ಬಿಸಿನೀರು ಕುಡಿದ್ರೂ ತೊಂದರೇನಾ? – ಬೇಸಿಗೆಯಲ್ಲಿ ಇರಲಿ ಎಚ್ಚರ!
ನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಬೇಕು. ಕೆಲವರು ತಣ್ಣೀರು ಕುಡಿದ್ರೆ..ಇನ್ನೂ ಕೆಲವರು ಬಿಸಿನೀರು ಕುಡಿತಾರೆ. ಬೆಳಗ್ಗೆ ಎದ್ದ ಕೂಡಲೇ ಅನೇಕರು ಬಿಸಿನೀರು ಕುಡೀತಾರೆ. ತಣ್ಣೀರಿಗಿಂತ ಬಿಸಿನೀರೇ ಒಳ್ಳೇದು ಅಂತಾ ಹೇಳಲಾಗುತ್ತೆ. ಇದ್ರಿಂದ ಹತ್ತು ಹಲವು ಪ್ರಯೋಜನಗಳಿವೆ. ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ಇಳಿಸುವುದಕ್ಕೆ, ಸೈನಸ್ ಸಮಸ್ಯೆ ಇರೋರಿಗೆ ಇದು ಬೆಸ್ಟ್ ಅಂತಾನೇ ಹೇಳ್ಬಹುದು.
ಮಳೆಗಾಲ, ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವುದು ಒಳ್ಳೆಯದೇ. ಈ ಸಮಯದಲ್ಲಿ ಬಿಸಿ ನೀರು ನಮ್ಮ ಆರೋಗ್ಯವನ್ನ ಕಾಪಾಡುತ್ತೆ.. ಆದರೆ ಬೇಸಿಗೆಯಲ್ಲಿ ಹೀಗೆ ಮಾಡಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ನೀರು ಕುಡಿಯುವುದು ಆರೋಗ್ಯಕರವಾಗಿದ್ದು ಅದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಎನ್ನುವುದು ನಿಜ. ಆದರೆ ಬೇಸಿಗೆಕಾಲದಲ್ಲಿ ಆಗಾಗ್ಗೆ ಬಿಸಿನೀರನ್ನು ಕುಡಿಯುವುದರಿಂದ ದೇಹದಲ್ಲಿನ ನೀರಿನ ಪ್ರಮಾಣದಲ್ಲಿ ಅಸಮತೋಲನ ಉಂಟಾಗಬಹುದು, ಇದು ಡಿಹೈಡ್ರೇಷನ್ ಗೆ ಕಾರಣವಾಗ್ಬಹುದು.
ಇದನ್ನೂ ಓದಿ: ರಾಜ್ಯ ರಾಜಧಾನಿಗೂ ತಟ್ಟಿದ ಬರದ ಬರೆ – ನೀರು ದುರ್ಬಳಕೆ ಮಾಡಿದ್ರೆ ಬೀಳುತ್ತೆ 5,000 ರೂ. ದಂಡ!
ಇನ್ನು ಬೇಸಿಗೆ ಕಾಲದಲ್ಲಿ ಬಿಸಿನೀರಿನ ಅತಿಯಾದ ಸೇವನೆಯು ನಿಮ್ಮ ನಿದ್ರೆಯಲ್ಲಿ ಅಸಮತೋಲನ ಉಂಟುಮಾಡುತ್ತದೆ ಎಂದು ತಜ್ಞರು ಹೇಳ್ತಾರೆ. ಮಲಗುವ ಮುನ್ನ ಬಿಸಿನೀರು ಕುಡಿಯುವುದನ್ನು ತಪ್ಪಿಸಬೇಕು ರನ್ನುವ ಸಲಹೆಯನ್ನೂ ಕೊಡ್ತಾರೆ. ಏಕೆಂದರೆ ಇದು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವಂತೆ ಮಾಡಿ ನಿದ್ರೆಗೆ ಅಡ್ಡಿಪಡಿಸುತ್ತದೆ.
ಅತಿಯಾಗಿ ಬಿಸಿ ನೀರು ಕುಡಿಯೋದ್ರಿಂದ ಮೂತ್ರ ಪಿಂಡಕ್ಕೂ ತೊಂದರೆಯಾಗಬಹುದು.. ಯಾಕಂದ್ರೆ.. ಮೂತ್ರಪಿಂಡವು ಬಲವಾದ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿದೆ.. ಅದು ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷಕಾರಿ ಅಂಶವವನ್ನು ಹೊರಹಾಕುತ್ತದೆ. ಹೆಚ್ಚು ಬಿಸಿನೀರು ಕುಡಿಯುವುದರಿಂದ ಕಿಡ್ನಿಯು ಕಾರ್ಯನಿರ್ವಹಿಸುವ ವೇಗವನ್ನು ಹೆಚ್ಚಿಸಿ ಅದರ ಮೇಲೆ ಒತ್ತಡ ಬೀಳುತ್ತದೆ. ಇದು ಮೂತ್ರಪಿಂಡದ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ.ಬೇಸಿಗೆಯಲ್ಲಿ ಹೊರಗಿನ ತಾಪಮಾನದ ಜೊತೆಗೆ ದೇಹದೊಳಗೆ ಬಿಸಿ ಬಿಸಿ ನೀರು ಹೋದಾಗ ಎದುರಾಗುವ ಸಮಸ್ಯೆಗಳಿವು. ಹೀಗಾಗಿ ಬೇಸಿಗೆಕಾಲದಲ್ಲಿ ಅತಿಯಾಗಿ ಬಿಸಿನೀರು ಕುಡಿಬೇಡಿ.. ಬಿಸಿನೀರು ಕುಡಿಯೋದಿದ್ರೂ ಕುದಿಸಿದ ನೀರು ತಣ್ಣಗಾದ್ಮೇಲೆ ಕುಡೀರಿ.