ಪ್ರಿನ್ಸ್ ಸಿಗೋಕು ಮೊದಲು ಕಪ್ಪೆಗಳಿಗೆ ಮುತ್ತಿಟ್ಟಿದ್ದೆ! – ತಾಪ್ಸಿ ಬಿಚ್ಚಿಟ್ಟ ಸತ್ಯವೇನು ಗೊತ್ತಾ?
ನನ್ನ ರಾಜಕುಮಾರ ಸಿಗೋಕು ಮೊದಲು ಹಲವು ಕಪ್ಪೆಗಳಿಗೆ ಮುತ್ತಿಕ್ಕಿದ್ದೆ ಎಂದು ಬಾಲಿವುಡ್ನ ಸ್ಟಾರ್ ನಟಿ ತಾಪ್ಸಿ ಪನ್ನು ತನ್ನ ಜೀವನದ ದೊಡ್ಡ ಗುಟ್ಟನ್ನು ರಟ್ಟು ಮಾಡಿದ್ದಾರೆ.
ತಾಪ್ಸಿ ಪನ್ನು ಇತ್ತೀಚೆಗಷ್ಟೇ ಬಾಲಿವುಡ್ನಲ್ಲಿ ಅಬ್ಬರಿಸಿದ್ದ ಡಂಕಿ ಸಿನಿಮಾದಲ್ಲಿ ಸೂಪರ್ಸ್ಟಾರ್ ಶಾರುಖ್ ಖಾನ್ ಜೊತೆ ರೊಮ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದರು.. ಆದ್ರೆ ತೆರೆಯ ಮೇಲಿನ ರೊಮಾನ್ಸ್ಗಿಂತಲೂ ಈಗ ತನ್ನ ಮದುವೆ ಬಗ್ಗೆ ಜೂಮ್ಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿದ್ದಾರೆ.. ನನ್ನ ರಾಜಕುಮಾರ ಸಿಗೋಕು ಮೊದಲು ನಾನು ಹಲವು ಕಪ್ಪೆಗಳಿಗೆ ಕಿಸ್ ಕೊಟ್ಟಿದ್ದೆ ಎಂದು ತನ್ನ ಹಳೆಯ ರಿಲೇಷನ್ಶಿಪ್ಗಳ ಬಗ್ಗೆ ತಾಪ್ಸಿ ಬಾಯಿಬಿಟ್ಟಿದ್ದಾರೆ.. ಆದ್ರೆ ಅಂತಹ ಕಪ್ಪೆಗಳಿಂದ ತನ್ನ ಜೀವನದಲ್ಲಿ ನಿಜವಾದ ಪ್ರೀತಿ ಸಿಗಲ್ಲ ಅಂತ ಗೊತ್ತಾದ ಮೇಲೆ ನಾನು ದೂರವಾಗಿದ್ದೇನೆ ಎಂದು ತಾಪ್ಸಿ ವಿವರಿಸಿದ್ದಾರೆ.
ಇದನ್ನೂ ಓದಿ: ಏಳು ವರ್ಷಗಳ ಬಳಿಕ ರಣಜಿ ಟ್ರೋಫಿ ಗೆದ್ದ ಮುಂಬೈ – ವಿದರ್ಭ ತಂಡಕ್ಕೆ ಭಾರೀ ನಿರಾಸೆ
ಜೊತೆಗೆ ನಾನು ಬಯಸಿದ್ದು ಒಬ್ಬ ನಿಜವಾದ ಗಂಡಸನ್ನು ಯಾವುದೇ ಹುಡುಗರನ್ನು ಅಲ್ಲ ಎನ್ನುವುದು ತನಗೆ ತಡವಾಗಿ ಅರ್ಥವಾಯಿತು ಎಂದು ಹಳೆಯ ರಿಲೇಷನ್ಶಿಪ್ಗಳ ಬಗ್ಗೆ ತಾಪ್ಸಿ ವಿವರಣೆ ನೀಡಿದ್ದಾರೆ.. ಇಷ್ಟಕ್ಕೂ ತನ್ನ ಗೆಳೆಯ ಹಾಗೂ ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋಯೆ ಅವರನ್ನು ತಾಪ್ಸಿ ಪನ್ನು ಮದುವೆಯಾಗುತ್ತಿದ್ದಾರೆ.. ಬಹುತೇಕ ಮಾರ್ಚ್ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ಸಿಂಪಲ್ ಆಗಿ ಮ್ಯಾರೇಜ್ ಆಗಲು ತಾಪ್ಸಿ ನಿರ್ಧರಿಸಿದ್ದಾರಂತೆ.. ಆದರೆ ತನ್ನ ಮದುವೆಯ ಸುದ್ದಿ ಬಗ್ಗೆ ಯಾರೂ ರೂಮರ್ ಎಲ್ಲಾ ಮಾಡೋದು ಬೇಡ.. ನನ್ನ ಜೀವನ ಅತ್ಯಂತ ಖುಷಿಯ ಸಂಗತಿಯನ್ನು ನಾನೇ ಖಚಿತವಾಗಿ ಹೇಳುತ್ತೇನೆ.. ಯಾವಾಗ ಮದುವೆಯಾಗಬೇಕು, ಹೇಗೆ ಮದುವೆಯಾಗಬೇಕು ಅನ್ನೋದರ ಬಗ್ಗೆಯೆಲ್ಲಾ ನಾನು ನಿರ್ಧರಿಸುತ್ತೇನೆ ಎಂದು ಖಡಕ್ ಆಗಿಯೇ ತಾಪ್ಸಿ ಹೇಳಿದ್ದಾರೆ.. ತನ್ನ ಜೀವನದಲ್ಲಿ ನಡೆದ ಘಟನೆಗಳನ್ನೆಲ್ಲಾ ಇಷ್ಟು ಮುಕ್ತವಾಗಿ ಮಾತಾಡುತ್ತಿರುವಾಗ ಮದುವೆಯ ವಿಚಾರವನ್ನು ಹೇಳದೇ ಇರುತ್ತೇನೆಯೇ ಎಂದು ತಾಪ್ಸಿ ಪ್ರಶ್ನಿಸಿರೋದ್ರಿಂದ, ಮದುವೆ ದಿನದ ಬಗ್ಗೆ ಅವರ ಘೋಷಣೆಗಾಗಿ ಕಾಯಬೇಕಷ್ಟೇ.