ಇಯರ್‌ ಫೋನ್‌ ಬಳಸುವಾಗ ನೀವು ಈ ತಪ್ಪು ಮಾಡ್ತೀರಾ? – ಒಂದು ತಪ್ಪಿನಿಂದಲೇ ಕಿವಿ ಢಮಾರ್!

ಇಯರ್‌ ಫೋನ್‌ ಬಳಸುವಾಗ ನೀವು ಈ ತಪ್ಪು ಮಾಡ್ತೀರಾ? – ಒಂದು ತಪ್ಪಿನಿಂದಲೇ ಕಿವಿ ಢಮಾರ್!

ಈಗಿನ ಕಾಲದಲ್ಲಿ ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಕೈಗೊಂದು ಫೋನ್.. ಅದಕ್ಕೊಂದು ಇಯರ್ ಫೋನ್ ಬೇಕೇ ಬೇಕು.. ದಿನವಿಡೀ ಕಿವಿಗೆ ಇಯರ್ ಫೋನ್ ಸಿಕ್ಕಿಸ್ಕೊಂಡು ಇರ್ತಾರೆ.. ಇಯರ್ ಬಳಸುವಾಗ ಈ ತಪ್ಪುಗಳನ್ನು ಮಾಡಿದ್ರೆ.. ನಿಮ್ಮ ಕಿವಿ ಢಮಾರ್ ಆಗುತ್ತೆ..

ಇದನ್ನೂ ಓದಿ: ರಾತ್ರಿಯಿಡಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ಲು.. ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ!

ಕೈಯಲ್ಲೊಂದು ಸ್ಮಾರ್ಟ್ ಫೋನ್, ಅದಕ್ಕೊಂದು ಇಯರ್ ಫೋನ್ ಈಗಿನ ಟ್ರೆಂಡ್.. ಇಲ್ಲದಿದ್ರೆ ಪೆಸ್ಟೀಜ್ ಪ್ರಶ್ನೆ ಅನ್ನೋ ತರ ಆಗಿದೆ..  ಆದರೆ ಇಯರ್ ಫೋನ್ ಬಳಸುವುದು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಯಾರೂ ಯೋಚಿಸೋದಿಲ್ಲ. ದಿನದಲ್ಲಿ ಸ್ವಲ್ಪ ಹೊತ್ತು ಇಯರ್ ಫೋನ್ ಯೂಸ್ ಮಾಡಿದ್ರೆ ಯಾವುದೇ ತೊಂದರೆ ಇಲ್ಲ.. ಆದ್ರೆ ದಿನಪೂರ್ತಿ ಕಿವಿಗೆ ಹಾಕಿಕೊಂಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ..

ಅನೇಕರು ಇಯರ್ಫೋನ್ಗಳನ್ನು ಖರೀದಿಸಿದ ನಂತರ ಅದ್ರ ಸ್ವಚ್ಛತೆ ಬಗ್ಗೆ ಒಂದು ದಿನ ಕೂಡ ಯೋಚಿಸಲ್ಲ. ಇಯರ್ ಫೋನ್‌ಗಳನ್ನು ಪ್ರತಿದಿನ ಬಳಸಿದಾಗ ಬ್ಯಾಕ್ಟೀರಿಯಾ ಸೇರಿದಂತೆ ಸೂಕ್ಷ್ಮಾಣುಗಳು ಅಂಟಿಕೊಳ್ಳುತ್ತವೆ. ಇದು ನಮ್ಮ ಕಿವಿಯಲ್ಲಿ ಸೋಂಕು ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ನಿಮ್ಮ ಇಯರ್ ಫೋನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಸೂಕ್ಷ್ಮಜೀವಿಗಳು ಕಿವಿಗೆ ಪ್ರವೇಶಿಸುವ ಸಾಧ್ಯತೆಗಳಿವೆ.

ಇನ್ನು ನಾವು ದೀರ್ಘಕಾಲ ಇಯರ್ ಫೋನ್ ಬಳಸುವುದರಿಂದ ಇಯರ್ ಫೋನ್ ಹಾಳಾಗಿ ಅದರಲ್ಲಿ ತೇವಾಂಶ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಕಿವಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಶ್ರವಣದ ಮೇಲೆ ಪರಿಣಾಮ ಬೀರಬಹುದು. ಕಿವಿ ಸೋಂಕು ಉರಿಯೂತವನ್ನು ಉಂಟುಮಾಡುತ್ತದೆ. ಕಿವಿಗಳಲ್ಲಿ ಕೆಲವು ರೀತಿಯ ದ್ರವ ರೂಪುಗೊಳ್ಳುತ್ತದೆ. ಇದು ಕಿವಿಗಳಲ್ಲಿ ಧ್ವನಿ ಕೇಳಿಸುವಿಕೆಗೆ ಅಗತ್ಯವಾದ ಸೂಕ್ಷ್ಮ ರಚನೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಇದು ನಿಮಗೆ ತಾತ್ಕಾಲಿಕ ಅಥವಾ ಶಾಶ್ವತ ಕಿವುಡುತನ ಉಂಟುಮಾಡಬಹುದು.

ಇನ್ನು ಅನೇಕರು ಒಂದು ತಪ್ಪನ್ನ ಮಾಡ್ತಾರೆ.. ಅದೇನಂದ್ರೆ.. ತಮ್ಮ ಇಯರ್ ಫೋನ್ ಅನ್ನ ಬೇರೆಯವರೊಂದಿಗೆ ಹಂಚಿಕೊಳ್ಳೊದು.. ಇದಂತೂ ತೀರಾ ಕೆಟ್ಟ ಅಭ್ಯಾಸ. ಯಾಕಂದ್ರೆ.. ಇತರರೊಂದಿಗೆ ಇಯರ್ ಫೋನ್‌ಗಳನ್ನು ಹಂಚಿಕೊಂಡಲ್ಲಿ ಅವ್ರ ಕಿವಿಯೊಳಗಿನ  ಬ್ಯಾಕ್ಟೀರಿಯಾ ನಮ್ಮ ಕಿವಿಯೊಳಗೆ ಸೇರಿಕೊಳ್ಳುತ್ತದೆ.. ಇದು ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು. ಇದ್ರಿಂದಾಗಿ ಕಿವಿಯ ಸುತ್ತ ಚರ್ಮದ ಸೋಂಕನ್ನು ಉಂಟುಮಾಡಬಹುದು. ಇದಲ್ಲದೇ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ದೀರ್ಘಕಾಲದವರೆಗೆ ಕೊಳಕು ಇಯರ್ಫೋನ್ಗಳನ್ನು ಬಳಸಿದಾಗ ಕಿವಿಗಳ ತೊಂದರೆಯಿಂದ ಬಳಲುವ ಸಾಧ್ಯತೆ ಹೆಚ್ಚು.   ಇಯರ್ ಫೋನ್ ಗಳಿಂದ ಉಂಟಾಗುವ ಕಿವಿಗಳ ಸಮಸ್ಯೆ ಕಡಿಮೆ ಮಾಡಲು ಸ್ವಚ್ಛತೆ ಬಹಳ ಮುಖ್ಯ.. ಇಯರ್ ಫೋನ್ ಮತ್ತು ಹೆಡ್ಸೆಟ್‌ಗಳನ್ನ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.. ಹಾಗೆಯೇ ಇಯರ್ ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಪರಸ್ಪರ ಹಂಚಿಕೊಳ್ಳಬೇಡಿ. ಜೊತೆಗೆ ಇಯರ್ ಫೋನ್ ಗಳನ್ನು ಎಷ್ಟೊತ್ತಿಗೂ ಕಿವಿಗೆ ಅಂಟಿಸೋ ಬದಲು ಸ್ವಲ್ಪ‌ ಬಿಡುವು ಕೊಡಿ.. ಇದು ನಿಮ್ಮ‌‌ ಕಿವಿಗೂ ಒಳ್ಳೇದು..‌ಇಯರ್‌ಫೋನ್ ಗೂ ಒಳ್ಳೇದು.

Shwetha M