ಸತತ 17ನೇ ಬಾರಿಗೆ ಭಾರತದಲ್ಲಿ ಟೆಸ್ಟ್ ಸೀರಿಸ್ ಗೆಲುವು – ತವರಿನಲ್ಲಿ ಅತಿ ಹೆಚ್ಚು ಸರಣಿಗಳನ್ನು ಗೆದ್ದ ಟೀಮ್ ಇಂಡಿಯಾ
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಗೆದ್ದು ಟೀಂ ಇಂಡಿಯಾ ಸತತ 17ನೇ ಬಾರಿಗೆ ಭಾರತದಲ್ಲಿ ಟೆಸ್ಟ್ ಸೀರಿಸ್ ಗೆದ್ದಿದೆ. ಕಳೆದ 17 ಸೀರಿಸ್ಗಳಲ್ಲಿ ಅಂದ್ರೆ ಭಾರತದಲ್ಲಿ ನಡೆದ ಟೆಸ್ಟ್ ಸೀರಿಸ್ನಲ್ಲಿ ಒಂದೇ ಒಂದು ಬಾರಿಯೂ ಒಪೊಸಿಟ್ ಟೀಮ್ಗೆ ಸೀರಿಸ್ ವಿನ್ ಆಗೋಕೆ ನಮ್ಮವರು ಚಾನ್ಸ್ ಕೊಟ್ಟೇ ಇಲ್ಲ. ಟೀಂ ಇಂಡಿಯಾ ಮ್ಯಾಚ್ಗಳನ್ನ ಸೋತಿದೆ. ಆದ್ರೆ ಸೀರಿಸ್ ಡಿಫೀಟ್ ಅಂತೂ ಆಗಿಲ್ಲ.
ಇದನ್ನೂ ಓದಿ: ಯಂಗ್ ಕ್ರಿಕೆಟರ್ಸ್ಗೆ ಕ್ಯಾಪ್ಟನ್ ಪ್ರೋತ್ಸಾಹ – ಯುವ ಪಡೆ ಜೊತೆ ಗೆಲುವಿನ ಕೇಕೆ ಹಾಕಿದ ರೋಹಿತ್ ಶರ್ಮಾ
17 ಟೆಸ್ಟ್ ಸೀರಿಸ್ ವಿಕ್ಟರಿ.. ನೋ ಡೌಟ್ ಇದು ಗ್ರೇಟ್ ಅಚೀವ್ಮೆಂಟೇ. ಭಾರತಕ್ಕೆ ಕ್ರಿಕೆಟ್ ಆಡೋಕೆ ಬರೋ ಎಲ್ಲಾ ಒಪೊಸಿಟ್ ಟೀಮ್ಗಳ ಟಾರ್ಗೆಟ್ ಒಂದೇ ಆಗಿರುತ್ತೆ. ಟೀಂ ಇಂಡಿಯಾವನ್ನ ಅವರದ್ದೇ ನೆಲದಲ್ಲಿ ಮಣಿಸಬೇಕು ಅನ್ನೋದು. ಒಂದು ವೇಳೆ ಭಾರತದಲ್ಲಿ ಸೀರಿಸ್ ಗೆದ್ರೆ ಆ ಟೀಮ್ನ ಕ್ಯಾಪ್ಟನ್ಗೆ ಸಿಗೋ ಮೈಲೇಜ್ NEXT ಲೆವೆಲ್ನಲ್ಲಿರುತ್ತೆ. ಯಾರೂ ಮಾಡದ ಸಾಧನೆಯನ್ನ ಆತ ಮತ್ತು ಆತನ ಟೀಂ ಮಾಡಿದಂತಾಗುತ್ತೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಸೀರಿಸ್ ಗೆದ್ದಿರೋ ನಾವ್ಯಾರೂ ಮರೆಯೋದೆ ಇಲ್ಲ. ಆ ಒಂದು ಗೆಲುವಿನಿಂದ ರಹಾನೆ ಕ್ಯಾಪ್ಟನ್ಸಿ ಕೆಪಾಸಿಟಿ ಏನು ಅನ್ನೋದು ಪ್ರೂವ್ ಆಗಿತ್ತು. ರಿಷಬ್ ಪಂತ್ ಕೆರಿಯರ್ಗಂತೂ ದೊಡ್ಡ ಟರ್ನಿಂಗ್ ಪಾಯಿಂಟ್ ಆಯ್ತು. ಆಗ ಕೋಚ್ ಆಗಿದ್ದ ರವಿಶಾಸ್ತ್ರಿ ಆಸ್ಟ್ರೇಲಿಯಾದಲ್ಲಿ ಸೀರಿಸ್ ವಿನ್ ಆಗಿದ್ದು, ಗಬ್ಬಾ ಟೆಸ್ಟ್ ಗೆದ್ದಿದೆ ನನ್ನ ಲೈಫ್ನ ಬೆಸ್ಟ್ ಮೂಮೆಂಟ್ ಎಂದಿದ್ದಾರೆ. ಕೇವಲ ಅದೊಂದೇ ಸೀರಿಸ್ ಅಲ್ಲ. ಪಾಕಿಸ್ತಾನದಲ್ಲಿ ಹೋಗೀ ಸೌರವ್ ಗಂಗೂಲಿ ಟೀಂ ಸೀರಿಸ್ ಗೆದ್ದಿದ್ದು ಕೂಡ ವನ್ ಆಫ್ ದಿ ಗ್ರೇಟೆಸ್ಟ್, ಮೆಮೇರೆಬಲ್ ಅಚೀವ್ಮೆಂಟ್. ನಮ್ಮವರು ವಿದೇಶಗಳಲ್ಲಿ ಹೋಗಿ ಟೆಸ್ಟ್ ಸೀರಿಸ್ ಕೂಡ ಗೆದ್ದುಕೊಂಡು ಬಂದಿದ್ದಾರೆ. ಆದ್ರೆ, ಕಳೆದ 17 ಟೆಸ್ಟ್ ಸೀರಿಸ್ಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ಹಲವು ಟೆಸ್ಟ್ ಕ್ರಿಕೆಟಿಂಗ್ ನೇಷನ್ಗಳು ಭಾರತಕ್ಕೆ ಬಂದು ಆಡಿ ಹೋಗಿವೆಯಾದ್ರೂ ಒಂದೇ ಒಂದು ಬಾರಿ ಸೀರಿಸ್ ಗೆದ್ದಿಲ್ಲ. ಟೀಂ ಇಂಡಿಯಾದ ಈ 17 ಸೀರಿಸ್ ವಿನ್ ಜರ್ನಿ ಹೇಗಿತ್ತು? ಇದು ಆರಂಭವಾಗಿದ್ದು ಯಾವಾಗ? ಎಂಬ ವಿವರಣೆ ಇಲ್ಲಿದೆ.
17 ಸೀರೀಸ್ ವಿನ್ನ ಈ ಟ್ರೆಂಡ್ ಶುರುವಾಗಿದ್ದು 2013ರಲ್ಲಿ. ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದಾಗ ಭಾರತದಲ್ಲಿ ನಡೆದ ಟೆಸ್ಟ್ ಸೀರಿಸ್ಗಳನ್ನ ಕಂಟಿನ್ಯೂಸ್ ಟೀಂ ಇಂಡಿಯಾವೇ ಗೆಲ್ಲೋಕೆ ಶುರು ಮಾಡುತ್ತೆ.
ಭಾರತ 17 ಸೀರಿಸ್ ಗೆಲುವು
- 2013 – ಆಸ್ಟ್ರೇಲಿಯಾ ವಿರುದ್ಧ 4-0 ಗೆಲುವು
- 2015 – ವೆಸ್ಟ್ಇಂಡೀಸ್ ವಿರುದ್ಧ 2-0 ಗೆಲುವು
- 2016 – ಸೌತ್ ಆಫ್ರಿಕಾ ವಿರುದ್ಧ 3-0 ಗೆಲುವು
- 2017 – ನ್ಯೂಜಿಲ್ಯಾಂಡ್ ವಿರುದ್ಧ 3-0 ಗೆಲುವು
- 2017 – ಇಂಗ್ಲೆಂಡ್ ವಿರುದ್ಧ 4-0 ಗೆಲುವು
- 2017 – ಬಾಂಗ್ಲಾದೇಶ ವಿರುದ್ಧ 1-0 ಗೆಲುವು
- 2017 – ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವು
- 2018 – ಶ್ರೀಲಂಕಾ ವಿರುದ್ಧ 1-0 ಗೆಲುವು
- 2018 – ಅಫ್ಘಾನಿಸ್ತಾನ ವಿರುದ್ಧ 1-0 ಗೆಲುವು
- 2019 – ವೆಸ್ಟ್ಇಂಡೀಸ್ ವಿರುದ್ಧ 2-0 ಗೆಲುವು
- 2020 – ಸೌತ್ ಆಫ್ರಿಕಾ ವಿರುದ್ಧ 3-0 ಗೆಲುವು
- 2020 – ಬಾಂಗ್ಲಾದೇಶ ವಿರುದ್ಧ 2-0 ಗೆಲುವು
- 2021 – ಇಂಗ್ಲೆಂಡ್ ವಿರುದ್ಧ 3-1 ಗೆಲುವು
- 2022 – ನ್ಯೂಜಿಲ್ಯಾಂಡ್ ವಿರುದ್ಧ 1-0 ಗೆಲುವು
- 2022 – ಶ್ರೀಲಂಕಾ ವಿರುದ್ಧ 2-0 ಗೆಲುವು
- 2023 – ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವು
- 2024 – ಇಂಗ್ಲೆಂಡ್ ವಿರುದ್ಧ 3-1 ಗೆಲುವು
ಇದು ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದ 17 ವರ್ಷಗಳಲ್ಲಿ ಟೀಂ ಇಂಡಿಯಾ ಭಾರತದಲ್ಲೇ 17 ಸೀರಿಸ್ಗಳನ್ನ ಗೆದ್ದಿರೋ ರೆಕಾರ್ಡ್. ಅಂದ್ರೆ 17 ವರ್ಷಗಳಿಂದ ನಮ್ಮವರು ನಮ್ಮ ನೆಲದಲ್ಲಿ ಒಂದೇ ಒಂದು ಸೀರಿಸ್ನ್ನ ಕೂಡ ಬಿಟ್ಟು ಕೊಟ್ಟಿಲ್ಲ.
ಇವೆಲ್ಲದರ ಮಧ್ಯೆ, ಇಂಗ್ಲೆಂಡ್ ವಿರುದ್ಧದ ಸೀರಿಸ್ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ನೀಡಿರೋ ಸ್ಟೇಟ್ಮೆಂಟ್ ಸಂಚಲನ ಸೃಷ್ಟಿಸಿದೆ. ಯಂಗ್ಸ್ಟರ್ಸ್ಗಳಿಗೆ ರೋಹಿತ್ ಒಂದು ಕ್ಲೀಯರ್ ಮೆಸೇಜ್ ಪಾಸ್ ಮಾಡಿದ್ದಾರೆ. ನಾವು ಹಸಿವ್ ಇರುವವರಿಗೆ ಮಾತ್ರ ಟೀಮ್ನಲ್ಲಿ ಆಡೋಕೆ ಚಾನ್ಸ್ ಕೊಡ್ತೀವಿ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಅದ್ರೆ, ಅತ್ಯುತ್ತಮವಾಗಿ ಆಡಬೇಕು..ಬ್ಯಾಟ್ಸ್ಮನ್ ಆದವನಿಗೆ ರನ್ ಮಾಡಬೇಕು ಅನ್ನೋ ಹಠ ಇರ್ಬೇಕು. ಬೌರ್ ಆದವನಿಗೆ ವಿಕೆಟ್ ತೆಗೀಬೇಕು ಅನ್ನೋ ಛಲ ಇರ್ಬೇಕು. ದೇಶಕ್ಕಾಗಿ, ತಂಡಕ್ಕಾಗಿ ಆಡ್ಬೇಕು. ಮ್ಯಾಚ್ ಗೆಲ್ಲಿಸಿಕೊಡ್ಬೇಕು ಅನ್ನೋ ಹಠ ಇರುವವರನ್ನ ಮಾತ್ರ ಟೀಮ್ಗೆ ಪಿಕ್ ಮಾಡ್ತೀವಿ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಹಠವೇ ಇಲ್ಲದವರನ್ನ ಟೀಮ್ಗೆ ಸೇರಿಸಿಕೊಳ್ಳೋದ್ರಲ್ಲಿ ಯಾವುದೇ ಅರ್ಥ ಇಲ್ಲ ಅನ್ನೋ ಮಾತನ್ನ ಕೂಡ ರೋಹಿತ್ ಹೇಳಿದ್ದಾರೆ. ಹಾಗೆಯೇ ಈಗಿನ ಟೀಮ್ ಬಗ್ಗೆಯೂ ಮಾತನಾಡಿರೋ ರೋಹಿತ್, ಸದ್ಯ ನಮ್ಮ ತಂಡದಲ್ಲಿ ಹಸಿವು, ಹಠ ಇಲ್ಲದ ಆಟಗಾರ ಅಂತಾ ಯಾರು ಕೂಡ ಇಲ್ಲ. ಎಲ್ಲರೂ ಕೂಡ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳಬೇಕು ಅನ್ನೋ ಗುರಿಯನ್ನೇ ಹೊಂದಿದ್ದಾರೆ ಅನ್ನೋದು ರೋಹಿತ್ ಮಾತು.
ರೋಹಿತ್ ಶರ್ಮಾರ ಈ ಸ್ಟೇಟ್ಮೆಂಟ್ ಬಂದಿರೋ ಟೈಮಿಂಗ್ ಬಗ್ಗೆ ಇಲ್ಲಿ ಹೇಳಲೇಬೇಕು. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ವಿಚಾರವಾಗಿ ಏನೆಲ್ಲಾ ಬೆಳವಣಿಗೆಗಳಾಗ್ತಾ ಇದೆ ಅನ್ನೋದು ನಿಮಗೆ ಗೊತ್ತೇ ಇದೆ. ರಣಜಿಯಲ್ಲಿ ಆಡುವಂತೆ ಬಿಸಿಸಿಐ ಮತ್ತು ಕೋಚ್ ದ್ರಾವಿಡ್ ಸಲಹೆ ಕೊಟ್ಟಿದ್ರೂ ಇಬ್ಬರೂ ಈ ವರ್ಷ ಒಂದೇ ಒಂದು ಮ್ಯಾಚ್ ಆಡಿಲ್ಲ. ಹೀಗಾಗಿ ರಣಜಿ ಆಡಿದ್ರಷ್ಟೇ ಐಪಿಎಲ್ನಲ್ಲಿ ಮತ್ತು ಟೀಂ ಇಂಡಿಯಾದ ಆಡೋಕೆ ಅವಕಾಶ ನೀಡಲಾಗುತ್ತೆ ಅನ್ನೋ ಹೊಸ ರೂಲ್ಸ್ನ್ನ ಅಪ್ಲೈ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಾ ಇದೆ. ಈಗ ರೋಹಿತ್ ಶರ್ಮಾ ಕೂಡ ಈ ವಿಚಾರವನ್ನ ತಲೆಯಲ್ಲಿಟ್ಟುಕೊಂಡೇ ಈ ಸ್ಟೇಟ್ಮೆಂಟ್ ಕೊಟ್ಟಂತೆ ಕಾಣ್ತಿದೆ. ಹಾಗೆಯೇ ಕೆಲ ಯಂಗ್ಸ್ಟರ್ಸ್ಗಳು ಭಾರತದ ಪರ ಆಡೋದಕ್ಕಿಂತ ಹೆಚ್ಚಾಗಿ ಐಪಿಎಲ್ಗೆ ಪ್ರಿಫರೆನ್ಸ್ ನೀಡ್ತಾ ಇರೋ ಬಗ್ಗೆಯೂ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದ್ರೆ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ರೋಹಿತ್ ಇಂಡೈರೆಕ್ಟ್ ಆಗಿ ಮೆಸೇಜ್ ಪಾಸ್ ಮಾಡಿರಲೂಬಹುದು.
ಅಂತೂ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಇಂಡಿಯನ್ ಯಂಗ್ ಟೀಮ್ ಟಾಪ್ ಕ್ಲಾಸ್ ಆಗಿ ಪರ್ಫಾಮ್ ಮಾಡಿದೆ. ಅದ್ರಲ್ಲೂ ಟೆಸ್ಟ್ ಸೀರಿಸ್ನಲ್ಲಿ ಈ ರೀತಿಯ ಪರ್ಫಾಮೆನ್ಸ್ ಬಂದಿರೋದ್ರಿಂದ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಂತೂ ಫುಲ್ ಅಕ್ಸೈಟ್ ಆಗಿದ್ರು. ನಾಲ್ಕನೇ ಮ್ಯಾಚ್ ಗೆದ್ದಾಗ ಟೀಂ ಇಂಡಿಯಾದ ಸೆಲೆಬ್ರೇಷನ್ ಬಗ್ಗೆ ಬಿಸಿಸಿಐ ಒಂದು ವಿಡಿಯೋ ರಿಲೀಸ್ ಮಾಡಿತ್ತು. ಅದ್ರಲ್ಲಿ ದ್ರಾವಿಡ್ ಅಂತೂ ಹಲ್ಲು ಕಚ್ಚಿ ಫುಲ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡ್ತಿದ್ರು. ಇನ್ನು ರೋಹಿತ್ ಶರ್ಮಾ ಅಂತೂ ಕೇಳೋದೆ ಬೇಡ. ಯಾಕಂದ್ರೆ ತಂಡದ ಕೆಲ ಎಕ್ಸ್ಪೀರಿಯನ್ಸ್ ಪ್ಲೇಯರ್ಸ್ಗಳು ಆಡ್ತಾ ಇಲ್ಲ. ಅವರು ಇಲ್ಲದಿದ್ರೂ ನಮ್ಮ ಯಂಗ್ಸ್ಟರ್ಸ್ಗಳು ಇಂಗ್ಲೆಂಡ್ನ್ನ ಈ ರೀತಿ ಸೋಲಿಸಿದ್ರಿಂದಲೇ ಟೀಂ ಇಂಡಿಯಾದ ಕಾನ್ಫಡೆನ್ಸ್, ಜೋಶ್ ಇನ್ನೊಂದು ಲೆವೆಲ್ ತಲುಪಿದೆ.