ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ ಇತಿಹಾಸಕ್ಕೆ ಸೇರಲಿದೆ – ಹಿಮಂತ ಬಿಸ್ವ ಶರ್ಮಾ ಸ್ಪೋಟಕ ಹೇಳಿಕೆ

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ ಇತಿಹಾಸಕ್ಕೆ ಸೇರಲಿದೆ – ಹಿಮಂತ ಬಿಸ್ವ ಶರ್ಮಾ ಸ್ಪೋಟಕ ಹೇಳಿಕೆ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ರಾಜಕೀಯ ನಾಯಕರು ಪರಸ್ಪರ ಆರೋಪ – ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಈ ಬೆನ್ನಲ್ಲೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೊಸ ಬಾಂಬ್‌ವೊಂದನ್ನು ಸಿಡಿಸಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಪಕ್ಷವು ವಿವಿಧ ಪ್ರಾದೇಶಿಕ ಸಂಘಟನೆಯಾಗಿ ಪ್ರತ್ಯೇಕಗೊಳ್ಳಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ರಣಜಿ ಆಡಿದ್ರೂ ಬಿಸಿಸಿಐ ಕಠಿಣ ಕ್ರಮ – ಈ ರೂಲ್ಸ್ ಹಾರ್ದಿಕ್ ಪಾಂಡ್ಯಾಗೆ ಯಾಕೆ ಅನ್ವಯಿಸಲ್ಲ?

ಸುದ್ದಿಗಾರರೊಂದಿಗೆ ಮಾತನಾಡಿರುವ ಹಿಮಂತ ಬಿಸ್ವ ಶರ್ಮಾ,  ಕಾಂಗ್ರೆಸ್‌ ಇತಿಹಾಸಕ್ಕೆ ಸೇರಲಿದೆ, ಅದು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ವಿವಿಧ ಪ್ರಾದೇಶಿಕ ಪಕ್ಷಗಳಾಗಿ ವಿಭಜನೆಯಾಗಲಿದೆ. ಈ ಚುನಾವಣೆಯ ನಂತರ ಕಾಂಗ್ರೆಸ್‌ನ ರಾಷ್ಟ್ರೀಯ ಸ್ಥಾನಮಾನವು ಕ್ಷೀಣಿಸುತ್ತದೆ. ಏಕೆಂದರೆ ಎನ್‌ಡಿಎ 400 ಪ್ಲಸ್ ಗೆಲುವಿನತ್ತ ಸಾಗುತ್ತಿದೆ. ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ಕಾಂಗ್ರೆಸ್ ಯಾವುದೇ ರಾಷ್ಟ್ರೀಯ ನಾಯಕತ್ವವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ಪ್ರತ್ಯೇಕಗೊಳ್ಳಲಿದೆ, ರಾಷ್ಟ್ರೀಯ ನಾಯಕತ್ವ ಇರುವುದಿಲ್ಲ ಮತ್ತು ಕಾಂಗ್ರೆಸ್  ರಾಜ್ಯದಲ್ಲಿ ಪ್ರಾದೇಶಿಕ ಸಂಘಟನೆಯಾಗಿ ಪ್ರತ್ಯೇಕವಾಗಲಿದೆ ಎಂದಿದ್ದಾರೆ.

2015 ರಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಅವರು ಇತ್ತೀಚೆಗೆ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರುವ ಗಾಂಧಿ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

Shwetha M