ಫಿಟ್ ಬಾಡಿ.. ಹಳೇ ಹೇರ್ಸ್ಟೈಲ್ – ಉದ್ದ ಕೂದಲಿನಲ್ಲಿ ಧೋನಿ ಸ್ಟೈಲಿಶ್ ಲುಕ್, ಮಹಿ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಸ್ಟೈಲಿಶ್ ಲುಕ್ನಿಂದಲೂ ಫೇಮಸ್. ಯಾವಾಗಲೂ ಕೂಲ್ ಕ್ಯಾಪ್ಟನ್ ಹೇರ್ ಸ್ಟೈಲ್ ಮೇಲೇನೆ ಅಭಿಮಾನಿಗಳ ಕಣ್ಣು. ಈ ಬಾರಿ ಧೋನಿ ತನ್ನ ಹಳೇ ಹೇರ್ಸ್ಟೈಲ್ನಲ್ಲಿ ಮಿಂಚಿದ್ದಾರೆ. ಧೋನಿ ಈಗ ಮತ್ತೊಮ್ಮೆ ಹಳೆಯ ಸ್ಟೈಲ್ನಲ್ಲಿ ಮಿಂಚಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಐಷಾರಾಮಿ ಆಫ್ ರೋಡ್ ಕಾರು ಖರೀದಿಸಿದ ಧೋನಿ – ಹೊಸ ಕಾರಿಗೆ ಸಿಕ್ತು ಧೋನಿಯ ಫೆವರೇಟ್ ನಂಬರ್
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ವಿಭಿನ್ನ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಧೋನಿ ಮತ್ತೊಮ್ಮೆ ತಮ್ಮ ಲುಕ್ ಬದಲಾಯಿಸಿಕೊಂಡಿರುವುದು ಗೊತ್ತಾಗಿದೆ. ಈಗ ಅದೇ ಹಳೇ ಮಹಿಯನ್ನು ಕಂಡಂಗೆ ಭಾಸವಾಗ್ತಿದೆ. ಅವರ ಹಿಂದಿನ ಶೈಲಿ ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದರ ಜೊತೆಗೆ ಮಹಿಯ ಲುಕ್ ಹಾಗೂ ಫಿಟ್ ನೆಸ್ ಕಂಡು ಅಭಿಮಾನಿಗಳಂತೂ ದಂಗಾಗಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ಧೋನಿ ತನ್ನ ಮುದ್ದಿನ ಪತ್ನಿ ಸಮೇತ ಆಗಮಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೂ ಮುನ್ನ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಹಿಂದೆಂದಿಗಿಂತಲೂ ಹೆಚ್ಚು ಸ್ಟೈಲಿಶ್ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ.
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಜೊತೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮಹಿ ಟೀ ಶರ್ಟ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಹಿ ಸಿಂಪಲ್ ಲುಕ್ನಲ್ಲಿ ಜಸ್ಟ್ ವಾವ್.. ಅನ್ನೋ ಹಾಗೆ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ, ಧೋನಿ ಮರೂನ್ ಬಣ್ಣದ ಹಾಫ್ ಟೀ ಶರ್ಟ್ ಮತ್ತು ಕಪ್ಪು ಕಾರ್ಗೋ ಪ್ಯಾಂಟ್ ಧರಿಸಿದ್ದಾರೆ. ವಿಶೇಷ ಎಂದರೆ ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಡುವ ಸಂದರ್ಭ ಕಾಣಿಸಿಕೊಂಡ ರೀತಿಯಲ್ಲಿ ಮತ್ತೊಮ್ಮೆ ಉದ್ದ ಕೂದಲು ಬೆಳೆಸಿದ್ದಾರೆ. ಇದರೊಂದಿಗೆ ಹಾಫ್ ಟೀ ಶರ್ಟ್ ನಲ್ಲಿ ಬೈಸೆಪ್ಸ್ ಕೂಡ ತೋರಿಸಿದ್ದಾರೆ.
.