ಬಚ್ಚಲು ಮನೆಯಲ್ಲಿ ಬಳಸುವ ಹವಾಯಿ ಚಪ್ಪಲಿ ಬೆಲೆ 9000ರೂ!
ಬ್ರ್ಯಾಂಡೆಡ್ ಉತ್ಪನ್ನಗಳು ಅತ್ಯಂತ ವಿಶಿಷ್ಟವಾದ ಆಲೋಚನೆಗಳೊಂದಿಗೆ ಬರಲು ಖ್ಯಾತಿಯನ್ನು ಹೊಂದಿವೆ. ಈ ಬಾರಿ, ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಹ್ಯೂಗೋ ಬಾಸ್ ಕಂಪನಿಯೂ ಬಚ್ಚಲು ಮನೆಯಲ್ಲಿ ಬಳಸುವ ಚಪ್ಪಲಿಯೊಂದನ್ನು ಬಿಡುಗಡೆ ಮಾಡಿದ್ದು, ಇದೀಗ ಬಾರಿ ಸುದ್ದಿಯಲ್ಲಿದೆ.
ಇದನ್ನೂ ಓದಿ: ವೈರಲ್ ವಿಡಿಯೋ- ಬೀಚ್ ನಲ್ಲಿ ಏಕಕಾಲಕ್ಕೆ 42 ಬ್ಯಾಕ್ ಫ್ಲಿಪ್ ಮಾಡಿದ ಯುವಕ!
ಸಾಮಾನ್ಯವಾಗಿ ಹವಾಯಿ ಚಪ್ಪಲಿ ಬೆಲೆ 90 ರಿಂದ 100 ರೂ. ಇರುತ್ತದೆ. ಆದರೆ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಹ್ಯೂಗೋ ಬಾಸ್ 8,990 ಮೌಲ್ಯದ ಬ್ಲೂ ಫ್ಲಿಪ್-ಫ್ಲಾಪ್ ಅನ್ನು ಬಿಡುಗಡೆ ಮಾಡಿದ್ದು, ಇದನ್ನು ಕಂಡು ನೆಟ್ಟಿಗರು ಬಚ್ಚಲು ಮನೆಯಲ್ಲಿ ಬಳಸುವ ಚಪ್ಪಲಿಗೆ ಹೋಲಿಕೆ ಮಾಡಿದ್ದಾರೆ.
ಈ ಜೋಡಿ ಚಪ್ಪಲಿಗಳಿಗೆ ಹೆಚ್ಚೆಂದರೆ 150 ರೂ ಪಾವತಿಸಬಹುದು. ಈ ಚಪ್ಪಲಿಗಳಿಗಿಂತ ಪ್ಯಾರಾಗಾನ್‌ನ 100 ರೂಪಾಯಿಯ ಚಪ್ಪಲಿಗಳು ಇದಕ್ಕಿಂತ ಉತ್ತಮವಾಗಿದೆ. ಇಂತಹ ಚಪ್ಪಲಿಗಳನ್ನು ವಾರದ ಸಂತೆಯಲ್ಲಿ 50ರೂ ಕೊಟ್ಟು ಖರೀದಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
what the actual fuck pic.twitter.com/mvOvNBmCme
— Dew (@itmedew) October 16, 2022
ಈ ಹಿಂದೆ, ಫ್ಯಾಶನ್ ಬ್ರಾಂಡ್ ಬಾಲೆನ್ಸಿಯಾಗ $1800 (ಅಂದಾಜು ₹ 1,42,652) ಮೌಲ್ಯದ ಕಸದ ಚೀಲವನ್ನು ಬಿಡುಗಡೆ ಮಾಡಿತು. “ಟ್ರ್ಯಾಶ್ ಪೌಚ್” ಎಂದು ಹೆಸರಿಸಲಾದ ಬ್ಯಾಗ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿತ್ತು. ಬ್ಯಾಲೆನ್ಸಿಯಾಗದ ಫಾಲ್ 2022 ರೆಡಿ-ಟು-ವೇರ್ ಸಂಗ್ರಹಣೆಯಲ್ಲಿ ಬ್ಯಾಗ್ ಕಾಣಿಸಿಕೊಂಡಿತ್ತು, ಅಲ್ಲದೇ ಈ ಬ್ಯಾಗ್ ಅನ್ನು ಮಾಡೆಲ್‌ಗಳು ಕೈಯಲ್ಲಿ ಹಿಡಿದು ರ್ಯಾಂಪ್ವಾಕ್ ಮಾಡಿ ಗಮನ ಸೆಳೆದಿದ್ದರು.