ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ – ಆರೋಪಿ ಬೆಂಗಳೂರು ಪ್ರವೇಶ ಮಾಡಿದ್ದು ಹೇಗೆ ಗೊತ್ತಾ?
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡು 13 ದಿನಗಳೇ ಕಳೆದಿವೆ. ಆದರೂ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯ ಆಗುತ್ತಿಲ್ಲ. ಇದೀಗ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಬೆಂಗಳೂರು ಪ್ರವೇಶ ಮಾಡಿದ್ದು ಹೇಗೆ ಅಂತಾ ಎನ್ಐಎ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಆಧಾರ್ ಅಪ್ಡೇಟ್ ಮಾಡಲು ಗಡುವು ಮತ್ತೆ ವಿಸ್ತರಣೆ – ಜೂನ್ 14ಕ್ಕೆ ಕೊನೆ ದಿನ
ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ಪ್ರಕರಣದ ತನಿಖೆ ತೀವ್ರಗೊಂಡಿದೆ. ಒಂದೊಂದೇ ಸ್ಪೋಟಕ ವಿಚಾರಗಳು ಬಯಲಾಗುತ್ತಲೇ ಇದೆ. ಇದೀಗ ಶಂಕಿತ ಉಗ್ರ ಎಲ್ಲಿಂದ ಬಂದ ಅಂತಾ ಎನ್ಐಎ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಶಂಕಿತ ಉಗ್ರ ಬ್ಲಾಸ್ಟ್ ನಡೆಸಿದ ದಿನವೇ ಬೆಂಗಳೂರು ಬಂದಿದ್ದಾನೆ. ಚೆನ್ನೈ ನಿಂದ ತಿರುಪತಿ ಗೆ ರೈಲಿನಲ್ಲಿ ಬಂದು, ತಿರುಪತಿ ಯಿಂದ ಬಸ್ ಮೂಲಕ ಬೆಂಗಳೂರು ತಲುಪಿದ್ದಾನೆ. ಬಳಿಕ ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ಆರೋಪಿ ಇಳಿದಿದ್ದಾನೆ. ನಂತರ ಮಹದೇವಪುರದ ಇಂಡಿಯಾ ಸರ್ಕಲ್ ಬಳಿ ಬಸ್ ಬದಲಾವಣೆ ಮಾಡಿದ್ದಾನೆ. ಬಳಿಕ ಬ್ರೂಕ್ ಫೀಲ್ಡ್ ಕಡೆಗಿನ ಬಸ್ ಏರಿ ರಾಮೇಶ್ವರ ಕೆಫೆಗೆ ಆಗಮಿಸಿದ್ದಾನೆ.
ಇನ್ನು ಸಂಚಾರಕ್ಕೆ ನೇರ ಮಾರ್ಗಗಳನ್ನು ಬಳಸದೆ ಸುತ್ತಿ ಬಳಸಿ ಬಂದು ಮತ್ತೆ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಆತನ ಹೈಡ್ ಔಟ್ ಸೇರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ತನಿಖಾ ತಂಡಗಳಿಂದ ಕರ್ನಾಟಕ, ತೆಲಂಗಾಣ, ಮತ್ತು ತಮಿಳುನಾಡಿನ ಹಲವಾರು ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ.