ರಷ್ಯಾ ಅಧ್ಯಕ್ಷ ಪುಟಿನ್ಗೆ ಹತ್ಯೆಯ ಭೀತಿ?
ಜೀವಭಯದಲ್ಲಿದ್ದಾರಂತೆ ರಷ್ಯಾ ಅಧ್ಯಕ್ಷ ಪುಟಿನ್!
ಮಾಸ್ಕೋ: ಜಿ20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾಗವಹಿಸುವುದು ಅನುಮಾನ ಎನ್ನಲಾಗ್ತಿದೆ. ಇಂಡೋನೇಷಿಯಾದ ಬಾಲಿಯಲ್ಲಿ ನ.15 ಮತ್ತು ನ.16 ರಂದು ಶೃಂಗಸಭೆ ನಡೆಯಲಿದೆ. ಈ ಶೃಂಗ ಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ಪುಟಿನ್ ಹಿಂದೇಟು ಹಾಕುತ್ತಿದ್ದಾರೆ. ಈ ಶೃಂಗಸಭೆಯಲ್ಲಿ ತನ್ನ ಹತ್ಯೆ ಮಾಡಬಹುದು ಎಂಬ ಕಾರಣಕ್ಕೆ ಭಾಗವಹಿಸದೇ ಇರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಟ್ವಿಟರ್ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್!: ವರ್ಕ್ ಫ್ರಂ ಹೋಮ್ ರದ್ದು ಮಾಡಿದ ಮಸ್ಕ್
ಅಮೆರಿಕ, ಯುಕೆ ಅಥವಾ ಉಕ್ರೇನ್ ಪುಟಿನ್ ಹತ್ಯೆಗೆ ಸಂಚು ರೂಪಿಸಿದೆ ಎಂದು ರಷ್ಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಯಲ್ಲಿ ಪುಟಿನ್ ಶೃಂಗಸಭೆಗೆ ತೆರಳುತ್ತಿಲ್ಲ. ಕೆಲ ಮಾಧ್ಯಮಗಳು ಜಿ20 ಶೃಂಗಸಭೆಯಲ್ಲಿ ಪುಟಿನ್ಗೆ ಯಾವ ರೀತಿಯೆಲ್ಲಾ ಅವಮಾನ ಆಗಬಹುದು ಅನ್ನೋ ರೀತಿಯ ಸುದ್ದಿಯನ್ನ ವರದಿ ಮಾಡಲು ಚಿಂತನೆ ನಡೆಸುತ್ತಿವೆ. ಇದೆಲ್ಲಾ ಮಾಹಿತಿಯನ್ನ ಪಡೆದ ರಷ್ಯಾದ ಗುಪ್ತಚರ ಇಲಾಖೆ ಪುಟಿನ್ರನ್ನ ಎಚ್ಚರಿಸಿದೆ. ಈ ಎಲ್ಲಾ ಕಾರಣಗಳಿಂದ ಪುಟಿನ್ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಷ್ಯಾ ಹೇಳಿದೆ.