ಯಂಗ್ ಕ್ರಿಕೆಟರ್ಸ್‌ಗೆ ಕ್ಯಾಪ್ಟನ್ ಪ್ರೋತ್ಸಾಹ – ಯುವ ಪಡೆ ಜೊತೆ ಗೆಲುವಿನ ಕೇಕೆ ಹಾಕಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಒಂದಷ್ಟು ಹೇಳಲೇಬೇಕು. ವಿರಾಟ್ ಕೊಹ್ಲಿ, ಕೆಎಲ್.ರಾಹುಲ್. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಇಂಥಾ ಪ್ಲೇಯರ್ಸ್ಗಳು ಆಡಿದಿದ್ರೂ, 4ನೇ ಟೆಸ್ಟ್ನಲ್ಲಿ ಮಾತ್ರ ಬುಮ್ರಾ ಆಡಿರಲಿಲ್ಲ. ಆದ್ರೂ ಟೀಮ್ನಲ್ಲಿ ಯಂಗ್ಸ್ಟರ್ಸ್ಗಳೇ ಮ್ಯಾಕ್ಸಿಮಮ್ ಇದ್ದಾರೆ. ಕೆಲವರ ಪಾಲಿಗಂತೂ ಇದು ಡೆಬ್ಯೂ ಸೀರಿಸ್ ಬೇರೆ. ಆದ್ರೂ ಯಂಗ್ ಪ್ಲೇಯರ್ಸ್ಗಳನ್ನ ಕಟ್ಟಿಕೊಂಡು ಟೀಂ ಇಂಡಿಯಾ ಮ್ಯಾಚ್ಗಳನ್ನ ಗೆದ್ದಿದೆ ಅಂದರೆ ಕ್ಯಾಪ್ಟನ್ ರೋಹಿತ್ಗೂ ದೊಡ್ಡ ಮಟ್ಟದಲ್ಲಿ ಕ್ರೆಡಿಟ್ ಸಿಗಲೇಬೇಕು.
ಇದನ್ನೂ ಓದಿ: ಇಂಗ್ಲೆಂಡ್ ಮೋಸದಾಟ ಕಂಟಿನ್ಯೂ! – ಕುಲ್ ದೀಪ್ ಬ್ಲಾಕ್..RO ಶಾಕ್?
ಯಂಗ್ಸ್ಟರ್ಸ್ಗಳಿಗೆ ರೋಹಿತ್ ನೀಡ್ತಾ ಇರೋ ಪ್ರೋತ್ಸಾಹವೇ ಟೀಮ್ ಇಂಡಿಯಾ ಗೆಲುವಿಗೆ ಕಾರಣ. ಹಾಗೆಯೇ ಎಲ್ಲರಿಗೂ ಫ್ರೀಡಂ ಕೊಡ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ಕುಲ್ದೀಪ್ ಯಾದವ್ ಅಂತಾ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ಗೆ ಬೌಲಿಂಗ್ ಮಾಡೋವಾಗ 29ನೇ ಓವರ್ ವೇಳೆ ರೋಹಿತ್ ಶರ್ಮಾ ಮತ್ತು ಕುಲ್ದೀಪ್ ಮಧ್ಯೆ ಗಂಭೀರ ಚರ್ಚೆ ನಡೆಯುತ್ತೆ. ಈ ವೇಳೆ ಬೌಂಡರಿ ಲೈನ್ ಬಳಿ ಇದ್ದ ಫೀಲ್ಡರ್ಸ್ಗಳನ್ನ ರಿಮೂವ್ ಮಾಡಿ 30 ಯಾರ್ಡ್ ಸರ್ಕಲ್ ಒಳಗೆ ತರೋಕೆ ರೋಹಿತ್ ಶರ್ಮಾ ಮುಂದಾಗ್ತಾರೆ. ಆದ್ರೆ ಕ್ಯಾಪ್ಟನ್ ಪ್ಲ್ಯಾನ್ಗೆ ಕುಲ್ದೀಪ್ ಯಾದವ್ ಒಪ್ಪೋದೆ ಇಲ್ಲ. ಫೀಲ್ಡರ್ಸ್ಗಳು ಬೌಂಡರಿ ಲೈನ್ ಬಳಿಯೇ ಇರಲಿ ಅಂತಾ ಫೋರ್ಸ್ ಮಾಡ್ತಾರೆ. ಕೊನೆಗೆ ಕುಲ್ದೀಪ್ ಮಾತನ್ನ ರೋಹಿತ್ ಒಪ್ಪಿಕೊಳ್ತಾರೆ. ಕುಲ್ದೀಪ್ಗೆ ಬೇಕಾದಂತೆ ಫೀಲ್ಟರ್ಸ್ಗಳನ್ನ ನಿಲ್ಲಿಸ್ತಾರೆ. ಈ ಕಾನ್ವರ್ಸೇಷನ್ ಆದ NEXT ಬಾಲ್ ಕುಲ್ದೀಪ್ ಬೌಲಿಂಗ್ನಲ್ಲಿ ಜ್ಯಾಕ್ ಕ್ರೌಲಿ ಕ್ಲೀನ್ ಬೌಲ್ಡ್ ಆಗ್ತಾರೆ. ಅಂದ್ರೆ ಇಲ್ಲಿ ಫೀಲ್ಡರ್ಸ್ಗಳನ್ನ ಬೌಂಡರಿ ಲೈನ್ ಬಳಿ ನಿಲ್ಲಿಸಿ ಜ್ಯಾಕ್ ಕ್ರೌಲಿ ಡಿಫೆನ್ಸ್ ಆಡದೆ ಸ್ಕೋರ್ ಗಳಿಸುವಂತೆ ಆಡಲಿ ಅಂತಾ ಪುಶ್ ಮಾಡಿದ್ರು. ಕುಲ್ದೀಪ್ ಬಾಲ್ಗೆ ಗ್ಯಾಪ್ನಲ್ಲಿ ಹೊಡಿಯೋಕೆ ಬ್ಯಾಕ್ಫುಟ್ ಬಂದು ಆಡೋಕೆ ಹೋಗಿ ಜ್ಯಾಕ್ಕ್ರೌಲಿ ಬೌಲ್ಡ್ ಆಗಿದ್ರು. ಹೀಗೆ ರೋಹಿತ್ ಬೌಲರ್ಸ್ಗಳ ಒಪೀನಿಯನ್ಗೆ ರೆಸ್ಪೆಕ್ಟ್ ಕೊಡೋದ್ರಿಂದಲೇ ಪ್ಲ್ಯಾನ್ ಸಕ್ಸಸ್ಫುಲ್ ಆಗಿ ಎಕ್ಸಿಕ್ಯೂಟ್ ಆಗ್ತಿದೆ.
ಈ ನಡುವೆ ಜೇಮ್ಸ್ ಆಂಡರ್ಸನ್ ಬಾಲ್ನಲ್ಲಿ ಒಂದು ಸಿಂಗಲ್ ತೆಗೆಯುತ್ತಲೇ ಆ್ಯಂಡರ್ಸನ್ ರೋಹಿತ್ರನ್ನ ಕೆಣಕೋಕೆ ನೋಡ್ತಾರೆ. ಏನೋ ಹೇಳಿ ಸ್ಲೆಡ್ಜ್ ಮಾಡ್ತಾರೆ. ಇತ್ತ ರೋಹಿತ್ ಏನು ಸುಮ್ನಿರೋದಿಲ್ಲ. ಆ್ಯಂಡರ್ಸನ್ ಸ್ಟೈಲ್ನಲ್ಲೇ ರಿಪ್ಲೈ ಮಾಡ್ತಾರೆ. ಆಮೇಲೆ ಇಂಗ್ಲೆಂಡ್ ಬೌಲರ್ ಕೂಡ ಸುಮ್ನಾಗಿ ಬಿಡ್ತಾರೆ. ಹಾಗೆಯೇ ಸಿಲ್ಲಿ ಪಾಯಿಂಟ್ನಲ್ಲಿ ಸರ್ಫರಾಜ್ ಖಾನ್ ಫೀಲ್ಡಿಂಗ್ ಮಾಡೋಕೆ ಮುಂದಾದಾಗ ಹೆಲ್ಮೆಟ್ ಹಾಕಿರಲಿಲ್ಲ. ನಿಮಗೆ ಗೊತ್ತಿರೋ ಹಾಗೆ ಸಿಲ್ಲಿ ಪಾಯಿಂಟ್ ಅತ್ಯಂತ ಡೇಂಜರಸ್ ಫೀಲ್ಡಿಂಗ್ ಪೊಸೀಶನ್. ಎಲ್ಲರೂ ಹೆಲ್ಮೆಟ್ ಹಾಕ್ಕೊಂಡೇ ಫೀಲ್ಡಿಂಗ್ಗೆ ನಿಲ್ಲೋದು. ಆದ್ರೆ ಸರ್ಫರಾಜ್ ಹೆಲ್ಮೆಟ್ ಹಾಕದೆ ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ಗೆ ನಿಲ್ತಾರೆ. ಈ ವೇಳೆ ರೋಹಿತ್ ಶರ್ಮಾ, ಹೇ ಭಾಯ್..ಹೀರೋ ನಹೀ ಬನ್ನೇಕಾ..ಅಂದ್ರೆ ಅಣ್ಣಾ ಇಲ್ಲಿ ಹೀರೋ ಆಗೋಕೆ ನೋಡ್ಬೇಡಾ, ಹೀರೋಯಿಸಂ ತೋರಿಸ್ಬೇಡಾ..ಮೊದಲು ಹೆಲ್ಮೆಟ್ ಹಾಕು ಅಂತಾರೆ. ಅತ್ತ ಕಾಮಂಟ್ರೇಟರ್ಸ್ ಕೂಡ ನಗ್ತಾರೆ. ರೋಹಿತ್ ಶರ್ಮಾ ಸ್ಟೈಲ್ ಆಫ್ ಕಾಮೆಂಟ್ ಅಂತಾ.
ಇನ್ನು ಕಾಮೆಂಟ್ರೇಟರ್ ರವಿಶಾಸ್ತ್ರಿ ಅಂತೂ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ಗೆ ಚೆನ್ನಾಗಿಯೇ ಟಾಂಗ್ ಕೊಟ್ಟಿದ್ದಾರೆ. ಪಿಚ್ ಬಗ್ಗೆ ಉದ್ದುದ್ದ ಮಾತನಾಡಿದವರ ಬ್ಯಾಟ್ನಿಂದ ರನ್ನೇ ಬಂದಿಲ್ಲ ಅಂತಾ ರವಿಶಾಸ್ತ್ರಿ ಹೇಳಿದ್ದಾರೆ. ನಾಲ್ಕನೇ ಟೆಸ್ಟ್ಗೂ ಮುನ್ನ ರಾಂಚಿ ಪಿಚ್ನ್ನ ನೋಡಿ ಬೆನ್ಸ್ಟೋಕ್ಸ್, ಇಂಥಾ ಪಿಚ್ನ್ನ ನಾನು ನೋಡಿಯೇ ಇಲ್ಲ. ಇದು ಯಾವ ರೀತಿಯ ಪಿಚ್ ಅನ್ನೋದೆ ಅರ್ಥವಾಗ್ತಿಲ್ಲ ಅಂತೆಲ್ಲಾ ಸ್ಟೇಟ್ಮೆಂಟ್ ಕೊಟ್ಟಿದ್ರು. ಆದ್ರೆ ಫಸ್ಟ್ ಇನ್ನಿಂಗ್ಸ್ನಲ್ಲಿ ಮೂರು ರನ್ಗೆ ಔಟಾಗಿದ್ರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ 17 ರನ್ಗೆ ವಿಕೆಟ್ ಒಪ್ಪಿಸಿದ್ರು. ಬೆನ್ಸ್ಟೋಕ್ಸ್ಗೆ ರಾಂಚಿ ಪಿಚ್ ಮಾತ್ರವಲ್ಲ ಇಡೀ ಸೀರಿಸ್ನಲ್ಲಿ ಹೇಗೆ ಆಡಬೇಕು ಅನ್ನೋದೆ ಗೊತ್ತಾಗ್ತಾ ಇಲ್ಲ. ಬಟ್ ಬ್ಯಾಸ್ಬಾಲ್ ಆಟ ಮಾತ್ರ ಇಲ್ಲಿ ನಡೆಯೋದಿಲ್ಲ ಅನ್ನೋದಂತೂ ಅರ್ಥವಾಗಿರುವಂತೆ ಕಾಣ್ತಿದೆ. ಎನಿವೇ..ಸೀರಿಸ್ನಲ್ಲಿ ಇನ್ನೊಂದೇ ಮ್ಯಾಚ್ ಬಾಕಿ ಉಳಿದಿರೋದು. ಧರ್ಮಶಾಲಾದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಟೆಸ್ಟ್ ನಡೆಯುತ್ತೆ. ಧರ್ಮಶಾಲಾದಲ್ಲಿ ನಡೆಯೋದ್ರಿಂದ ನೋಡೋಕೆ ಚೆನ್ನಾಗಿರುತ್ತೆ. ಈ ಟೆಸ್ಟ್ನಲ್ಲಿ ನಮ್ಮ ದೇವದತ್ ಪಡಿಕ್ಕಲ್ಗೆ ಚಾನ್ಸ್ ಸಿಗಬಹುದೋ ಏನೊ?.