ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಸ್ಕ್ವಾಡ್ನಿಂದ ಕೊಹ್ಲಿ ಔಟ್? – ವಿರಾಟ್ ಕೊಹ್ಲಿ RCBಗೆ ಜಾಯಿನ್ ಆಗಲ್ವಾ?
ವಿರಾಟ್ ಕೊಹ್ಲಿ ವಿಚಾರದಲ್ಲಿ ನಿಜಕ್ಕೂ ಸೆನ್ಸೇಷನಲ್ ಡೆವಲಪ್ಮೆಂಟ್ಗಳಾಗ್ತಾ ಇದೆ. ಎಲ್ಲರ ಫೋಕಸ್ ಈಗ ಕೊಹ್ಲಿಯ ಕಡೆಗೆ ಶಿಫ್ಟ್ ಆಗಿದೆ. ವಂಡೇ ವರ್ಲ್ಡ್ಕಪ್ ಫೈನಲ್ ಬಳಿಕ ಕೊಹ್ಲಿ ಟೀಂ ಇಂಡಿಯಾ ಪರ ಆಡಿರೋದು ಕೇವಲ ನಾಲ್ಕು ಮ್ಯಾಚ್ಗಳು ಮಾತ್ರ. ಸೌತ್ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಎರಡು ಟಿ20 ಮ್ಯಾಚ್ಗಳು. ಇದಾದ್ಮೇಲೆ ಇಂಗ್ಲೆಂಡ್ ವಿರುದ್ಧದ ಐದೂ ಟೆಸ್ಟ್ ಮ್ಯಾಚ್ಗಳನ್ನ ಕೂಡ ಕೊಹ್ಲಿ ಆಡಿಲ್ಲ. ಅಷ್ಟೇ ಅಲ್ಲ, ಕೊಹ್ಲಿ ಕಮ್ಬ್ಯಾಕ್ ಮಾಡೋದು ಯಾವಾಗ ಅನ್ನೋದು ಕೂಡ ಯಾರಿಗೂ ಗೊತ್ತಿಲ್ಲ. ಬಿಸಿಸಿಐಗೂ ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಇವೆಲ್ಲದ್ರ ಪರಿಣಾಮ ಈಗ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಪ್ಲೇಸ್ಮೆಂಟ್ಗೆ ಕಂಟಕ ಎದುರಾಗಿದೆ. ಟಿ20 ವರ್ಲ್ಡ್ಕಪ್ಗೆ ಟೀಂ ಇಂಡಿಯಾ ಸ್ಕ್ವಾಡ್ನಿಂದಲೇ ಕೊಹ್ಲಿ ಔಟಾಗೋ ಸಾಧ್ಯತೆ ಇದೆ.
ಇದನ್ನೂ ಓದಿ: ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಮಾತಾಡಿದ್ಯಾಕೆ?- ಹಿಟ್ಮ್ಯಾನ್ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ಯಾಕೆ?
ಐಪಿಎಲ್ ಆದ ಕೂಡಲೇ ಜೂನ್ನಲ್ಲಿ ಟಿ20 ವರ್ಲ್ಡ್ಕಪ್ ನಡೀತಾ ಇದೆ. ವಿಶ್ವಕಪ್ಗೆ ಟೀಂ ಇಂಡಿಯಾ ಸ್ಕ್ವಾಡ್ ಇನ್ನಷ್ಟು ಅನೌನ್ಸ್ ಆಗಬೇಕಿದೆ. ಮೇ ಮೊದಲ ವಾರದಲ್ಲೇ ಬಿಸಿಸಿಐ ವರ್ಲ್ಡ್ಕಪ್ಗೆ ಅಂತಾ 15 ಮಂದಿ ಪ್ಲೇಯರ್ಸ್ಗಳ ಹೆಸರನ್ನ ಬಿಸಿಸಿಐ ಅನೌನ್ಸ್ ಮಾಡುತ್ತೆ. ಮೇ 23ಕ್ಕೆ ಟೀಂನಲ್ಲಿ ಏನಾದ್ರೂ ಚೇಂಜೆಸ್ಗಳಿದ್ರೆ ಅದನ್ನ ಕೂಡ ಫೈನಲ್ ಮಾಡಲಾಗುತ್ತೆ. ಟಿ20 ವರ್ಲ್ಡ್ಕಪ್ಗೆ ಸಂಬಂಧಿಸಿ ಬಿಸಿಸಿಐ ಒಂದು ವಿಚಾರದಲ್ಲಿ ಮಾತ್ರ ಕ್ಲ್ಯಾರಿಟಿ ಕೊಟ್ಟಿದೆ. ಟೀಂ ಇಂಡಿಯಾವನ್ನ ರೋಹಿತ್ ಶರ್ಮಾರೇ ಲೀಡ್ ಮಾಡ್ತಾರೆ ಅನ್ನೋದಾಗಿ. ಹೀಗಾಗಿ ಸ್ಕ್ವಾಡ್ನಲ್ಲಿ ರೋಹಿತ್ ಶರ್ಮಾ ಪ್ಲೇಸ್ ಅಂತೂ ಫಿಕ್ಸ್ ಆಗಿದೆ. ಇನ್ನುಳಿದಂತೆ ಐಪಿಎಲ್ನಲ್ಲಿ ಪ್ಲೇಯರ್ಸ್ಗಳ ಪರ್ಫಾಮೆನ್ಸ್ ನೋಡಿಕೊಂಡು ಬಿಸಿಸಿಐ ವರ್ಲ್ಡ್ಕಪ್ ಟೀಂಗೆ ಆಟಗಾರರನ್ನ ಸೆಲೆಕ್ಟ್ ಮಾಡಲಾಗುತ್ತೆ. ಆದ್ರೆ ಇಲ್ಲಿ ಬಿಗ್ ಕ್ವಶ್ಚನ್ ಮಾರ್ಕ್ ಆಗಿರೋದು ಟೀಂ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ. ಇಡೀ ಇಂಗ್ಲೆಂಡ್ ವಿರುದ್ಧದ ಸೀರಿಸ್ನಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಅವೈಲೇಬಲ್ ಆಗಿಲ್ಲದೇ ಇದ್ದಿದ್ರಂದ ಇದೀಗ ಬಿಸಿಸಿಐ ಅತ್ಯಂತ ಶಾರ್ಪ್ ಡಿಸೀಶನ್ ತೆಗೆದುಕೊಳ್ಳೋಕೆ ಚಿಂತನೆ ನಡೆಸ್ತಿದ್ಯಂತೆ. ಟಿ20 ವರ್ಲ್ಡ್ಕಪ್ ಸ್ಕ್ವಾಡ್ನಿಂದ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡೋಕೆ ಪ್ಲ್ಯಾನ್ ಮಾಡ್ತಿದ್ಯಂತೆ. ಈ ಬಗ್ಗೆ ಸಾಕಷ್ಟು ಮೀಡಿಯಾ ರಿಪೋರ್ಟ್ಸ್ ಕೂಡ ಈಗ ಪಬ್ಲಿಶ್ ಆಗಿದೆ.
ಸೆಲೆಕ್ಟರ್ಸ್ ಪ್ರಕಾರ ಟಿ20 ಫಾರ್ಮೆಟ್ನಲ್ಲಿ ವಿರಾಟ್ ಕೊಹ್ಲಿ ಇತ್ತೀಚೆಗೆ ಅಷ್ಟಾಗಿ ಪರ್ಫಾಮ್ ಮಾಡ್ತಾ ಇಲ್ಲ. ಆದ್ರೆ ಒಂದು ವೇಳೆ ಈ ಬಾರಿಯ ಐಪಿಎಲ್ನಲ್ಲಿ ಕೊಹ್ಲಿ ಟಾಪ್ ಕ್ಲಾಸ್ ಬ್ಯಾಟಿಂಗ್ ಮಾಡಿದ್ರೆ ಸೆಲೆಕ್ಷನ್ ಕಮಿಟಿ ಕೂಡ ತನ್ನ ಡಿಸೀಶನ್ನನ್ನ ಚೇಂಜ್ ಮಾಡಬಹುದು ಅಂತಾ ಹೇಳಲಾಗ್ತಿದೆ. ಇನ್ನೂ ಕೆಲ ರಿಪೋರ್ಟ್ಗಳ ಪ್ರಕಾರ, ಯಂಗ್ಸ್ಟರ್ಸ್ಗಳಿಗೆ ಟೀಮ್ನಲ್ಲಿ ಅವಕಾಶ ನೀಡೋಕೆ ದಾರಿ ಮಾಡಿಕೊಡುವಂತೆ ವಿರಾಟ್ ಕೊಹ್ಲಿಯನ್ನ ಕನ್ವಿನ್ಸ್ ಮಾಡಿ ಅಂತಾ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ಗೆ ಬಿಸಿಸಿಐ ಸೂಚಿಸಿದ್ಯಂತೆ. ಹೀಗಾಗಿ ಅಜಿತ್ ಅಗರ್ಕರ್ ಕೂಡ ವಿರಾಟ್ ಕೊಹ್ಲಿ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಟಿ20 ಫಾರ್ಮೆಟ್ನಲ್ಲಿ ಕೊಹ್ಲಿ ಬ್ಯಾಟಿಂಗ್ನಲ್ಲಿ ಬದಲಾವಣೆಯಾಗಬೇಕಾದ ಅವಶ್ಯಕತೆ ಇದೆ. ಟಿ20 ಆಡೋವಾಗ ಅಪ್ರೋಚ್ನ್ನ ಬದಲಾಯಿಸಬೇಕು. ಇನ್ನಷ್ಟು ಅಗ್ರೆಸ್ಸಿವ್ ಆಗಿ ಆಡಬೇಕು ಅಂತಾ ವಿರಾಟ್ ಕೊಹ್ಲಿ ಜೊತೆಗೆ ಅಜಿತ್ ಅಗರ್ಕರ್ ಮಾತುಕತೆ ನಡೆಸಿದ್ದಾರಂತೆ. 2022ರಲ್ಲಿ ಟಿ20 ವರ್ಲ್ಡ್ಕಪ್ ಬಳಿಕ ವಿರಾಟ್ ಕೊಹ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಯಾವುದೇ ಟಿ20 ಮ್ಯಾಚ್ಗಳನ್ನ ಆಡಿಲ್ಲ. ಅಫ್ಘಾನಿಸ್ತಾನ ವಿರುದ್ಧ ಎರಡು ಮ್ಯಾಚ್ಗಳಲ್ಲೊ ಕೊಹ್ಲಿಯ ಹೈಯೆಸ್ಟ್ ಸ್ಕೋರ್ 29 ರನ್. ಹೀಗಾಗಿ ಟಿ20 ಫಾರ್ಮೆಟ್ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಸೆಲೆಕ್ಷನ್ ಕಮಿಟಿ ಕನ್ಸರ್ನ್ ವ್ಯಕ್ತಪಡಿಸಿದೆ.
ಇದ್ರ ಜೊತೆಗೆ ವಿರಾಟ್ ಕೊಹ್ಲಿ ವಿಚಾರದಲ್ಲಿ ಸಲೆಕ್ಷನ್ ಕಮಿಟಿ ಇನ್ನೊಂದು ಸೂಕ್ಷ್ಮ ಸಂಗತಿಯನ್ನ ಕೂಡ ರೇಸ್ ಮಾಡಿದ್ಯಂತೆ. ನಿಮಗೆ ಗೊತ್ತಿರೋ ಹಾಗೆ ವೆಸ್ಟ್ಇಂಡೀಸ್ ಮತ್ತು ಅಮೆರಿಕದಲ್ಲಿ ಈ ಬಾರಿಯ ಟಿ20 ವರ್ಲ್ಡ್ಕಪ್ ನಡೀತಾ ಇದೆ. ಈ ಪೈಕಿ ವೆಸ್ಟ್ಇಂಡೀಸ್ನಲ್ಲೇ ಹೆಚ್ಚಿನ ಮ್ಯಾಚ್ಗಳು ನಡೆಯುತ್ತೆ. ಆದ್ರೆ ವೆಸ್ಟ್ಇಂಡೀಸ್ನದ್ದು ಸ್ಲೋ ವಿಕೆಟ್ಗಳಾಗಿರುತ್ತೆ. ಬಿಸಿಸಿಐ ಸಲೆಕ್ಷನ್ ಕಮಿಟಿ ಪ್ರಕಾರ ಇಂಥಾ ಸ್ಲೋ ಪಿಚ್ಗಳು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿಗೆ ಸೂಟ್ ಆಗೋದಿಲ್ವಂತೆ. ಕೊಹ್ಲಿಯ ನ್ಯಾಚ್ಯುರಲ್ ಬ್ಯಾಟಿಂಗ್ ಸ್ಟೈಲ್ಗೆ ವೆಸ್ಟ್ಇಂಡೀಸ್ನ ಪಿಚ್ಗಳ ಸೆಟ್ ಆಗೋದಿಲ್ಲ ಅನ್ನೋ ಸೆಲೆಕ್ಷನ್ ಕಮಿಟಿ ಮೆಂಬರ್ಸ್ಗಳ ಒಪೀನಿಯನ್. ಹೀಗಾಗಿ ಟಿ20 ವರ್ಲ್ಡ್ಕಪ್ ಸ್ಕ್ವಾಡ್ನಿಂದ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್ ಅಥವಾ ಶಿವಮ್ ದುಬೆಯನ್ನ ಮಿಡ್ಲ್ ಆರ್ಡರ್ನ್ನ ಕ್ರೀಸ್ಗಿಳಿಸೋದು ಬೆಟರ್ ಅನ್ನೋ ಲೆಕ್ಕಾಚಾರದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಇದೆ.
ಹಾಗಂತಾ ಟಿ20 ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾ ಬಾಗಿಲು ವಿರಾಟ್ ಕೊಹ್ಲಿಗೆ ಕಂಪ್ಲೀಟ್ ಬಂದ್ ಆಗಿದೆ ಅಂತೇನಲ್ಲ. ಐಪಿಎಲ್ನಲ್ಲಿ ಕೊಹ್ಲಿಯ ಪರ್ಫಾಮೆನ್ಸ್ ತುಂಬಾನೆ ಕ್ರೂಶಿಯಲ್ ಆಗಿರಲಿದೆ. ರಾಯಲ್ ಚಾಲೆಂಜರ್ಸ್ ಪರ ಕೊಹ್ಲಿ ಟಾಪ್ ಕ್ಲಾಸ್ ಬ್ಯಾಟಿಂಗ್ ಮಾಡಿದ್ರೆ, ರನ್ ಮಳೆಯನ್ನೇ ಹರಿಸಿದ್ರೆ ಆಗ ಟಿ20 ವರ್ಲ್ಡ್ಕಪ್ ಟೀಂನಿಂದ ಕೊಹ್ಲಿಯನ್ನ ಡ್ರಾಪ್ ಮಾಡೋ ಪ್ರಶ್ನೆಯೇ ಬರೋದಿಲ್ಲ. ವೆಸ್ಟ್ಇಂಡೀಸ್ನದ್ದು ಸ್ಲೋ ವಿಕೆಟ್..ಕೊಹ್ಲಿಗೆ ರನ್ ಮಾಡೋದು ಕಷ್ಟ ಅಂತೆಲ್ಲಾ ಸೆಲೆಕ್ಷನ್ ಕಮಿಟಿಗೆ ರೀಸನ್ ಕೊಡೋಕೂ ಆಗೋದಿಲ್ಲ. ವಿರಾಟ್ ಕೊಹ್ಲಿಯನ್ನ ವರ್ಲ್ಡ್ಕಪ್ ಸ್ಕ್ವಾಡ್ಗೆ ಸೆಲೆಕ್ಟ್ ಮಾಡಲೇಬೇಕಾಗುತ್ತೆ. ಹೀಗಾಗಿ ಈ ಬಾರಿಯ ಐಪಿಎಲ್ ವಿರಾಟ್ ಕೊಹ್ಲಿ ಪಾಲಿಗೆ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ. ಒಂದು ವೇಳೆ ವರ್ಲ್ಡ್ಕಪ್ಗೆ ಸೆಲೆಕ್ಷನ್ ಆದ್ರೆ ರೋಹಿತ್ ಶರ್ಮಾರಂತೆ ಕೊಹ್ಲಿಗೂ ಇದು ಕೊನೆಯ ಟಿ20 ವರ್ಲ್ಡ್ಕಪ್ ಆಗಿರಲಿದೆ. ಟೀಂನಲ್ಲಿ ಚಾನ್ಸ್ ಮಿಸ್ ಆಯ್ತು ಅಂದ್ರೆ ಇನ್ಮುಂದೆ ಟಿ20 ವರ್ಲ್ಡ್ಕಪ್ ಆಡೋದಿಕ್ಕೆ ಕೊಹ್ಲಿಗೆ ಅವಕಾಶ ಸಿಗೋದಿಲ್ಲ. ಇದಂತೂ ಗ್ಯಾರಂಟಿ.
ಆದ್ರೆ ವಿರಾಟ್ ಕೊಹ್ಲಿಯನ್ನ ಟಿ20 ವರ್ಲ್ಡ್ಕಪ್ನಿಂದ ಡ್ರಾಪ್ ಮಾಡೋ ಬಗ್ಗೆ ಸಾಕಷ್ಟು ಕ್ರಿಟಿಸಿಸಮ್ ಕೂಡ ಬರ್ತಾ ಇದೆ. ಪಾಕಿಸ್ತಾನನ ಮಾಜಿ ಆಟಗಾರ ಮೊಹಮ್ಮದ್ ಇರ್ಫಾನ್ ಕೂಡ ಈ ಬಗ್ಗೆ ಮಾತನಾಡಿದ್ದು, ವರ್ಲ್ಡ್ಕಪ್ ಸ್ಕ್ವಾಡ್ನಿಂದ ಕೊಹ್ಲಿಯನ್ನ ಡ್ರಾಪ್ ಮಾಡಬೇಕು ಅಂತಾ ಹೇಳುವವರು ಗಲ್ಲಿ ಕ್ರಿಕೆಟ್ಗೆ ಸೇರಿದವರು ಅಂತಾ ಕ್ರಿಟಿಸಯಸ್ ಮಾಡಿದ್ದಾರೆ. ವಿರಾಟ್ ಕೊಹ್ಲಿಯಂಥಾ ಬಿಗ್ ಬ್ಯಾಟ್ಸ್ಮನ್ ಇಲ್ಲದೆ ಒಂದು ಸ್ಟ್ರಾಂಗ್ ಟೀಮ್ನ್ನ ಕಟ್ಟೋಕೆ ಸಾಧ್ಯವಿಲ್ಲ. ಕಳೆದ ವಂಡೇ ವರ್ಲ್ಡ್ಕಪ್ನಲ್ಲಿ 3-4 ಮ್ಯಾಚ್ಗಳನ್ನ ಕೊಹ್ಲಿ ಏಕಾಂಗಿಯಾಗಿಯೇ ಗೆಲ್ಲಿಸಿಕೊಟ್ಟಿದ್ದಾರೆ. ಅಂಥಾ ಪ್ಲೇಯರ್ನ್ನ ಟೀಮ್ನಿಂದ ಡ್ರಾಪ್ ಮಾಡೋದ್ರಲ್ಲಿ ಅರ್ಥವೇ ಇಲ್ಲ ಪಾಕ್ ಮಾಜಿ ಕ್ರಿಕೆಟರ್ ಮೊಹಮ್ಮದ್ ಇರ್ಫಾನ್ ಹೇಳಿದ್ದಾರೆ. ಆ್ಯಕ್ಚುವಲಿ, ಮೊಹಮ್ಮದ್ ಇರ್ಫಾನ್ ಹೇಳಿರೋದು ಕೂಡ ನಿಜವೇ. ವರ್ಲ್ಡ್ಕಪ್ನಂಥಾ ಟೂರ್ನಿಗಳಲ್ಲಿ ಒಪೊಸಿಶನ್ ಟೀಮ್ಗಳ ಪಾಲಿಗೆ ವಿರಾಟ್ ಕೊಹ್ಲಿ ವೆರಿ ವೆರಿ ಡೇಂಜರಸ್ ಪ್ಲೇಯರ್. ವರ್ಲ್ಡ್ಕಪ್ನಂಥಾ ಮೇನ್ ಟೂರ್ನಿಗಳಲ್ಲಂತೂ ಕೊಹ್ಲಿ ನೆಕ್ಸ್ಟ್ ಲೆವೆಲ್ನ ಪರ್ಫಾಮೆನ್ಸ್ ನೀಡ್ತಾನೆ ಬಂದಿದ್ದಾರೆ. 2022ರ ಟಿ20 ವರ್ಲ್ಡ್ಕಪ್ನಲ್ಲೂ ಅಷ್ಟೇ ಕೊಹ್ಲಿ ಟೀಂ ಇಂಡಿಯಾ ಪರ ಟಾಪ್ ಸ್ಕೋರರ್ ಆಗಿದ್ರು. ಪಾಕಿಸ್ತಾನ ವಿರುದ್ಧದ ಮ್ಯಾಚ್ನ್ನ ಲಾಸ್ಟ್ ಎರಡು ಓವರ್ಗಳಲ್ಲಿ ಹೇಗೆ ಟರ್ನ್ ಮಾಡಿದ್ರು ಅನ್ನೋದನ್ನ ನೀವು ನೋಡಿದ್ರೆ. ವಿರಾಟ್ ಕೊಹ್ಲಿ ಟೀಮ್ನಲ್ಲಿದ್ದಾರೆ ಅಂದ್ರೆ ಟೀಂಗೆ ಮಾರಲಿ ತುಂಬಾನೆ ಸ್ಟ್ರೆಂತ್ ಸಿಗುತ್ತೆ. ಈ ವಿಚಾರವಾಗಿ ಅನಿಲ್ ಕುಂಬ್ಳೆ ಅವರು ಲೇಟೆಸ್ಟ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್ ಆ್ಯಟಿಟ್ಯೂಡ್ ಟೀಮ್ಗೆ ಇನ್ನಷ್ಟು ಇಂಟೆನ್ಸಿಟಿಯನ್ನ ತಂದು ಕೊಡುತ್ತೆ. ಎಸ್ಪೆಷಲಿ ಟಿ20 ಮ್ಯಾಚ್ಗಳನ್ನ ಆಡೋವಾಗ ಈ ಅಗ್ರೆಸ್ಸಿವ್ನೆಸ್, ಇಂಟೆನ್ಸಿಟಿ ಹೆಲ್ಪ್ ಆಗುತ್ತೆ ಅಂತಾ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇವೆಲ್ಲದ್ರ ಮಧ್ಯೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಆಡ್ತಾರಾ? ಇಲ್ವಾ? ಅನ್ನೋ ಬಗ್ಗೆಯೂ ಒಂದಷ್ಟು ಚರ್ಚೆಗಳಿವೆ. ಇದುವರೆಗೂ ಕೊಹ್ಲಿ ಐಪಿಎಲ್ನಲ್ಲಿ ಆಡೋ ಬಗ್ಗೆ ಯಾವುದೇ ಕ್ಲ್ಯಾರಿಟಿ ಕೊಟ್ಟಿಲ್ಲ. ಆರ್ಸಿಬಿ ಕ್ಯಾಂಪ್ನ್ನ ಕೂಡ ಕೊಹ್ಲಿ ಜಾಯಿನ್ ಆಗಿಲ್ಲ. ಎಬಿಡಿ ವಿಲಿಯರ್ಸ್ ಅಂತೂ ನತಿಂಗ್ ಈಸ್ ಕನ್ಫರ್ಮ್ಡ್ ಯೆಟ್ ಅಂತಾ ಹೇಳಿದ್ದಾರೆ. ಆದ್ರೆ ಕೆಲ ರಿಪೋರ್ಟ್ಗಳ ಪ್ರಕಾರ ಮಾರ್ಚ್ 17ರ ಒಳಗೆ ವಿರಾಟ್ ಕೊಹ್ಲಿ ಆರ್ಸಿಬಿಯನ್ನ ಜಾಯಿನ್ ಆಗ್ತಾರಂತೆ. ಮಾರ್ಚ್ 19ಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಪ್ರಮೋಷನಲ್ ಈವೆಂಟ್ ಕೂಡ ಇದೆ. ಒಂದು ವೇಳೆ ಆಗಲೂ ಕೊಹ್ಲಿ ಟೀಮ್ನ್ನ ಜಾಯಿನ್ ಆಗಿಲ್ಲಾಂದ್ರೆ ಸಮ್ಥಿಂಗ್ ಫಿಶ್ಶೀ ಅಂತಾನೆ ಅರ್ಥ. ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಂತೂ ವಿರಾಟ್ ಕೊಹ್ಲಿ ಈ ಬಾರಿ 2016ರ ಐಪಿಎಲ್ ಟೂರ್ನಿಯನ್ನ ಆಡಿದ ರೀತಿ ಆಡ್ಬೇಕು ಅಂತಾ ಹೇಳಿದ್ದಾರೆ. 2016ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 973 ರನ್ ಗಳಿಸಿದ್ರು. ಈ ಬಾರಿಯೂ ಅದೇ ರೀತಿ ಸ್ಕೋರ್ ಮಾಡಿದ್ರೆ ಕೊಹ್ಲಿಯನ್ನ ಟಿ20 ವರ್ಲ್ಡ್ಕಪ್ ಸ್ಕ್ವಾಡ್ನಿಂದ ಡ್ರಾಪ್ ಮಾಡೋ ಪ್ರಶ್ನೆಯೇ ಬರೋದಿಲ್ಲ.