ಶ್ರೇಯಸ್ ಅಯ್ಯರ್ ರಣಜಿ ಆಡಿದ್ರೂ ಬಿಸಿಸಿಐ ಕಠಿಣ ಕ್ರಮ – ಈ ರೂಲ್ಸ್ ಹಾರ್ದಿಕ್ ಪಾಂಡ್ಯಾಗೆ ಯಾಕೆ ಅನ್ವಯಿಸಲ್ಲ?

ಶ್ರೇಯಸ್ ಅಯ್ಯರ್ ರಣಜಿ ಆಡಿದ್ರೂ ಬಿಸಿಸಿಐ ಕಠಿಣ ಕ್ರಮ – ಈ ರೂಲ್ಸ್ ಹಾರ್ದಿಕ್ ಪಾಂಡ್ಯಾಗೆ ಯಾಕೆ ಅನ್ವಯಿಸಲ್ಲ?

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್..ಇವರಿಬ್ಬರನ್ನ ಕೂಡ ಬಿಸಿಸಿಐ ತನ್ನ ಕಾಂಟ್ರ್ಯಾಕ್ಟ್ ಲಿಸ್ಟ್​ನಿಂದ ಡ್ರಾಪ್ ಮಾಡಿದೆ. ನಿಮಗೆ ಗೊತ್ತಿರೋ ಹಾಗೆ ಇಬ್ಬರಿಗೂ ರಣಜಿಯಲ್ಲಿ ಆಡುವಂತೆ ಬಿಸಿಸಿಐ ಸೂಚನೆ ಕೊಟ್ಟಿತ್ತು. ಆದ್ರೆ, ಈ ಪೈಕಿ ಇಶಾನ್ ಕಿಶನ್ ರಣಜಿಯಲ್ಲಿ ಒಂದೇ ಒಂದು ಮ್ಯಾಚ್ ಆಡಿಲ್ಲ. ಆದ್ರೆ ಶ್ರೇಯಸ್ ಅಯ್ಯರ್ ಕೆಲ ಮ್ಯಾಚ್​​ಗಳನ್ನ ಆಡಿದ್ರು. ಒಂದು ಮ್ಯಾಚ್​ನ್ನ ಮಾತ್ರ ಮಿಸ್ ಮಾಡಿಕೊಂಡಿದ್ದಾರೆ. ಆದ್ರೂ ಇಶಾನ್ ಕಿಶನ್ ಜೊತೆಗೆ ಶ್ರೇಯಸ್​ ಅಯ್ಯರ್​ರನ್ನ ಕೂಡ ಕಾಂಟ್ರ್ಯಾಕ್ಟ್ ಲಿಸ್ಟ್​ನಿಂದ ಬಿಸಿಸಿಐ ಡ್ರಾಪ್ ಮಾಡಿದೆ. ಇಶಾನ್ ಕಿಶನ್ ವಿರುದ್ಧ ಕೈಗೊಂಡ ಕ್ರಮವನ್ನ ಒಪ್ಪಿಕೊಳ್ಳಬಹುದು. ಆದ್ರೆ ಶ್ರೇಯಸ್ ಅಯ್ಯರ್ ವಿಚಾರದಲ್ಲಿ ಬಿಸಿಸಿಐ ನಿರ್ಧಾರ ಯಾಕೆ ಹೀಗೆ ಎಂಬಂತಿದೆ. ಹಾಗೆಯೇ ಇಲ್ಲೊಂದು ಪ್ರಶ್ನೆ ಕೂಡಾ ಎದ್ದಿದೆ. ಹಾರ್ದಿಕ್ ಪಾಂಡ್ಯ ರಣಜಿ ಆಡೋದು ಬೇಕಾಗಿಲ್ವಾ? ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಇವೆರೆಲ್ಲಾ ರಣಜಿ ಆಡಿ ಕಮ್​ಬ್ಯಾಕ್ ಮಾಡಬೇಕು ಅನ್ನೋದಾದ್ರೆ ಹಾರ್ದಿಕ್ ಪಾಂಡ್ಯಾ ಕಥೆಯೇನು? ಅವರಿಗೆ ಈ ರೂಲ್ಸ್ ಅಪ್ಲೈ ಆಗಲ್ವಾ? ಈ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲೂ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲು ಕಾರಣ ಏನು? – ಹಾರ್ದಿಕ್ ಪಾಂಡ್ಯಾ ಸಾಮರ್ಥ್ಯ ಬಗ್ಗೆ ಬಿಸಿಸಿಐ ನಿಲುವೇನು?

ಪ್ರತಿ ವರ್ಷ ಬಿಸಿಸಿಐ ತನ್ನ ವಾರ್ಷಿಕ ಕಾಂಟ್ರ್ಯಾಕ್ಟ್ ಲಿಸ್ಟ್​ನ್ನ ರಿಲೀಸ್ ಮಾಡುತ್ತೆ. ಅದ್ರಲ್ಲಿ A+, A, B ಮತ್ತು C ಹೀಗೆ ನಾಲ್ಕು ಕೆಟಗರಿಗಳಿರುತ್ತೆ. ಈ ನಾಲ್ಕು ಕೆಟಗರಿಗೆ ಬಿಸಿಸಿಐ ಪ್ಲೇಯರ್ಸ್​​ಗಳನ್ನ ಸೆಲೆಕ್ಟ್ ಮಾಡುತ್ತೆ. ಅಂದ್ರೆ ಟೀಂ ಇಂಡಿಯಾದಲ್ಲಿ ಆಡ್ತಾ ಇರೋ ಆಟಗಾರರನ್ನ ನಾಲ್ಕು ಗ್ರೇಡ್​​ಗಳಲ್ಲಿ ಪ್ರತ್ಯೇಕಿಸಿ ಅದಕ್ಕೆ ಆಧಾರವಾಗಿ ಅವರಿಗೆ ವಾರ್ಷಿಕ ವೇತನ ನೀಡಲಾಗುತ್ತೆ. ಪರ್ಫಾಮೆನ್ಸ್, ಎಷ್ಟು ಮ್ಯಾಚ್​​ಗಳನ್ನ ಆಡಿದ್ದಾರೆ ಇವೆಲ್ಲವನ್ನೂ ಪರಿಗಣಿಸಿ ಆಟಗಾರರಿಗೆ ಗ್ರೇಡ್ ಫಿಕ್ಸ್ ಮಾಡಲಾಗುತ್ತೆ. ಕಳೆದ ವರ್ಷ A ಪ್ಲಸ್​​ನಲ್ಲಿದ್ದವರು ಈ ವರ್ಷ ಎ ಗ್ರೇಡ್​ಗೆ ಇಳಿಯಬಹುದು. ಕಳೆದ ವರ್ಷ ಬಿ ಗ್ರೇಡ್​​ನಲ್ಲಿದ್ದವರು ಈ ವರ್ಷ ಎ ಗ್ರೇಡ್​​ ಪಡೆದುಕೊಳ್ಳಬಹುದು. ಇನ್ನೂ ಕೆಲವರು ಎಲ್ಲಾ ಲಿಸ್ಟ್​ನಿಂದಲೂ ಔಟಾಗಬಹುದು. ಲಿಸ್ಟ್​ನಲ್ಲೇ ಇಲ್ಲದವರು ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್​​ಗೆ ಆ್ಯಡ್ ಆಗಬಹುದು. ಓವರ್​ ಆಲ್​ ಆಗಿ ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್​ನಲ್ಲಿ ಒಟ್ಟು 30 ಆಟಗಾರರಿರ್ತಾರೆ.

2023-24ನೇ ಸಾಲಿಗೆ ಬಿಸಿಸಿಐ ಅನೌನ್ಸ್ ಮಾಡಿರೋ ಕಾಂಟ್ರ್ಯಾಕ್ಟ್ ಲಿಸ್ಟ್​ನಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಇವರಿಬ್ಬರನ್ನ ಕೂಡ ಡ್ರಾಪ್ ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಇದುವರೆಗೆ ಬಿ ಗ್ರೇಡ್​ನಲ್ಲಿದ್ರು. ಅಂದ್ರೆ ವರ್ಷಕ್ಕೆ ಮೂರು ಕೋಟಿ ರೂಪಾಯಿ ವೇತನ ಪಡೀತಾ ಇದ್ರು. ಇಶಾನ್​ ಕಿಶನ್​ ಸಿ ಗ್ರೇಡ್​​ ಲಿಸ್ಟ್​ನಲ್ಲಿದ್ರು. ವರ್ಷಕ್ಕೆ ಒಂದು ಕೋಟಿ ರೂಪಾಯಿ ಸ್ಯಾಲರಿ ಪಡೀತಾ ಇದ್ರು. ಆದ್ರೀಗ ಕಂಟ್ರ್ಯಾಕ್ಟ್ ಲಿಸ್ಟ್​ನಿಂದಲೇ ಔಟ್ ಆಗಿರೋದ್ರಿಂದ ಬಿಸಿಸಿಐನ ವಾರ್ಷಿಕ ವೇತನಕ್ಕೆ ಅಲಿಜಬೆಲ್ ಆಗಿಲ್ಲ. ರಣಜಿಯಲ್ಲಿ ಆಡಿಲ್ಲ ಅನ್ನೋ ಕಾರಣಕ್ಕೆ ಬಿಸಿಸಿಐ ಇಬ್ಬರ ವಿರುದ್ಧವೂ ಈಗ ಕಠಿಣ ಕ್ರಮ ಕೈಗೊಂಡಿದೆ. ಆದ್ರೆ ಇಲ್ಲಿ ಸ್ವಲ್ಪ ಆಶ್ಚರ್ಯ ಆಗೋದು ಏನಂದ್ರೆ, ಶ್ರೇಯಸ್ ಅಯ್ಯರ್​ರನ್ನ ಕಾಂಟ್ರ್ಯಾಕ್ಟ್​ ಲಿಸ್ಟ್​​ನಿಂದ ಡ್ರಾಪ್ ಮಾಡಿರೋದು. 2023ರ ವಂಡೇ ವರ್ಲ್ಡ್​​ಕಪ್​ನಲ್ಲಿ ಶ್ರೇಯಸ್ ಅಯ್ಯರ್ 530 ರನ್ ಮಾಡಿದ್ರು. ಮೂರು ಹಾಫ್​ಸೆಂಚೂರಿ, ಎರಡು ಸೆಂಚೂರಿ ಕೂಡ ಬಾರಿಸಿದ್ರು. ಹಾಗೆಯೇ ಇಂಗ್ಲೆಂಡ್ ವಿರುದ್ಧದ ಸೀರಿಸ್​ಗೂ ಮೊದಲೂ ಶ್ರೇಯಸ್ ಅಯ್ಯರ್ ರಣಜಿ ಟೂರ್ನಿಯನ್ನ ಆಡಿದ್ರು. ರಣಜಿಯಲ್ಲಿ ಪರ್ಫಾಮ್ ಮಾಡಿಯೇ ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ್ರು. ಆದ್ರೆ ಮೊದಲ ಎರಡು ಟೆಸ್ಟ್​ ಮ್ಯಾಚ್​​ಗಳಲ್ಲೂ ಪರ್ಫಾಮ್ ಮಾಡುವಲ್ಲಿ ಫೇಲ್ ಆಗಿದ್ರು. ಆದ್ರೆ ರಣಜಿಯ ಕ್ವಾರ್ಟರ್ ಫೈನಲ್​ನಲ್ಲಿ ಒಂದು ಮ್ಯಾಚ್​ನ್ನ ಮಾತ್ರ ಶ್ರೇಯಸ್ ಅಯ್ಯರ್ ಆಡಿಲ್ಲ. ಆ ಒಂದು ಮ್ಯಾಚ್​ ಆಡದೇ ಇದ್ದಿದ್ದಕ್ಕೆ ಬಿಸಿಸಿಐ ಇಡೀ ವರ್ಷದ ಆಟವನ್ನ ಸೈಡಿಗಿಟ್ಟು ಶ್ರೇಯಸ್​ ಅಯ್ಯರ್​​ರನ್ನ ಕಾಂಟ್ರ್ಯಾಕ್ಟ್ ಲಿಸ್ಟ್​ನಿಂದ ಡ್ರಾಪ್ ಮಾಡಿದೆ. ಎಲ್ಲೋ ಒಂದು ಕಡೆ ಇಶಾನ್​ ಕಿಶನ್​ ವಿರುದ್ಧ ಕ್ರಮಕೈಗೊಳ್ಳೋ ವೇಳೆ ಶ್ರೇಯಸ್ ಅಯ್ಯರ್​ಗೂ ಬಿಸಿಸಿಐ ಹೊಡೆತ ಕೊಟ್ಟಂತೆ ಕಾಣ್ತಿದೆ.

ಇಲ್ಲಿ ಶ್ರೇಯಸ್ ಅಯ್ಯರ್ ಟೈಮ್​ಲೈನ್​ ಬಗ್ಗೆ ಹೇಳಲೇಬೇಕು. 2023ರ ಮಾರ್ಚ್​ನಲ್ಲಿ ಶ್ರೇಯಸ್ ಅಯ್ಯರ್ ಬ್ಯಾಕ್ ಇಂಜ್ಯೂರಿಗೆ ಒಳಗಾಗಿದ್ರು. ಹಾಗೆಯೇ ಕಳೆದ 2023ರಲ್ಲಿ ಶ್ರೇಯಸ್ ಐಪಿಎಲ್​ ಕೂಡ ಆಡಿರಲಿಲ್ಲ. ಸರ್ಜರಿಗೊಳಗಾಗ್ತಾರೆ. ಆಗಸ್ಟ್​ವರೆಗೆ ರೆಸ್ಟ್ ತೆಗೆದುಕೊಳ್ತಾರೆ. ನಂತರ ಎನ್​​ಸಿಎಗೆ ಹೋಗ್ತಾರೆ. ಅಲ್ಲಿ ಫಿಟ್ನೆಸ್ ಮೇಲೆ ವರ್ಕೌಟ್ ಮಾಡೋಕೆ ಶುರು ಮಾಡ್ತಾರೆ. ಫಿಟ್ನೆಸ್ ಪ್ರೂಫ್ ಮಾಡಿದ್ಮೇಲೆ ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್​ಗೆ ಸೆಲೆಕ್ಟ್ ಆಗ್ತಾರೆ. ನಂತರ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್​​ನಲ್ಲಿ ಸೆಂಚೂರಿ ಹೊಡೀತಾರೆ. ಅಮೇಲೆ ವಂಡೇ ವರ್ಲ್ಡ್​​ಕಪ್​ನಲ್ಲಿ 500+ ಸ್ಕೋರ್ ಮಾಡ್ತಾರೆ. ವಿಶ್ವಕಪ್​ ಇತಿಹಾಸದಲ್ಲೇ ಮಿಡ್ಲ್ ಆರ್ಡರ್ ಬ್ಯಾಟ್ಸ್​ಮನ್​ ಆಗಿ 500+ ಸ್ಕೋರ್​ ಮಾಡಿದ ಮೊದಲ ಭಾರತೀಯ ಅನ್ನೋ ರೆಕಾರ್ಡ್​ ಶ್ರೇಯಸ್ ಅಯ್ಯರ್​ ಹೆಸರಲ್ಲಿದೆ. ವರ್ಲ್ಡ್​​ಕಪ್​ ಮುಗಿದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ20 ಮ್ಯಾಚ್​ಗಳನ್ನಾಡ್ತಾರೆ. ಕೊನೆಯ ಈ ಪೈಕಿ ಕೊನೆಯ ಮ್ಯಾಚ್​​ನಲ್ಲಿ ಹಾಫ್ ಸೆಂಚೂರಿ ಹೊಡೀತಾರೆ. ಸೌತ್​ ಆಫ್ರಿಕಾ ವಿರುದ್ಧ ಟಿ20 ಸೀರಿಸ್​ನಲ್ಲಿ ಒಂದು ಮ್ಯಾಚ್​ನಲ್ಲಿ ಶ್ರೇಯಸ್ ವೈಸ್​ ಕ್ಯಾಪ್ಟನ್ ಆಗಿರ್ತಾರೆ. ಒಂದು ಹಾಫ್ ಸೆಂಚೂರಿ ಹೊಡೀತಾರೆ. ನಂತರ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಮ್ಯಾಚ್ ಆಡಿ, ಭಾರತಕ್ಕೆ ಬಂದು ರಣಜಿ ಪಂದ್ಯಗಳನ್ನಾಡ್ತಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್​ ಮ್ಯಾಚ್ ಆಡಿದಾಗ ಮತ್ತೆ ಶ್ರೇಯಸ್​​ ಅಯ್ಯರ್​​ಗೆ ಬ್ಯಾಕ್​ಪೇನ್ ಶುರುವಾಗುತ್ತೆ. ಹೀಗಾಗಿ ಯಾವುದೇ ಮ್ಯಾಚ್ ಆಡೋಕೆ ನಾನು ಫಿಟ್ ಆಗಿಲ್ಲ ಅಂತಾ ಶ್ರೇಯಸ್ ಸ್ಟೇಟ್​ಮೆಂಟ್ ಬೇರೆ ಕೊಡ್ತಾರೆ. ರಣಜಿಯಲ್ಲಿ ಆಡುವಂತೆ ಇಶಾನ್ ಕಿಶನ್ ಜೊತೆಗೆ ಶ್ರೇಯಸ್ ಅಯ್ಯರ್​ಗೂ ಬಿಸಿಸಿಐ ಸೂಚನೆ ಕೊಡುತ್ತೆ. ಆದ್ರೆ, ರಣಜಿಯ ಕ್ವಾಟರ್​ ಫೈನಲ್​ನಲ್ಲಿ ಮಾತ್ರ ಶ್ರೇಯಸ್ ಆಡೋದಿಲ್ಲ. ಈ ಒಂದು ಮ್ಯಾಚ್ ಆಡದೇ ಇರೋದಕ್ಕೆ ಈಗ ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್​​ನಿಂದಲೇ ಶ್ರೇಯಸ್ ಅಯ್ಯರ್​ರನ್ನ ಡ್ರಾಪ್ ಮಾಡಿದೆ. ಇರ್ಫಾನ್ ಪಠಾಣ್ ಅಂತೂ ಅನ್​ಬಿಲೀವೆಬಲ್ ಅಂತಾ ಟ್ವೀಟ್ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಶ್ರೇಯಸ್ ಅಯ್ಯರ್​ಗೆ ಅನ್ಯಾಯವಾಗಿದೆ ಅಂತಾ ಅನ್ನಿಸ್ತಾ ಇರೋದು ಸುಳ್ಳಲ್ಲ.

ಇನ್ನು ಇಶಾನ್ ಕಿಶನ್ ಅಂತೂ ಈ ಬಾರಿ ಯಾವುದೇ ರಣಜಿ ಮ್ಯಾಚ್​ಗಳನ್ನ ಆಡಿಲ್ಲ. ಬಿಸಿಸಿಐ ಮತ್ತು ರಾಹುಲ್ ದ್ರಾವಿಡ್ ಸೂಚಿಸಿದ್ರೂ ಇಶಾನ್ ಕ್ಯಾರೇ ಅಂದಿಲ್ಲ. ಆದ್ರೆ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಜೊತೆಗೆ ಐಪಿಎಲ್​​ಗೆ ತಯಾರಿ ನಡೆಸ್ತಾ ಇದ್ದಾರೆ. ಪಾಂಡ್ಯಾ ಮತ್ತು ಇಶಾನ್ ಕಿಶನ್ ಇಬ್ಬರೂ ಜೊತೆಗೆ ಪ್ರಾಕ್ಟೀಸ್ ಮಾಡ್ತಾ ಇದ್ದಾರೆ. ಟೀಂ ಇಂಡಿಯಾ ಪರ ಆಡೋದಕ್ಕಿಂತ ಹೆಚ್ಚಾಗಿ ಐಪಿಎಲ್​​ಗೆ ಹೆಚ್ಚು ಪ್ರಿಫರೆನ್ಸ್ ನೀಡ್ತಾ ಇದ್ದಾರೆ ಅನ್ನೋ ಕಾರಣಕ್ಕೆ ಇಶಾನ್ ಕಿಶನ್​ರನ್ನ ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್​ನಿಂದ ಡ್ರಾಪ್ ಮಾಡಿದೆ. ಇದನ್ನ ಬೇಕಿದ್ರೆ ಒಪ್ಪಿಕೊಳ್ಳಬಹುದು.

ಬಟ್ ಇಲ್ಲಿ ಇನ್ನೊಂದು ಸಂಗತಿ ಕೂಡ ಇದೆ. ಹಾರ್ದಿಕ್ ಪಾಂಡ್ಯಾಗೆ ರಣಜಿಯಲ್ಲಿ ಆಡೋಕೆ ಬಿಸಿಸಿಐ ಸೂಚನೆ ಕೊಟ್ಟಿಲ್ಲ ಯಾಕೆ? ಹಾರ್ದಿಕ್ ಪಾಂಡ್ಯಾ ಈಗ ಫುಲ್ ಫಿಟ್ ಆಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಮೇಲಿಂದ ಮೇಲೆ ವೀಡಿಯೋಸ್ ಅಪ್ಲೋಡ್ ಮಾಡ್ತಾನೆ ಇರ್ತಾರೆ. ಆದ್ರೆ ಇಶಾನ್ ಕಿಶನ್​ ಮತ್ತು ಶ್ರೇಯಸ್​​ ಅಪ್ಲೈ ಆಗೋ ರೂಲ್ಸ್​ ಹಾರ್ದಿಕ್ ಪಾಂಡ್ಯಾಗೂ ಅಪ್ಲೈ ಆಗ್ಬೇಕಲ್ವಾ? ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡ್ಬೇಕು ಅನ್ನೋದಾದ್ರೆ ಹಾರ್ದಿಕ್ ಕೂಡ ರಣಜಿ ಆಡಿಯೇ ಬರ್ಬೇಕಲ್ವಾ? ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಚೇತೇಶ್ವರ್ ಪೂಜಾರಾ ಇವರೆಲ್ಲರೂ ರಣಜಿಯಲ್ಲಿ ಆಡಿ ಪರ್ಫಾಮ್ ಮಾಡಿ ಮತ್ತೆ ಇಂಡಿಯನ್ ಟೀಮ್​ನ್ನ ಜಾಯಿನ್ ಆಗ್ಬೇಕು ಅನ್ನೋದಾದ್ರೆ ಹಾರ್ದಿಕ್ ಪಾಂಡ್ಯಾಗೂ ಇದೇ ರೂಲ್ಸ್ ಅಪ್ಲೈ ಮಾಡ್ಬೇಕಲ್ವಾ? ಅದ್ಯಾಕ್ ಹಾರ್ದಿಕ್ ಪಾಂಡ್ಯಾ ಎಕ್ಸ್​​​​ಪ್ಷನಲ್​ ಆಗಿರೋದು. ಪಾಂಡ್ಯಾ ಏನು ಆಕಾಶದಿಂದ ಬಿದ್ದಿಲ್ವಲ್ಲಾ. ಅಣ್ಣ ಡೈರೆಕ್ಟ್ ಆಗಿ ಐಪಿಎಲ್​ಗೆ ಎಂಟ್ರಿ ಕೊಡ್ತಾ ಇದ್ದಾರೆ. NEXT ಟಿ20 ವರ್ಲ್ಡ್​​ಕಪ್​ನಲ್ಲಿ ವೈಸ್​ ಕ್ಯಾಪ್ಟನ್ ಬೇರೆ. ಆದ್ರೆ, ವರ್ಲ್ಡ್​​ಕಪ್ ಆಡೋ ಮುನ್ನ ಪಾಂಡ್ಯಾ ಟೀಂ ಇಂಡಿಯಾ ಪರ ಒಂದೇ ಒಂದು ಮ್ಯಾಚ್ ಆಡ್ತಿಲ್ಲ. ಬಿಡಿ ರಣಜಿ ಸೇರಿದಂತೆ ಫಸ್ಟ್​ಕ್ಲಾಸ್ ಮ್ಯಾಚ್​ಗಳನ್ನ ಕೂಡ ಆಡ್ತಿಲ್ಲ. ಹೋಗ್ಲಿ ಎನ್​ಸಿಎಗೂ ಪಾಂಡ್ಯಾ ಹೋಗ್ತಾ ಇಲ್ಲ. ವಂಡೇ ವರ್ಲ್ಡ್​ಕಪ್​ನಲ್ಲಿ ಇಂಜ್ಯೂರಿಯಾಗಿ ರಿಕವರಿಯಾದ ಬಳಿಕ ಪಾಂಡ್ಯಾ ವಾಪಸ್ ಆಗ್ತಾ ಇರೋದು ಡೈರೆಕ್ಟ್ ಐಪಿಎಲ್​​ಗೆ. ಐಪಿಎಲ್​​ನಲ್ಲಂತೂ ಎಲ್ಲಾ ಮ್ಯಾಚ್​ಗಳನ್ನೂ ಆಡ್ತಾರೆ ಬಿಡಿ. ಅದು ಬೇರೆ ಈಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್. ಒಂದೇ ಒಂದು ಮ್ಯಾಚ್​ ಮಿಸ್ ಮಾಡಿಕೊಳ್ಳಲ್ಲ. ಟೋಟಲಿ ಬಿಸಿಸಿಐನ ಯಾವುದೇ ರೂಲ್ಸ್ ಇಲ್ಲಿ ಹಾರ್ದಿಕ್ ಪಾಂಡ್ಯಾಗೆ ಮಾತ್ರ ಅಪ್ಲೈ ಆಗ್ತಿಲ್ಲ ಯಾಕೆ ಅನ್ನೋದು ಈಗಿರುವ ಪ್ರಶ್ನೆ. ಶ್ರೇಯಸ್ ಅಯ್ಯರ್ ಒಂದು ರಣಜಿ ಮ್ಯಾಚ್​​ನಲ್ಲಿ ಆಡಿಲ್ಲ ಅನ್ನೋ ಕಾರಣಕ್ಕೆ ಅವರನ್ನ ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್​ನಿಂದಲೇ ಡ್ರಾಪ್ ಮಾಡಿದ್ದಾರೆ. ಬಟ್ ಹಾರ್ದಿಕ್ ಪಾಂಡ್ಯಾ ಕಳೆದ ನಾಲ್ಕು ತಿಂಗಳಿನಿಂದ ಟೀಂ ಇಂಡಿಯಾ ಪರವಾಗಲಿ, ಫಸ್ಟ್​ ಕ್ಲಾಸ್​​ ಕ್ರಿಕೆಟ್​​ನಲ್ಲಾಗಲಿ ಒಂದೇ ಒಂದು ಮ್ಯಾಚ್​ ಆಡಿಲ್ಲ. ಆದ್ರೆ ಪಾಂಡ್ಯಾಗೆ ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್​ನಲ್ಲಿ ಎ ಗ್ರೇಡ್ ನೀಡಲಾಗಿದೆ. ಅಂದ್ರೆ ವರ್ಷಕ್ಕೆ 5 ಕೋಟಿ ರೂಪಾಯಿ ಸ್ಯಾಲರಿ ಪಡೀತಾ ಇದ್ದಾರೆ. ಟೀಂ ಇಂಡಿಯಾ ಪರ ಪಾಂಡ್ಯಾ ಯಾವತ್ತೂ ಕನ್ಸಿಸ್ಟೆಂಟ್ ಆಗಿಯಂತೂ ಪರ್ಫಾಮ್ ಮಾಡಿಲ್ಲ. ಆಗಾಗ ಬರ್ತಾರೆ, ಕೆಲ ಮ್ಯಾಚ್​ಗಳನ್ನ ಆಡ್ತಾರೆ, ಇಂಜ್ಯೂರಿಯಾಗ್ತಾರೆ, ಹೋಗ್ತಾರೆ. ಪಾಂಡ್ಯಾ ವಿಚಾರದಲ್ಲಿ ಇದು ರಿಪೀಟ್ ಆಗ್ತಾನೆ ಇದೆ. ಆದ್ರೂ ಎ ಗ್ರೇಡ್.. 5 ಕೋಟಿ ಸ್ಯಾಲರಿ. ಅಂತೂ ಹಾರ್ದಿಕ್​ ಪಾಂಡ್ಯಾರನ್ನ ಬಿಸಿಸಿಐ ಸ್ಪೆಷಲ್ ಆಗಿ ಟ್ರೀಟ್ ಮಾಡ್ತಾ ಇರೋದಂತೂ ಸತ್ಯ. ಇಲ್ಲಿ ಬಿಸಿಸಿಐನ ರೂಲ್ಸ್​ ಎಲ್ಲರಿಗೂ ಒಂದೇ ರೀತಿಯಲ್ಲಿ ಅಪ್ಲೈ ಆಗ್ತಾ ಇಲ್ಲ ಅನ್ನೋದು ಕೂಡ ಕ್ಲೀಯರ್.

Sulekha