ರಾಗಿಯಿಂದಲೂ ರೋಗ ಬರುತ್ತಾ?- ಸೂಪರ್ಫುಡ್ ಯಾರಿಗೆ ಒಳ್ಳೇದಲ್ಲಾ?
ರಾಗಿ ತಿಂದವನಿಗೆ ರೋಗ ಬರಲ್ಲ ಅನ್ನೋ ಮಾತಿದೆ.. ರಾಗಿಯಲ್ಲಿ ಪೋಷಕಾಂಶಗಳು ದಟ್ಟವಾಗಿದೆ.. ಹತ್ತು ಹಲವು ಔಷಧೀಯ ಗುಣಗಳನ್ನು ಕೂಡ ರಾಗಿ ಹೊಂದಿದೆ.. ಆದ್ರೆ ರಾಗಿಯನ್ನು ಅಗತ್ಯಕ್ಕಿಂತ ಹೆಚ್ಚು ಸೇವಿದ್ರೆ ಆರೋಗ್ಯ ಹಾಳಾಗುತ್ತೆ.. ಜೊತೆಗೆ ಈ ಸಮಸ್ಯೆ ಇರೋರು ರಾಗಿ ತಿಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ..
ರಾಗಿಯನ್ನು ‘ಸೂಪರ್ ಫುಡ್’ ಅಂತಾ ಪರಿಗಣಿಸಲಾಗುತ್ತದೆ. ಯಾಕಂದ್ರೆ ಇದು ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ತೂಕ ಇಳಿಸುವವರಿಗೆ ರಾಗಿ ಬೆಸ್ಟ್ ಅಂತಾನೇ ಹೇಳಬಹುದು. ಆದ್ರೆ ರಾಗಿಯನ್ನು ಅತಿಯಾಗಿ ಸೇವನೆ ಮಾಡೋದು ಕೂಡ ಒಳ್ಳೆದಲ್ಲ. ಇದ್ರಿಂದ ನಿಮ್ಮ ಆರೋಗ್ಯ ಹಾಳಾಗುತ್ತೆ.
ಇದನ್ನೂ ಓದಿ: ಮಗು ಹೆತ್ತು ಕೊಟ್ಟರೆ ₹25 ಲಕ್ಷ! – ತಾಯಂದಿರಿಗೆ ಕಂಪನಿಯಿಂದ ಭರ್ಜರಿ ಆಫರ್!
ತಜ್ಞರ ಪ್ರಕಾರ, ರಾಗಿ ಎಲ್ಲರಿಗೂ ಸೂಕ್ತವಲ್ಲ. ರಾಗಿಯಲ್ಲಿ ಕಂಡುಬರುವ ಕೆಲ ಪೋಷಕಾಂಶಗಳು ಅತಿಸಾರ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ಉಂಟು ಮಾಡುತ್ತೆ. ಅಧ್ಯಯನಗಳ ಪ್ರಕಾರ, ಆಹಾರ ಸೂಕ್ಷ್ಮತೆ ಹೊಂದಿರುವ ಮಕ್ಕಳಿಗೆ ರಾಗಿಯನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ಅತಿಸಾರ ಮತ್ತು ಹೊಟ್ಟೆ ಉಬ್ಬುವುದು , ಹೊಟ್ಟೆ ನೋವನ್ನು ಉಂಟು ಮಾಡಬಹುದು.
ಇನ್ನು ಕಿಡ್ನಿ ಸ್ಟೋನ್ನಿಂದ ಬಳಲುತ್ತಿರುವವರು ಕೂಡ ರಾಗಿಯಿಂದ ಮಾಡಿದ ಆಹಾರಗಳನ್ನು ಸೇವಿಸ್ಬಾರ್ದು.. ಯಾಕಂದ್ರೆ ಇದು ದೇಹದಲ್ಲಿ ಆಕ್ಸಾಲಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತೆ. ಇದ್ರಿಂದಾಗಿ ಮತ್ತಷ್ಟು ಆರೋಗ್ಯ ಹಾಳಾಗಬಹುದು.. ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿರುವವರು ರಾಗಿ ತಿನ್ನೋದು ಹಾನಿಕಾರಕವಾಗಿದೆ. ವೈದ್ಯರ ಪ್ರಕಾರ, ರಾಗಿಯು ಗೋಯಿಟ್ರೋಜೆನ್ಗಳಿಂದ ತುಂಬಿರುತ್ತದೆ. ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ವಸ್ತುಗಳು ಇವಾಗಿವೆ. ಇದು ಎಲ್ಲರಲ್ಲೂ ಇರುವ ಸಮಸ್ಯೆ ಆಗಿರದಿದ್ದರೂ, ಈಗಾಗಲೇ ಥೈರಾಯ್ಡ್ ಸಮಸ್ಯೆಗಳನ್ನು ಹೊಂದಿರುವವರು ರಾಗಿಯನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು, ಏಕೆಂದರೆ ಇದು ಥೈರಾಯ್ಡ್ ಸ್ಥಿತಿಯನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.