ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ – ಹೋಟೆಲ್ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಟೋಟಗೊಂಡಿತ್ತು. ಇದೀಗ ಈ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಈ ಪ್ರಕರಣದ ಬೆನ್ನಲ್ಲೇ ಹೋಟೆಲ್ ಅಸೋಸಿಯೇಷನ್ ಹೈ ಅಲರ್ಟ್ ಆಗಿದೆ. ಇದೇ ಮೊದಲ ಬಾರಿಗೆ ಹೋಟೆಲ್ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಡೆವೊನ್ ಕಾನ್ವೆ ಇಂಜುರಿ – ಕಾನ್ವೆ ಜಾಗದಲ್ಲಿ ರಚಿನ್ ರವೀಂದ್ರ ಕಣಕ್ಕೆ
ಹೌದು, ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲೇ ನಗರದ ಹೋಟೆಲ್ಗಳಲ್ಲಿ ಭದ್ರತೆ ವಿಚಾರವಾಗಿ ಕಟ್ಟೆಚ್ಚರ ವಹಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ನೇತೃತ್ವದಲ್ಲಿ ಅಸೋಸಿಯೇಷನ್ ಸಭೆ ಸೇರಿದ್ದು, ಇದೇ ಮೊದಲ ಬಾರಿಗೆ ಹೋಟೆಲ್ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಹೋಟೆಲ್ ತಜ್ಞರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಸಂಬಂಧ ಹೋಟೆಲ್ ಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಒಂದು ವೇಳೆ ಇದು ಜಾರಿಯಾಗಿದ್ದೇ ಆದರೆ ಇನ್ಮುಂದೆ ಹೋಟೆಲ್ಗಳಲ್ಲಿಯೂ ಕಠಿಣ ಭದ್ರತಾ ನಿಯಮಗಳು ಅನ್ವಯವಾಗಲಿವೆ. ಬೇರೆ ರಾಜ್ಯಗಳಲ್ಲಿರುವ ಭದ್ರತಾ ಕ್ರಮಗಳನ್ನು ಅನುಸರಿಸಲು ಕೂಡ ಚಿಂತನೆ ಮಾಡಲಾಗಿದೆ.
ಹೋಟೆಲ್ಗಳಲ್ಲಿ ಯಾವೆಲ್ಲ ನಿಮಯ ಜಾರಿಗೆ ಬರಲಿದೆ?
- ಹೋಟೆಲ್ಗಳಲ್ಲಿ ಸೈರನ್ ಅಳವಡಿಸುವುದು.
- ಮೈಕ್ ವಾಕ್ ಟಾಕಿ ಅಳವಡಿಸುವುದು.
- ಪೈರಿಸ್ಟಿಂಗ್ ಮಿಷನ್ ಅಳವಡಿಸಿಸುವುದು.
- ಪೋಲಿಸ್ ನಂಬರ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಯ ನಂಬರ್ ನೋಟಿಸ್ ಬೋರ್ಡ್ಮೇಲೆ ಹಾಕುವುದು.
- ಮೆಟಲ್ ಸ್ಕ್ರೀನಿಂಗ್ ಅಳವಡಿಸುವುದು.
- ಅನುಮಾನ್ಪದ ಗ್ರಾಹಕರನ್ನು ವಾಚಿಂಗ್ ಮಾಡಲು ಸ್ಪೇಷಲ್ ಸಿಬ್ಬಂದಿಗಳನ್ನ ನೇಮಿಸುವುದು.
- ಹೈ ಟೆಕ್ನಿಕ್ ಸಿಸಿಟಿವಿ ಕ್ಯಾಮರಗಳ ಅಳವಡಿಕೆ ಹೆಚ್ಚಿಸುವುದು.
- ಹೋಟೆಲ್ಗಳಲ್ಲಿಯೂ ಪೊಲೀಸ್ ಮಾರ್ಗಸೂಚಿ ಅನುಸರಿಸುವುದು.
- ಬ್ಯಾಗ್ಗಳನ್ನ ಹೊರಗಿಟ್ಟು ಗ್ರಾಹಕರು ಒಳಗೆ ಬರುವಂತೆ ನಿಯಮ ರೂಪಿಸಿವುದು.
ಇಷ್ಟೇ ಅಲ್ಲದೆ, ಭದ್ರತೆ ಹಾಗೂ ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲು ಹೋಟೆಲ್ ಅಸೋಸಿಯೇಷನ್ ಮುಂದಾಗಿದೆ. ಸಣ್ಣಪುಟ್ಟ ಹೋಟೆಲ್ಗಳಿಗೆ ಹೊರೆಯಾಗದಂತೆ ನಿಯಮವಳಿಗಳನ್ನು ಜಾರಿಗೊಳಿಸಲಾಗುವುದು. ಆದರೆ, ಕಡ್ಡಾಯವಾಗಿ ಪ್ರತಿಯೊಂದು ಹೋಟೆಲ್ಗಳು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲೇಬೇಕು ಎಂದು ಅಸೋಸಿಯೇಷನ್ ಹೇಳಿದೆ.