ಅಮೆಜಾನ್, ಟ್ವಿಟರ್ ಬೆನ್ನಲ್ಲೇ ಡಿಸ್ನಿ ಸಿಬ್ಬಂದಿಗೂ ಕಹಿ ಸುದ್ದಿ: ನೇಮಕಾತಿ ತಡೆ, ಉದ್ಯೋಗ ಕಡಿತ!

ಅಮೆಜಾನ್, ಟ್ವಿಟರ್ ಬೆನ್ನಲ್ಲೇ ಡಿಸ್ನಿ ಸಿಬ್ಬಂದಿಗೂ ಕಹಿ ಸುದ್ದಿ: ನೇಮಕಾತಿ ತಡೆ, ಉದ್ಯೋಗ ಕಡಿತ!

ನವದೆಹಲಿ: ಸಾಮಾಜಿಕ ಜಾಲತಾಣ ಕಂಪನಿಗಳಲ್ಲಿ ಆದಾಯ ಬೆಳವಣಿಗೆ ಕುಂಠಿತವಾಗುತ್ತಿದ್ದು, ಅಮೆರಿಕಾ ಮೂಲದ ಮಾಧ್ಯಮ ಮತ್ತು ಮನರಂಜನಾ ಸಂಸ್ಥೆ “ಡಿಸ್ನಿ” ಉದ್ಯೋಗ ಕಡಿತ ಮತ್ತು ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ ಎಂದು “ಡಿಸ್ನಿ” ಸಿಇಒ ಬಾಬ್ ಚಾಪೆಕ್ ಅವರು ಆಂತರಿಕವಾಗಿ ಬಿಡುಗಡೆ ಮಾಡಿರುವ ಪತ್ರವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:ಕಹಿ ಸುದ್ದಿ ನೀಡಿದ ಅಮೆಜಾನ್- ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು

ಪ್ರಸ್ತುತ ಡಿಸ್ನಿಯಲ್ಲಿ ಸುಮಾರು 1,90,000 ಜನರು ಕೆಲಸ ಮಾಡುತ್ತಿದ್ದು, ಕಂಪನಿಯು ಉದ್ದೇಶಿತ ನೆಮಕಾತಿಗಳನ್ನು ತಡೆಹಿಡಿಯುತ್ತಿದೆ. ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಿದೆ. ಅತ್ಯಂತ ನಿರ್ಣಾಯಕ, ವ್ಯಾಪಾರ ಉದ್ದೇಶಿತ ಸಣ್ಣ ಉಪವಿಭಾಗಗಳ ನೇಮಕಾತಿ ಮುಂದುವರೆಯುತ್ತದೆ. ಇನ್ನಿತರ ಎಲ್ಲ ನೇಮಕಾತಿಗಳನ್ನು ತಡೆಹಿಡಿಯುತ್ತದೆ. ಸಿಬ್ಬಂದಿ ಕಡಿತ ಹೇಗೆ ಅನ್ವವಾಗುತ್ತದೆ ಎಂಬುದನ್ನು ವಿಭಾಗದ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ವಿಭಾಗದವರು ವಿವರಿಸುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತೀರ ಅಗತ್ಯ ಎನಿಸುವ ವ್ಯಾಪಾರ ಪ್ರಯಾಣಗಳನ್ನು ಮಾತ್ರ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಲ್ಲದೇ, ವರ್ಚುವಲ್ ಸಭೆಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ನಡೆಸುವಂತೆ ಸೂಚಿಸಿದ್ದಾರೆ.

suddiyaana