49 ನೇ ವಸಂತಕ್ಕೆ ಕಾಲಿಟ್ಟ ಸಚಿವ ಸಂತೋಷ್ ಲಾಡ್ – ಹುಟ್ಟುಹಬ್ಬದ ಪ್ರಯುಕ್ತ ಬಸವಣ್ಣ, ಅಂಬೇಡ್ಕರ್ ಕುರಿತ ಗೀತೆಗಳ ಬಿಡುಗಡೆ
ಬುದ್ಧ, ಬಸವ ತತ್ವದ ಅನುಯಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಜನಪರ ಹಾಗೂ ಕ್ರಿಯಾಶೀಲ ಸಚಿವರಾಗಿರುವ ಸಚಿವ ಸಂತೋಷ್ ಲಾಡ್ ಅವರು 49 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: 81 ನೇ ವಸಂತಕ್ಕೆ ಕಾಲಿಟ್ಟ ರಾಜಹುಲಿ – ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಹಾದಿ ಹೇಗಿತ್ತು ಗೊತ್ತಾ?
4 ನೇ ಬಾರಿಗೆ ಕಲಘಟಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಸಂತೋಷ್ ಲಾಡ್ ಸದ್ಯ ಕಾರ್ಮಿಕ ಇಲಾಖೆಯ ಸಚಿವರಾಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕಾಯಕಯೋಗಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತ ಗೀತೆಗಳ ಬಿಡುಗಡೆ ಸಮಾರಂಭ ಮಂಗಳವಾರ ಪುನೀತ್ ರಾಜ್ಕುಮಾರ್ ಮೈದಾನದಲ್ಲಿ ನಡೆಯಲಿದೆ. ಬಳಿಕ ‘ಅಭಿಮಾನ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ.
ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಈ ಗೀತೆಗಳನ್ನು ರಚಿಸಿದ್ದಾರೆ. ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಪ್ರಖ್ಯಾತ ಗಾಯಕರಾದ ವಿಜಯ ಪ್ರಕಾಶ್, ಸಲ್ಮಾನ್ ಅಲಿ ಅವರು ಪಾಲ್ಗೊಂಡು ಗಾಯನ ಪ್ರಸ್ತುತಪಡಿಸಲಿದ್ದಾರೆ. ಬಸವಣ್ಣ, ಅಂಬೇಡ್ಕರ್ ಕುರಿತಂತೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಒಂದಿಷ್ಟು ಕೆಲಸ ಮಾಡಬೇಕು ಎಂಬ ನೆಲೆಯಲ್ಲಿ ಈ ಪ್ರಯತ್ನ ನಡೆದಿದೆ. 25 ಗೀತೆಗಳನ್ನು ರಚಿಸಿ ಬಿಡುಗಡೆ ಮಾಡುವ ಗುರಿ ಇದ್ದು, ಸದ್ಯ 10 ಗೀತೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಈ ಹಾಡುಗಳ ಬಿಟ್ ಗಳಿಗೆ ರೀಲ್ಸ್ ಮಾಡುವ ಸ್ಪರ್ಧೆ ಸಹ ಆಯೋಜಿಸಲಾಗಿದೆ. ಮೊದಲ ಬಹುಮಾನವಾಗಿ 25 ಸಾವಿರ, ಎರಡನೇ ಬಹುಮಾನವಾಗಿ 15 ಸಾವಿರ ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ಬಹುಮಾನವನ್ನೂ ಘೋಷಿಸಲಾಗಿದೆ.