IPLನಿಂದಲೂ ಹೊರಗುಳಿಯಬೇಕಾಗುತ್ತಾ ಕೆ.ಎಲ್ ರಾಹುಲ್ – ಕನ್ನಡಿಗ ಕ್ರಿಕೆಟಿಗನಿಗೆ ಫಿಟ್ನೆಸ್ ಟೆಸ್ಟ್ ಅಗ್ನಿಪರೀಕ್ಷೆ

IPLನಿಂದಲೂ ಹೊರಗುಳಿಯಬೇಕಾಗುತ್ತಾ ಕೆ.ಎಲ್ ರಾಹುಲ್ – ಕನ್ನಡಿಗ ಕ್ರಿಕೆಟಿಗನಿಗೆ ಫಿಟ್ನೆಸ್ ಟೆಸ್ಟ್ ಅಗ್ನಿಪರೀಕ್ಷೆ

ಇಂಜುರಿ ಸಮಸ್ಯೆಯಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್  ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಣಕ್ಕಿಳಿಯಬೇಕಿದ್ದರೆ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಬೇಕಿರುವುದು ಕೂಡಾ ಅನಿವಾರ್ಯವಾಗಿದೆ.

ಇದನ್ನೂ ಓದಿ: IPL ಆಡಲ್ವಾ ಕೆ.ಎಲ್ ರಾಹುಲ್ ? – ಲಂಡನ್‌ಗೆ ಚಿಕಿತ್ಸೆಗೆ ತೆರಳಿದ ಕನ್ನಡಿಗ

ಬಿಸಿಸಿಐ ನಿಯಮದ ಪ್ರಕಾರ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡ ಬಳಿಕ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಫಿಟ್ನೆಸ್ ಟೆಸ್ಟ್ ಸರ್ಟಿಫಿಕೇಟ್ ಪಡೆಯಬೇಕು. ಅದರಂತೆ ಇದೀಗ ಕೆಎಲ್ ರಾಹುಲ್ ಐಪಿಎಲ್‌ಗೂ ಮುನ್ನ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಈ ಟೆಸ್ಟ್‌ನಲ್ಲಿ ರಾಹುಲ್ ವಿಫಲರಾದರೆ ಐಪಿಎಲ್‌ನಿಂದಲೂ ಹೊರಬೀಳಲಿದ್ದಾರೆ. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಅಗ್ನಿಪರೀಕ್ಷೆಯನ್ನು ಎದುರಿಸಲಿರುವುದು ಖಚಿತ.

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದ ವೇಳೆ ಕೆಎಲ್ ರಾಹುಲ್ ಶೇ.90 ರಷ್ಟು ಫಿಟ್​ ಆಗಿದ್ದಾರೆ ಎನ್ನಲಾಗಿತ್ತು. ಆದರೂ ಕೂಡಾ ನೋವಿನ ಸಮಸ್ಯೆ ತಲೆದೋರಿತ್ತು. ಇದಕ್ಕಾಗಿ ಲಂಡನ್​ನಲ್ಲಿ ಉನ್ನತ ವೈದ್ಯಕೀಯ ತಜ್ಞರನ್ನು ಭೇಟಿಯಾಗಿದ್ದರು. ಇದೀಗ ಚಿಕಿತ್ಸೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿರುವ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. NCA ನಲ್ಲಿ ಕೆಎಲ್ ರಾಹುಲ್ ಫಿಟ್​ನೆಸ್​ಗೆ ಒಳಗಾಗಲಿದ್ದು, ಇದರಲ್ಲಿ ಪಾಸ್ ಆದರೆ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.

Sulekha