ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ‘ಪರಾರಿ ಪ್ಲಾನ್’ ಭಯಾನಕ – ಬೆಂಗಳೂರಿನಲ್ಲಿ ಬಸ್ ಹತ್ತಿ ಬಳ್ಳಾರಿಗೆ ಹೋದ್ನಾ ಬಾಂಬರ್?
ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಭಯಾನಕ ಸ್ಫೋಟ ಸಂಭವಿಸಿ 6 ದಿನ ಕಳೆದಿದೆ. ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಗೊಂಡಿದೆ. ಡೆಡ್ಲಿ ಬಾಂಬರ್ನ ಸುಳಿವು ಸಿಸಿಟಿವಿಯಲ್ಲಿ ಸೆರೆಯಾಗಿದ್ರೂ ಆರೋಪಿ ಮಾತ್ರ ಪತ್ತೆಯಾಗಿಲ್ಲ. ಖತರ್ನಾಕ್ ಹಿಂದೆ ಬಿದ್ದಿರುವ ಪೊಲೀಸರಿಗೆ ಹಾಗೂ ಎನ್‌ಐಎ ಅಧಿಕಾರಿಗಳ ತಂಡ ಮತ್ತೊಂದು ಸಾಕ್ಷ್ಯವೊಂದನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ: ರಾಖಿ ಸಾವಂತ್‌ಗೆ ಶಾಕ್ ಮೇಲೆ ಶಾಕ್! – ಸೀಕ್ರೆಟ್ ಆಗಿ ಎರಡನೇ ಮದುವೆ ಆದ ಪತಿ ಆದಿಲ್ ಖಾನ್!
ಕಳೆದ ಮಾರ್ಚ್ 1ರಂದು ಮಟ ಮಟ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಬ್ಲಾಸ್ಟರ್ ಶುಕ್ರವಾರ ಮಧ್ಯಾಹ್ನ 12.45ಕ್ಕೆ ಟೈಮರ್ ಬಾಂಬ್ ಫಿಕ್ಸ್ ಮಾಡಿ ರಾಮೇಶ್ವರಂ ಕೆಫೆಯಿಂದ ಹೊರಟಿದ್ದಾನೆ. ಯಾರಿಗೂ ಸುಳಿವು ಸಿಗಬಾರದು ಅನ್ನೋ ಕಾರಣಕ್ಕೆ ಶಂಕಿತ ಬಿಎಂಟಿಸಿ ಬಸ್ನಲ್ಲಿ ಓಡಾಡಿದ್ದಾನೆ. ಆಗಾಗ ಬಟ್ಟೆಗಳನ್ನು ಬದಲು ಮಾಡಿಕೊಂಡು ತಿರುಗಾಡಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. ಈ ಅನುಮಾನಗಳು ಇದೀಗ ನಿಜವಾಗಿದ್ದು, ಯಾರಿಗೂ ಗೊತ್ತೇ ಆಗದಂತೆ ಪ್ಲಾನ್ ಮಾಡಿರೋದು ಬಹಿರಂಗ ಆಗಿದೆ.
ಮಾರ್ಚ್ 1 ರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಟು ಬೀದರ್‌ಗೆ ಹೋಗುವ ಬಸ್ ಹತ್ತಿದ್ದಾನೆ. ಬೆಂಗಳೂರಲ್ಲಿ ಬಸ್ ಹತ್ತಿರೋ ಬಾಂಬರ್ ಸಂಜೆ 4:30ಕ್ಕೆ ಕಳ್ಳಂಬೆಳ್ಳ ಟೋಲ್ ದಾಟಿದ್ದಾನೆ. ಬೆಂಗಳೂರಿನಿಂದ ಬೀದರ್‌ಗೆ ಹೋಗುತ್ತಾ ಇದ್ದ ಬಸ್ ಸಂಜೆ 5 ಗಂಟೆಗೆ ಶಿರಾವನ್ನು ದಾಟಿದೆ. ಅಲ್ಲಿಂದ ಟೋಪಿವಾಲ ಬಳ್ಳಾರಿಗೆ ಹೋಗಿ ಇಳಿದಿದ್ದಾನೆ. ಶಿರಾದಿಂದ ಬಳ್ಳಾರಿ ತನಕ ಶಂಕಿತ ಎಲ್ಲೂ ಇಳಿಯದೇ ಬಸ್ ಅಲ್ಲೇ ಕುಳಿತಿದ್ದ. ಕೊನೆಗೆ ಬಳ್ಳಾರಿಯಲ್ಲಿ ಶಂಕಿತ ಆರೋಪಿ ಓಡಾಡಿದ್ದಾನೆ. ಬಳ್ಳಾರಿಯಲ್ಲಿ ಬೆಂಗಳೂರಿನ ಬಾಂಬರ್ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಂಬ್ ಬ್ಲಾಸ್ಟ್ ಆರೋಪಿ ಒಂದಾದ ಮೇಲೊಂದು ಬಸ್ ಬದಲಾಯಿಸಿ ಪ್ರಯಾಣಿಸಿದ್ದಾನೆ. ಹೀಗಾಗಿಯೇ ಪೊಲೀಸರಿಗೆ ಆರೋಪಿ ಎಲ್ಲಿದ್ದಾನೆ ಎಂದು ಕಂಡು ಹಿಡಿಯುವುದು ದೊಡ್ಡ ಟಾಸ್ಕ್ ಆಗಿದೆ.