ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಮಾತಾಡಿದ್ಯಾಕೆ?- ಹಿಟ್ಮ್ಯಾನ್ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ಯಾಕೆ?
ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಈಗ ತಮ್ಮ ಕೆರಿಯರ್ನ ಪೀಕ್ನಲ್ಲಿದ್ದಾರೆ. ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡ್ತಿದೆ. ವಂಡೇ, ಟೆಸ್ಟ್ ಎಲ್ಲಾ ಫಾರ್ಮೆಟ್ನಲ್ಲಿ ಭಾರತೀಯ ತಂಡ ಸಕ್ಸಸ್ ಕಾಣ್ತಿದೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧದ ಸೀರಿಸ್ ವಿನ್ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯ ವೇಯ್ಟೇಜ್ನ್ನ ಇನ್ನಷ್ಟು ಹೆಚ್ಚಿಸಿದೆ. ಯಾಕಂದ್ರೆ ಟೀಂನಲ್ಲಿದ್ದವರೆಲ್ಲಾ ಆಲ್ಮೋಸ್ಟ್ ಯಂಗ್ಸ್ಟರ್ಸ್ಗಳೇ. ಡೆಬ್ಯೂ ಆಟಗಾರರನ್ನ, ಇನ್ಎಕ್ಸ್ಪೀರಿಯನ್ಸ್ಡ್ ಪ್ಲೇಯರ್ಸ್ಗಳನ್ನಿಟ್ಟುಕೊಂಡೇ ಫುಲ್ ಫ್ಲೆಡ್ಜ್ ಸ್ಕ್ವಾಡ್ನಲ್ಲಿ ಬಂದಿದ್ದ ಇಂಗ್ಲೆಂಡ್ನ್ನ ಹೀನಾಯವಾಗಿ ಸೋಲಿಸಿದ್ದಾರೆ. ಯಂಗಸ್ಟರ್ಸ್ಗಳನ್ನ ರೋಹಿತ್ ಶರ್ಮಾ ಎನ್ಕರೇಜ್ ಮಾಡಿ, ಪುಶ್ ಮಾಡಿದ ರೀತಿ ನಿಜಕ್ಕೂ ನೆಕ್ಸ್ಟ್ ಲೆವೆಲ್ನಲ್ಲಿತ್ತು. ರೋಹಿತ್ ಭವಿಷ್ಯದ ಟೀಂ ಇಂಡಿಯಾವನ್ನ, ನೆಕ್ಸ್ಟ್ ಜನರೇಷನ್ ಟೀಮ್ನ್ನ ರೆಡಿ ಮಾಡ್ತಿದ್ದಾರೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಟ್ ರೋಹಿತ್ ಕ್ಯಾಪ್ಟನ್ಸಿಯನ್ನ ಫ್ಯಾನ್ಸ್ ಸೆಲೆಬ್ರೇಟ್ ಮಾಡೋ ಟೈಮ್ನಲಲ್ಲೇ ಹಿಟ್ಮ್ಯಾನ್ ಒಂದು ಇಂಪಾರ್ಟೆಂಟ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ರಿಟೈರ್ಮೆಂಟ್ ಬಗ್ಗೆ ರೋಹಿತ್ ಮಾತನಾಡಿದ್ದಾರೆ.
ಇದನ್ನೂ ಓದಿ: ಸಿಕ್ಸ್ ಹೊಡೆದರೆ 9 ರನ್..! – ಟಿ10 ಕ್ರಿಕೆಟ್ ರೂಲ್ಸ್ ಫುಲ್ ಡಿಫರೆಂಟ್
ಕೆಲ ವರ್ಷಗಳ ಹಿಂದೆ ರೋಹಿತ್ ಶರ್ಮಾ ಭಾರತೀಯ ಟೆಸ್ಟ್ ತಂಡದಲ್ಲಿ ಪರ್ಮನೆಂಟ್ ಸ್ಥಾನ ಪಡೆದಿರಲಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 16-17 ವರ್ಷಗಳ ಎಕ್ಸ್ಪೀರಿಯನ್ಸ್ ಆದ್ರೂ ಕೂಡ ರೋಹಿತ್ ಇದುವರೆಗೆ ಆಡಿರೋದು 59 ಟೆಸ್ಟ್ ಮ್ಯಾಚ್ಗಳನ್ನ. ಆದ್ರೆ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಇವ್ರೆಲ್ಲಾ 100 ಟೆಸ್ಟ್ ಮ್ಯಾಚ್ಗಳನ್ನ ಕ್ರಾಸ್ ಮಾಡಿದ್ದಾರೆ. ಈಗ ಆರ್.ಅಶ್ವಿನ್ ಕೂಡ 100 ಟೆಸ್ಟ್ ಕ್ಲಬ್ನ್ನ ಸೇರಿಕೊಂಡಿದ್ದಾರೆ. ಆದ್ರೆ ರೋಹಿತ್ ಶರ್ಮಾ ಇದುವರೆಗೆ ಆಡಿರೋದು 59 ಟೆಸ್ಟ್ ಮ್ಯಾಚ್ಗಳನ್ನ ಮಾತ್ರ. 438 ರನ್ ಗಳಿಸಿದ್ದಾರೆ. 12 ಸೆಂಚೂರಿ ಹೊಡೆದಿದ್ದಾರೆ. ಟೋಟಲಿ ರೋಹಿತ್ ಶರ್ಮಾ ಟೆಸ್ಟ್ ಫಾರ್ಮೆಟ್ಗಿಂತ ಹೆಚ್ಚಾಗಿ ವಂಡೇ ಮತ್ತು ಟಿ20ಯಲ್ಲೇ ಹೆಚ್ಚು ಕ್ಲಿಕ್ ಆಗಿರೋದು. ಆದ್ರೆ 2021ರಲ್ಲಿ ಕ್ಯಾಪ್ಟನ್ ಆದ ಬಳಿಕ ರೋಹಿತ್ ಟೆಸ್ಟ್ ಮ್ಯಾಚ್ಗಳನ್ನ ಕೂಡ ಕನ್ಸಿಸ್ಟೆಂಟ್ ಆಗಿ ಆಡ್ತಿದ್ದಾರೆ. ಆ್ಯಕ್ಚುವಲಿ ಹೆಚ್ಚು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಬೇಕು. ಟೆಸ್ಟ್ನಲ್ಲಿ ಸೆಂಚೂರಿ ಡಬಲ್ ಸೆಂಚೂರಿ ಹೊಡಿಬೇಕು ಅನ್ನೋದು ರೋಹಿತ್ ಶರ್ಮಾ ಅವರ ತಂದೆಯ ಡ್ರೀಮ್ ಆಗಿತ್ತು. ರೋಹಿತ್ ತಂದೆ ಟೆಸ್ಟ್ ಫಾರ್ಮೆಟ್ನ ದೊಡ್ಡ ಫಾಲೋವರ್. ಈ ಬಗ್ಗೆ ಇಂಟರ್ವ್ಯೂ ಒಂದರಲ್ಲಿ ರೋಹಿತ್ ಶರ್ಮಾ ಅವರೇ ಹೇಳಿಕೊಂಡಿದ್ರು. ಆದ್ರೆ ಟೆಸ್ಟ್ನಲ್ಲಿ ರೋಹಿತ್ ಇದುವರೆಗೆ ಒಂದು ಡಬಲ್ ಸೆಂಚೂರಿ ಮಾತ್ರ ಹೊಡೆದಿರೋದು. ಬಟ್ ವಂಡೇನಲ್ಲೇ ಮೂರು ಡಬಲ್ ಸೆಂಚೂರಿ ಹೊಡೆದಿದ್ದಾರೆ. ಆದ್ರೀಗ ಕ್ಯಾಪ್ಟನ್ ಆಗಿ ಟೆಸ್ಟ್ ಟೀಂನ್ನ ಕೂಡ ಲೀಡ್ ಮಾಡಿ, ಅಲ್ಲೂ ಸಕ್ಸಸ್ ಆಗಿರೋದು ರೋಹಿತ್ ಶರ್ಮಾಗೆ ತುಂಬಾನೆ ಸ್ಯಾಟಿಸ್ಫ್ಯಾಕ್ಷನ್ ನೀಡಿರುವಂತೆ ಕಾಣ್ತಿದೆ. ಹೀಗಾಗಿ ಎಲ್ಲೋ ಒಂದು ಕಡೆ ರಿಟೈರ್ಮೆಂಟ್ ಬಗ್ಗೆಯೂ ಯೋಚನೆ ಮಾಡ್ತಿದ್ದಾರೆ ಅನ್ಸುತ್ತೆ. ಯಾಕಂದ್ರೆ, ರಿಟೈರ್ಮೆಂಟ್ ವಿಚಾರವಾಗಿ ರೋಹಿತ್ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
ಯಾವಗಾದ್ರೂ ಒಂದು ದಿನ ಬೆಳಗ್ಗೆ ಎದ್ದಾಗ ಅಷ್ಟೊಂದು ಬೆಟರ್ ಫೀಲ್ ಮಾಡ್ತಾ ಇಲ್ಲ, ಇನ್ಮುಂದೆ ಟೀಂ ಇಂಡಿಯಾ ಪರ ಆಡುವಷ್ಟು ಸಾಮರ್ಥ್ಯ ನಂಗೆ ಇಲ್ಲ ಅಂತಾ ಅನ್ನಿಸಿದ್ರೆ ಆ ದಿನವೇ ರಿಟೈರ್ಮೆಂಟ್ ಬಗ್ಗೆ ನಿರ್ಧರಿಸ್ತೇನೆ. ಹಾಗೆಯೇ ಟೀಂ ಜೊತೆಗೂ ಈ ಬಗ್ಗೆ ಮಾತುಕತೆ ನಡೆಸ್ತೇನೆ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಹಾಗೆಯೇ ಕಳೆದ ಮೂರು ವರ್ಷಗಳಲ್ಲಿ ನನ್ನ ಪರ್ಫಾಮೆನ್ಸ್ ಇನ್ನಷ್ಟು ಬೆಟರ್ ಆಗಿದೆ. ನನ್ನ ಕೆರಿಯರ್ನ ಬೆಸ್ಟ್ ಕ್ರಿಕೆಟ್ ಆಡ್ತಿದ್ದೇನೆ. ನಾನು ಯಾವತ್ತೂ ನಂಬರ್ ಬಗ್ಗೆ ತಲೆಕೆಡಿಸಿಕೊಳ್ಳುವವನಲ್ಲ. ಆದ್ರೆ ಬಿಗ್ ಸ್ಕೋರ್ ಗಳಿಸೋದು ಮ್ಯಾಟರ್ ಆಗುತ್ತೆ. ಬಟ್ ನಾನು ಒಂದು ಟೀಮ್ ಆಗಿ ಆಡೋ ಬಗ್ಗೆ ಫೋಕಸ್ ಮಾಡ್ತಾ ಬಂದಿದ್ದೀನಿ. ಪ್ಲೇಯರ್ಸ್ಗೆ ಫುಲ್ ಫ್ರೀಡಂ ಕೊಟ್ಟಿದ್ದೀನಿ. ಇಂಡಿವಿಜ್ಯುವಲ್ ಆಗಿ ಯಾರು ಎಷ್ಟು ಸ್ಕೋರ್ ಮಾಡಿದ್ದಾರೆ. ಎಷ್ಟು ವಿಕೆಟ್ ತೆಗೆದಿದ್ದಾರೆ. ಈ ಸ್ಟ್ಯಾಟಿಸ್ಟಿಕ್ಸ್ಗಳಿಗೆ ಹೆಚ್ಚು ಪ್ರಿಫರೆನ್ಸ್ ಕೊಡೋ ಅವಶ್ಯಕತೆ ಇಲ್ಲ. ನಮ್ಮ ಟೀಮ್ನಲ್ಲಿ ಈಗ ಯಾರು ಕೂಡ ನಂಬರ್ ಬಗ್ಗೆ ಫೋಕಸ್ ಮಾಡೋದಿಲ್ಲ. ಪರ್ಸನಲ್ ಸ್ಕೋರ್ ಎಷ್ಟಾಗಿ ಅನ್ನೋ ಬಗ್ಗೆ ಯೋಚನೆ ಮಾಡೋದಿಲ್ಲ. ಚೆನ್ನಾಗಿ ಆಡ್ತಾ ಇದ್ರೆ ನಂಬರ್ ಅಟೋಮೆಟಿಕಲಿ ಬಂದಿರುತ್ತೆ ಅಂತಾ ರೋಹಿತ್ ಹೇಳಿದ್ದಾರೆ.
ರೋಹಿತ್ ಶರ್ಮಾರ ಈ ಸ್ಟೇಟ್ಮೆಂಟ್ ಪೈಕಿ ಹೆಚ್ಚು ಹೈಲೈಟ್ ಆಗಿರೋದು ರಿಟೈರ್ಮೆಂಟ್ ಬಗ್ಗೆ ಅವರು ಹೇಳಿರೋ ಮಾತು. ಈ ಬಾರಿಯ ಟಿ20 ವರ್ಲ್ಡ್ಕಪ್ಗೆ ಟೀಂ ಇಂಡಿಯಾವನ್ನ ರೋಹಿತ್ ಶರ್ಮಾರೇ ಲೀಡ್ ಮಾಡ್ತಾ ಇದ್ದಾರೆ. ಇದು ರೋಹಿತ್ ಪಾಲಿಗೆ ಕೊನೆಯ ಟಿ20 ವರ್ಲ್ಡ್ಕಪ್ ಆಗಿರಲಿದೆ. ಸೋತ್ರೂ, ಗೆದ್ರೂ ಮುಂದಿನ ವಿಶ್ವಕಪ್ ವೇಳೆಗೆ ರೋಹಿತ್ ಟೀಮ್ನಲ್ಲಿ ಇರೋದಿಲ್ಲ. ಅದಂತೂ ಕನ್ಫರ್ಮ್. 2022ರ ಟಿ20 ವರ್ಲ್ಡ್ಕಪ್ ಬಳಿಕ ರೋಹಿತ್ ಟೀಂ ಇಂಡಿಯಾ ಪರ ಸುಮಾರು ಒಂದೂವರೆ ವರ್ಷಗಳ ಕಾಲ ಯಾವುದೇ ಟಿ20 ಮ್ಯಾಚ್ಗಳನ್ನ ಆಡಿಲ್ಲ. ಕಳೆದ ಅಫ್ಘಾನಿಸ್ತಾನ ವಿರುದ್ಧ ಮೂರು ಮ್ಯಾಚ್ ವೇಳೆ ಟಿ20 ಫಾರ್ಮೆಟ್ಗೆ ಕಮ್ಬ್ಯಾಕ್ ಮಾಡಿದ್ರು. ಇದೀಗ ವರ್ಲ್ಡ್ಕಪ್ನಲ್ಲಿ ಮತ್ತೆ ಟೀಂ ಇಂಡಿಯಾವನ್ನ ರೋಹಿತ್ ಲೀಡ್ ಮಾಡ್ತಾ ಇದ್ದಾರೆ. ಮೋಸ್ಟ್ ಪ್ರಾಬಬ್ಲಿ ರೋಹಿತ್ ಈ ವರ್ಲ್ಡ್ಕಪ್ ಬಳಿಕ ಟಿ20 ಫಾರ್ಮೆಟ್ಗೆ ಮೊದಲು ಗುಡ್ಬೈ ಹೇಳುವ ಸಾಧ್ಯತೆ ಇದೆ. ವರ್ಲ್ಡ್ಕಪ್ ಗೆದ್ರೂ, ಸೋತ್ರೂ ರೋಹಿತ್ ಟಿ20 ಕ್ರಿಕೆಟ್ನಿಂದ ಮೊದಲು ರಿಟೈರ್ ಆಗಬಹುದು. ರೋಹಿತ್ ಫೇವರೇಟ್ ಫಾರ್ಮೆಟ್ ಆಗಿರೋ ವಂಡೇ ಮತ್ತು ಟೆಸ್ಟ್ನಲ್ಲಿ ಮುಂದುವರಿಬಹುದೋ ಏನೋ. ಕೆಲ ವರದಿಗಳ ಪ್ರಕಾರ ವಂಡೇನಲ್ಲಿ ರೋಹಿತ್ ಈಗಾಗ್ಲೇ ಸಾಕಷ್ಟು ಅಚೀವ್ಮೆಂಟ್ ಮಾಡಿದ್ದಾರೆ. ಹೀಗಾಗಿ ಟೆಸ್ಟ್ ಮಾತ್ರ ಆಡಬಹುದು ಅಂತಾನೂ ಹೇಳಲಾಗ್ತಿದೆ. ಅದ್ರೆ ರೋಹಿತ್ ಶರ್ಮಾರ ಮೇನ್ ಗೋಲ್ ಆಗಿರೋದು ವಂಡೇ ವರ್ಲ್ಡ್ಕಪ್ ಗೆಲ್ಲಬೇಕು ಅನ್ನೋದು. 2023ರ ವಿಶ್ವಕಪ್ಗೂ ಮುನ್ನ ರೋಹಿತ್ ಅದನ್ನೇ ಹೇಳಿದ್ರು. ವಂಡೇ ವರ್ಲ್ಡ್ಕಪ್ ಗೆಲ್ಲೋದ್ರಲ್ಲಿರೋ ಫೀಲಿಂಗ್ ಇನ್ಯಾವುದರಲ್ಲೂ ಇಲ್ಲ ಅನ್ನೋ ಮಾತನ್ನ ರೋಹಿತ್ ಹೇಳಿದ್ರು. ಅದು ರೋಹಿತ್ ಶರ್ಮಾರ ಅಲ್ಟಿಮೇಟ್ ಗೋಲ್. ಕಳೆದ ವಿಶ್ವಕಪ್ನಲ್ಲಿ ರೋಹಿತ್ ಟೀಮ್ನ್ನ ಯಾವ ರೀತಿ ಲೀಡ್ ಮಾಡಿದ್ರು. ಫೈನಲ್ವರೆಗೂ ಹೇಗೆ ಟೀಮ್ನ್ನ ತಗೊಂಡುಬಂದ್ರು ಅನ್ನೋದನ್ನ ನೀವು ನೋಡಿದ್ರಿ. ಬಟ್ ಟ್ರೋಫಿ ಮಿಸ್ ಆಯ್ತು. ರೋಹಿತ್ ಕನಸು ನನಸಾಗಿಲ್ಲ. ಈಗ ರೋಹಿತ್ ಶರ್ಮಾಗೆ 36 ವರ್ಷ ವಯಸ್ಸು. ಮುಂದಿನ ವಂಡೇ ವಿಶ್ವಕಪ್ವರೆಗೂ ಟೀಮ್ನಲ್ಲಿರ್ತಾರಾ? ಕ್ರಿಕೆಟ್ ಆಡ್ತಾರಾ ಡೌಟ್. ಯಾಕಂದ್ರೆ ನೆಕ್ಸ್ಟ್ ವರ್ಲ್ಡ್ಕಪ್ ವೇಳೆಗೆ ಹಿಟ್ಮ್ಯಾನ್ಗೆ 39 ವರ್ಷವಾಗಿರುತ್ತೆ. ಆದ್ರೆ ರಿಟೈರ್ಮೆಂಟ್ ಬಗ್ಗೆ ಈಗ ರೋಹಿತ್ ಶರ್ಮಾ ನೀಡಿರೋ ಸ್ಟೇಟ್ಮೆಂಟ್ನ್ನ ಇನ್ನೊಂದು ಆ್ಯಂಗಲ್ನಲ್ಲೂ ಅನಾಲಿಸಿಸ್ ಮಾಡಬಹುದು. ಕಳೆದ ಮೂರು ವರ್ಷಗಳಿಂದ ನಾನು ಬೆಸ್ಟ್ ಕ್ರಿಕೆಟ್ ಆಡ್ತಿದ್ದೀನಿ ಅನ್ನೋದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಏಜ್ ಜಾಸ್ತಿಯಾದ್ರೂ ರೋಹಿತ್ ಪರ್ಫಾಮೆನ್ಸ್ ಬೆಟರ್ & ಬೆಟರ್ ಆಗ್ತಿದೆ. ಕ್ಯಾಪ್ಟನ್ ಆಗಿಯಂತೂ ರೋಹಿತ್ ಅಚೀವ್ ಮಾಡಬೇಕಿರೋದು ಇನ್ನಷ್ಟಿದೆ. ಯಾಕಂದ್ರೆ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಭಾರತ ಇದುವರೆಗೂ ಯಾವುದೇ ಐಸಿಸಿ ಟೂರ್ನಿಯನ್ನ ಗೆದ್ದಿಲ್ಲ. ಈಗ ರೋಹಿತ್ ಮುಂದೆ ಅಟ್ಲೀಸ್ಟ್ ಮೂರು ಮೆಗಾ ಐಸಿಸಿ ಟೂರ್ನಿಗಳಿವೆ. ಒಂದು ಟಿ20 ವರ್ಲ್ಡ್ಕಪ್.. ಬಳಿಕ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುತ್ತೆ. ಸದ್ಯಕ್ಕೆ ಅದು ಪಾಕಿಸ್ತಾನದಲ್ಲಿ ನಿಗದಿಯಾಗಿದೆ. ಆದ್ರೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗೋದು ಅನುಮಾನವೇ. ಈ ಟೂರ್ನಿಯ ಲೊಕೇಶನ್ನಲ್ಲಿ ಏನು ಬೇಕಾದ್ರೂ ಚೇಂಜೆಸ್ಗಳಾಗಬಹುದು. 2025ರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಕೂಡ ಇದೆ. ಹೀಗಾಗಿ ರೋಹಿತ್ ಶರ್ಮಾಗೆ ಭಾರತಕ್ಕೆ ಟಿ20 ವರ್ಲ್ಡ್ಕಪ್ ಗೆಲ್ಲಿಸೋ ಅವಕಾಶ ಇದೆ. ನಂತರ ಚಾಂಪಿಯನ್ಸ್ ಟ್ರೋಫಿ..ಹಾಗೆಯೇ ಟೆಸ್ಟ್ ವರ್ಲ್ಡ್ಕಪ್. ಒಂದು ವೇಳೆ ಈ ಮೂರನ್ನೂ ಗೆದ್ರೆ as a ಕ್ಯಾಪ್ಟನ್ ಆಗಿ ರೋಹಿತ್ ಪಾಲಿಗೆ ಗ್ರೇಟೆಸ್ಟ್ ಅಚೀವ್ಮೆಂಟ್ ಆಗುತ್ತೆ. ಈಗ ರೋಹಿತ್ ರಿಟೈರ್ಮೆಂಟ್ ಬಗ್ಗೆ ಸ್ಟೇಟ್ಮೆಂಟ್ ಕೊಟ್ಟಿದ್ರೂ, ಶೀಘ್ರವೇ ರಿಟೈರ್ಮೆಂಟ್ ಘೋಷಿಸಲಿಕ್ಕಿಲ್ವೋ ಏನೊ. ಒಂದು ವೇಳೆ ಕೊಟ್ರೂ ಟಿ20 ವರ್ಲ್ಡ್ಕಪ್ ಬಳಿಕ ಟಿ20 ಫಾರ್ಮೆಟ್ಗೆ ಮೊದಲು ರಿಸೈನ್ ಮಾಡಬಹುದು. ಚಾಂಪಿಯನ್ಸ್ ಟ್ರೋಫಿ ಬಳಿಕ ವಂಡೇ ಫಾರ್ಮೆಟ್ಗೆ ಗುಡ್ಬೈ ಹೇಳಬಹುದು. 2025ರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಹೋದ್ರೆ ಆ ಮ್ಯಾಚ್ ಬಳಿಕ ಟೆಸ್ಟ್ಗೆ ರಿಟೈರ್ಮೆಂಟ್ ಅನೌನ್ಸ್ ಮಾಡಬಹುದೋ ಏನೋ..