ಅಮೆರಿಕಾ ಮಧ್ಯಂತರ ಚುನಾವಣೆ: ಭಾರತ ಮೂಲದ ನಬೀಲಾ ಸೈಯದ್ ಗೆ ಗೆಲುವು
ಅತ್ಯಂತ ಕಿರಿಯ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಬೀಲಾ
ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ 23 ವರ್ಷದ ಭಾರತೀಯ-ಅಮೆರಿಕನ್ ಮುಸ್ಲಿಂ ಮಹಿಳೆ ನಬೀಲಾ ಸೈಯದ್ ಯುನೈಟೆಡ್ ಸ್ಟೇಟ್ಸ್(ಯುಎಸ್) ಮಧ್ಯಂತರ ಚುನಾವಣೆಯಲ್ಲಿ ಗಮನಾರ್ಹ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಹತ್ಯೆಯ ಭೀತಿ?
ನಬೀಲಾ ಅವರು ಯುಎಸ್ ನಲ್ಲಿನ ಇಲಿನಾಯ್ಸ್ ರಾಜ್ಯ ಶಾಸಕಾಂಗದ 51 ನೇ ಹೌಸ್ ಜಿಲ್ಲೆಯ ಚುನಾವಣೆಯಲ್ಲಿ ಗೆದ್ದ ಅತ್ಯಂತ ಕಿರಿಯ ಪ್ರತಿನಿಧಿಯಾಗಿ ಇತಿಹಾಸ ಬರೆದಿದ್ದಾರೆ.
ನಬೀಲಾ ಟ್ವಿಟರ್ ನಲ್ಲಿ ಡೆಮಾಟ್ರಿಕ್ ಪಕ್ಷದ ಪ್ರತಿನಿಧಿಯಾಗಿ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಖುಷಿಯನ್ನು ಹಂಚಿಕೊಂಡಿದ್ದು, “ ನನ್ನ ಹೆಸರು ಸೈಯದ್. ನಾನು 23 ವರ್ಷದ ಮುಸ್ಲಿಂ, ಭಾರತೀಯ-ಅಮೆರಿಕನ್ ಮಹಿಳೆ. ನಾವು ರಿಪಬ್ಲಿಕನ್ ಹಿಡಿತದಲ್ಲಿರುವ ಉಪನಗರ ಜಿಲ್ಲೆಯನ್ನು ನಮ್ಮೆಡೆಗೆ ತಿರುಗಿಸಿದ್ದೇವೆ. ನಾನು ಇಲಿನಾಯ್ಸ್ ಜನರಲ್ ಅಸೆಂಬ್ಲಿಯ ಅತ್ಯಂತ ಕಿರಿಯ ಸದಸ್ಯೆಯಾಗುತ್ತೇನೆ”. ಎಂದು ಟ್ವೀಟ್ ಮಾಡಿದ್ದಾರೆ.
My name is Nabeela Syed. I’m a 23-year old Muslim, Indian-American woman. We just flipped a Republican-held suburban district.
And in January, I’ll be the youngest member of the Illinois General Assembly.
— Nabeela Syed (@NabeelaforIL) November 9, 2022
“ಔಷಧಿಗಳ ಬೆಲೆ ಏರಿಕೆಯ ಬಗ್ಗೆ ನಾವು ಹಿರಿಯರೊಂದಿಗೆ ಮಾತನಾಡಿದ್ದೇವೆ. ಆಸ್ತಿ ತೆರಿಗೆಯ ಹೆಚ್ಚುತ್ತಿರುವ ಹೊರೆಯ ಬಗ್ಗೆ ನಾವು ಕಾರ್ಮಿಕ ಕುಟುಂಬಗಳೊಂದಿಗೆ ಮಾತನಾಡಿದ್ದೇವೆ. ನಾವು ಮಹಿಳೆಯರೊಂದಿಗೆ ಮಾತನಾಡಿದ್ದೇವೆ. ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಗೆ ಅವರ ಹಕ್ಕನ್ನು ನಾನು ರಕ್ಷಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
View this post on Instagram