ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್?
ಬಾಂಬೆ ಮಿಠಾಯಿ ಮಕ್ಕಳ ಅಚ್ಚುಮೆಚ್ಚಿನ ತಿನಿಸು. ಜಾತ್ರೆ ಸೇರಿದಂತೆ ಹಲವು ಕಡೆ ಇದನ್ನು ಮಾರಾಟ ಮಾಡಲಾಗುತ್ತದೆ. ಉದ್ದನೆಯ ಕೋಲಿಗೆ ಬಾಂಬೆ ಮಿಠಾಯಿಯನ್ನು ಸಿಕ್ಕಿಸಿಕೊಂಡು ಬೀದಿ ಬೀದಿಗಳಲ್ಲಿ ಮಾರಾಟ ಮಾಡುವುದನ್ನ ನಾವು ನೋಡುತ್ತಿರುತ್ತೇವೆ. ಇನ್ನೂ, ರಸ್ತೆ ಬದಿ ಮಾಡಿ ಕೊಡುವ ಗೋಬಿ ಮಂಚೂರಿ ಮಕ್ಕಳಿಂದ ಹಿರಿಯರವರೆಗೂ ಅಚ್ಚು ಮೆಚ್ಚು. ಆದ್ರೆ ಬಾಂಬೆ ಮಿಠಾಯಿ ಹಾಗೂ ಗೋಬಿ ಮಂಚೂರಿಯನ್ನು ಪಾಂಡಿಚೆರಿ, ಗೋವಾ, ತಮಿಳುನಾಡಿನಲ್ಲಿ ಬ್ಯಾನ್ ಮಾಡಲಾಗಿತ್ತು. ಇದೀಗ ಕರ್ನಾಟಕದಲ್ಲೂ ಬ್ಯಾನ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಏಳರಲ್ಲಿ ಎಷ್ಟು ಮಂದಿ ಗೆಲುವಿನ ನಗೆ ಬೀರಬಹುದು.?- ರಾಜ್ಯ ಕಾಂಗ್ರೆಸ್‌ನ ಲೆಕ್ಕಾಚಾರ ಹೇಗಿದೆ ?
ಹೌದು, ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಕೆಲವು ಹಾನಿಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಗೋವಾ, ತಮಿಳುನಾಡು ಈ ಆಹಾರಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಕಲರ್ ಜೆಲ್ಲಿಗಳನ್ನು ಸ್ಯಾಂಪಲ್ ಟೆಸ್ಟ್‌ಗೆ ಒಳಪಡಿಸಿಲಾಗಿತ್ತು. ಇದೀಗ ಕಾಟನ್ ಕ್ಯಾಂಡಿ ಜೆಲ್ಲಿ ಹಾಗೂ ಗೋಬಿ ಮಂಚೂರಿಯ ಟೆಸ್ಟಿಂಗ್ ರಿಪೋರ್ಟ್ ಆರೋಗ್ಯ ಇಲಾಖೆ ಕೈ ಸೇರಿದೆ.
ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ರಿಪೋರ್ಟ್ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದು, ಸೋಮವಾರ (ಮಾ.11) ಆರೋಗ್ಯ ಸಚಿವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸ್ಯಾಂಪಲ್‌ನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದ್ದು, ಗೋಬಿ ಮಂಚೂರಿಯಲ್ಲಿ Sunset Yellow ಮತ್ತು Tartrazine ಅಂಶ ಇರುವುದು ಪತ್ತೆಯಾಗಿದೆ. ರಾಸಾಯನಿಕ ಕಲಬೆರಕೆ ಇರುವುದರಿಂದ ಕಾಟನ್ ಕ್ಯಾಂಡಿ ಬ್ಯಾನ್ ಮಾಡುವ ಸಾಧ್ಯತೆ ಹೆಚ್ಚಿದೆ.
ಗೋಬಿ ಮಂಚೂರಿಯಲ್ಲಿ Sunset Yellow ಹಾಗೂ Tartrazine ಹಾನಿಕಾರಕ ಅಂಶ ಇರೋದ್ರಿಂದ ಎರಡೂ ರಾಸಾಯನಿಕ ಅಂಶಗಳನ್ನು ಬಳಕೆ ಮಾಡದೇ ಇರುವ ಥರ ಆರೋಗ್ಯ ಸಚಿವರು ಘೋಷಣೆ ಮಾಡುವ ಸಾಧ್ಯತೆ ಇದೆ. ಟೆಸ್ಟಿಂಗ್‌ನಲ್ಲಿ ಹಾನಿಕಾರಕ ಅಂಶ ಇರೋದು ವರದಿಯಲ್ಲಿ ತಿಳಿದು ಬಂದಿರುವುದಾಗಿ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.