ ವೀಕ್ ಆಗಿತ್ತು
- RCBನಲ್ಲಿ ಕ್ವಾಲಿಟಿ ಆಲ್ರೌಂಡರ್ಸ್ ಕೊರತೆ
- RCBನಲ್ಲಿ ಬೆಸ್ಟ್ ಸ್ಪಿನ್ನರ್ಸ್ ಗಳ ಕೊರತೆ
- ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಡಿಫೆಂಡ್ ಮಾಡುವಲ್ಲಿ ಫೇಲ್
- ಬೌಲಿಂಗ್ ವೀಕ್ ಆಗಿದ್ರಿಂದ ಹೆಚ್ಚಿನ ಸೋಲು
- RCB 2-3 ಪ್ಲೇಯರ್ಸ್ ಗಳನ್ನ ಹೆಚ್ಚು ಡಿಪೆಂಡ್ ಆಗಿದೆ
ಈ ಎಲ್ಲಾ ಕಾರಣಗಳಿಂದಾಗಿ ಆರ್ಸಿಬಿ ಇದುವರೆಗೂ ಒಂದೇ ಒಂದು ಬಾರಿ ಐಪಿಎಲ್ ಗೆಲ್ಲೋಕೆ ಸಾಧ್ಯವಾಗಿಲ್ಲ. ಇವಿಷ್ಟು ಟ್ರೋಫಿ ಗೆಲ್ಲದೆ ಐಪಿಎಲ್ ಟೀಮ್ಗಳ ಕುರಿತ ಮಾಹಿತಿ.