ಇಂಗ್ಲೆಂಡ್ ಮೋಸದಾಟ ಕಂಟಿನ್ಯೂ! – ಕುಲ್ ದೀಪ್ ಬ್ಲಾಕ್..RO ಶಾಕ್?

ಇಂಗ್ಲೆಂಡ್ ಮೋಸದಾಟ ಕಂಟಿನ್ಯೂ! – ಕುಲ್ ದೀಪ್ ಬ್ಲಾಕ್..RO ಶಾಕ್?

ಬೆನ್​ ಸ್ಟೋಕ್ಸ್.. ಒಬ್ಬ ಗ್ರೇಟ್ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ವನ್​ ಆಫ್ ದಿ ಬೆಸ್ಟ್ ಆಲ್ರೌಂಡರ್..ಅದ್ರಲ್ಲೂ ಅನುಮಾನವೇ ಇಲ್ಲ.. ಇಂಗ್ಲೆಂಡ್​ ಕ್ರಿಕೆಟ್​​ನ ದಿಕ್ಕೇ ಬದಲಿಸಿದ ಪ್ಲೇಯರ್​ ಅನ್ನೋ ಬಗ್ಗೆಯೂ ಪ್ರಶ್ನೆ ಮಾಡೋದಿಲ್ಲ. ವರ್ಲ್ಡ್​ ಕ್ರಿಕೆಟ್​ನ ಅಸೆಟ್..ಖಂಡಿತಾ ಹೌದು.. ಬಟ್.. ಎಥಿಕ್ಸ್ ವಿಚಾರಕ್ಕೆ ಬಂದ್ರೆ, ಪ್ರಾಮಾಣಿಕತೆ, ಸ್ಪಿರಿಟ್ ಆಫ್ ದಿ ಗೇಮ್, ಫ್ಯಾರ್​​ಪ್ಲೇ ಈ ಎಲ್ಲಾ ಪದಗಳು ಬೆನ್​ಸ್ಟೋಕ್ಸ್​​ಗೆ ಸೂಟ್ ಆಗೋದೆ ಇಲ್ಲ. ಇದ್ಯಾವುದ್ರ ಬಗ್ಗೆಯೂ ಬೆನ್​ಸ್ಟೋಕ್ಸ್ ತಲೆಕೆಡಿಸಿಕೊಳ್ಳೋದಿಲ್ಲ.. ಹೇಗಾದ್ರೂ ಮಾಡಿ ಮ್ಯಾಚ್ ಗೆಲ್ಬೇಕು ಅಷ್ಟೇ..ಅಂದು 2019ರ ವರ್ಲ್ಡ್​​ಕಪ್​ ಫೈನಲ್​​ನಲ್ಲೇ ತಾವೇನು ಅನ್ನೋದನ್ನ ಬೆನ್​ ಸ್ಟೋಕ್ಸ್​ ಜಗತ್ತಿಗೇ ಬಯಲು ಮಾಡಿದ್ರು. ಅವರ ಚೀಟಿಂಗ್ ಚಾಳಿ ಈಗ ಭಾರತದ ವಿರುದ್ಧದ ಸೀರಿಸ್​ನವರೆಗೂ ಹಾಗೆಯೇ ಕಂಟಿನ್ಯೂ ಆಗ್ತಾನೆ ಬಂದಿದೆ. ಔಟ್ ಆದ್ರೂ ನಾಟೌಟ್ ಅಂತಾರೆ.. ನಾಟೌಟ್ ಆದ್ರೆ ಔಟ್ ಅಂತಾ ವಾದ ಮಾಡ್ತಾರೆ. ಇದ್ರ ಮೇಲಿಂದ ಪಿಚ್ ಸರಿ ಇಲ್ಲ.. ಇಂಥಾ ಪಿಚ್ ನೋಡಿಯೇ ಇಲ್ಲ ಅಂತಾ ಕಾಮೆಂಟ್ಸ್ ಬೇರೆ.  4ನೇ ಟೆಸ್ಟ್​ನ ಡೇ-2 ಅಂತೂ ಬೆನ್​ಸ್ಟೋಕ್ಸ್​​ ಮಾತ್ರವಲ್ಲ ಇಡೀ ಇಂಗ್ಲೆಂಡ್ ಟೀಮ್ ಎಕ್ಸ್​​ಪೋಸ್ ಆಗಿದೆ. ಹಾಗೆಯೇ ಫಸ್ಟ್ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಕೊಲ್ಯಾಪ್ಸ್ ಆಗಿರೋ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಬಡತನದಲ್ಲಿ ಬದುಕಿ ಕ್ರಿಕೆಟ್ ಜಗತ್ತು ಬೆಳಗಲು ಬಂದ ಆಕಾಶದೀಪ – ಚೊಚ್ಚಲ ಪಂದ್ಯದಲ್ಲೇ ಸ್ಟಾರ್ ಆದ ಆಕಾಶ್‌ದೀಪ್

ಫಸ್ಟ್ ಬೆನ್​​ಸ್ಟೋಕ್ಸ್​ರನ್ನ ರೋಸ್ಟ್ ಮಾಡೋಣ.. 4ನೇ ಟೆಸ್ಟ್​ನ ಎರಡನೇ ದಿನ ಇಂಗ್ಲೆಂಡ್ 353 ರನ್​ಗೆ ಆಲೌಟ್ ಆಗುತ್ತೆ. ಭಾರತ ಬ್ಯಾಟಿಂಗ್​ ಶುರು ಮಾಡುತ್ತೆ. ಈ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​​ಗೆ ಬಿಸಿ ಮುಟ್ಟಿಸಿದ್ದು ಅಂದ್ರೆ ಅದು ಯಶಸ್ವಿ ಜೈಸ್ವಾಲ್. ಆರಂಭದಿಂದಲೇ ಜೈಸ್ವಾಲ್ ತುಂಬಾ ಚೆನ್ನಾಗಿ ಆಡ್ತಿದ್ರು. ಆದ್ರೆ ಮ್ಯಾಚ್​​ನ 20ನೇ ಓವರ್ ವೇಳೆ ಆಲಿ ರಾಬಿನ್ಸನ್ ಬಾಲ್ ಎಸೀತಾರೆ. ಯಶಸ್ವಿ ಜೈಸ್ವಾಲ್ ಕವರ್​ ಡ್ರೈವ್ ಹೊಡಿಯೋಕೆ ಮುಂದಾಗ್ತಾರೆ. ಬಟ್ ಬಾಲ್ ಬ್ಯಾಟ್​​ನ ಎಡ್ಜಿಗೆ ಜಸ್ಟ್ ಟಿಪ್ ಆಗಿ ಕೀಪರ್​ ಕೈ ಸೇರುತ್ತೆ. ಡಿಸೀಶನ್​ ಥರ್ಡ್​​ ಅಂಪೈರ್​ಗೆ ಹೋಗುತ್ತೆ. ಆಗ ರಿಪ್ಲೈ ನೋಡುತ್ತಲೇ ಥರ್ಡ್​ ಅಂಪೈರ್​ ಫೈನಲ್ ಡಿಸೀಶನ್ ಕೊಡೋ ಮುನ್ನವೇ ಬೆನ್​​ ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ಪ್ಲೇಯರ್ಸ್​ ಸೆಲೆಬ್ರೇಟ್ ಮಾಡ್ತಾರೆ. ಅಂದ್ರೆ ಬಾಲ್​ ಬ್ಯಾಟ್​​ಗೆ ಟಿಪ್​​ ಆಗಿ ಕೀಪರ್ ಕ್ಯಾಚ್ ಆಗಿದೆ. ಡೇಂಜರಸ್ ಜೈಸ್ವಾಲ್ ಗಾನ್ ಅಂತಾ ಫುಲ್ ಖುಷಿಯಾಗ್ತಾರೆ. ಅದ್ರೆ ಥರ್ಡ್​ ಅಂಪೈರ್ ಮಾತ್ರ ಕೂಡಲೇ ಡಿಸೀಶನ್ ಕೊಟ್ಟಿಲ್ಲ. ಬಾಲ್ ಬ್ಯಾಟ್​​ಗೆ ಟಿಪ್ ಆಗಿದ್ದೇನೋ ನಿಜ. ಆದ್ರೆ ಇಂಗ್ಲೆಂಡ್ ಕೀಪರ್​​ ಅಲ್ಲಿ ಕ್ಯಾಚ್ ಹಿಡಿದೇ ಇಲ್ಲ. ಕೀಪರ್ ಗ್ಲೌಸ್ ಸೇರೋ ಮುನ್ನವೇ ಬಾಲ್ ಪಿಚ್ ಆಗಿತ್ತು. ರಿಪ್ಲೇನಲ್ಲಿ ಕ್ಲೀಯರ್ ಆಗಿ ಕಾಣಿಸ್ತಿತ್ತು. ಕೀಪರ್ ಗ್ಲೌಸ್ ಬುಡದಲ್ಲೇ ಬಾಲ್ ನೆಲಕ್ಕೆ ಪಿಚ್ ಆಗಿ ಬಳಿಕ ಕ್ಯಾಚ್ ಮಾಡಿದ್ದಾರೆ. ಕ್ರಿಕೆಟ್ ರೂಲ್ಸ್ ಗೊತ್ತಿರೋರು ಯಾರು ಬೇಕಾದ್ರೂ ಅದು ನಾಟೌಟ್ ಅಂತಾರೆ. ಅಫ್​ಕೋಸ್​ ಥರ್ಡ್ ಅಂಪೈರ್ ಕೂಡ ನಾಟೌಟ್ ಡಿಸೀಶನ್ ಕೊಡ್ತಾರೆ. ಆದ್ರೆ ಬೆನ್​ಸ್ಟೋಕ್ಸ್​ ಸೇರಿದಂತೆ ಇಂಗ್ಲೆಂಡ್​ ಪ್ಲೇಯರ್ಸ್​ ಮಾತ್ರ ಫುಲ್ ಶಾಕ್ ಆಗಿ ಎಕ್ಸ್​​ಪ್ರೆಸ್ ಮಾಡ್ತಾರೆ. ಏನಿದು ಡಿಸೀಶನ್​ ಔಟ್ ಆಗಿದ್ದನ್ನ ನಾಟೌಟ್ ಅಂತಾ ಕೊಟ್ರಲ್ಲಾ ಎಂಬಂತೆ ಎಕ್ಸ್​ಪ್ರೆಶನ್ ಕೊಡ್ತಾರೆ, ಬೈದಾಡ್ತಾರೆ. ಥರ್ಡ್ ಅಂಪೈರ್ ಫೈನಲ್ ಡಿಶೀಷನ್ ಕೊಡೋ ಮೊದಲೇ ಔಟ್ ಅಂತಾ ಸೆಲೆಬ್ರೇಟ್ ಮಾಡಿದ್ರಲ್ಲಾ. ಆದ್ರೆ ಅಂಪೈರ್ ನಾಟೌಟ್​​ ಕೊಟ್ಮೇಲೆ ಔಟ್ ಎಂಬಂತೆಯೇ ಒಂದಷ್ಟು ಪೋಸ್ ಕೊಡ್ಬೇಕಲ್ಲ. ಯಾಕಂದ್ರೆ ಇಂಗ್ಲೆಂಡ್​​ ಪ್ಲೇಯರ್ಸ್​​ಗಳು ರಿಪ್ಲೇನಲ್ಲಿ ಬ್ಯಾಟ್​ಗೆ ಬಾಲ್ ಟಿಪ್ ಆಗಿರೋದನ್ನ ನೋಡಿಯೇ ಫುಲ್ ಸೆಲೆಬ್ರೇಟ್ ಮಾಡಿದ್ರು. ಹೀಗಾಗಿ ಕ್ಯಾಚ್ ಹಿಡಿಯೋ ಮುನ್ನ ಬಾಲ್​ ಬೌನ್ಸ್ ಆಗಿದ್ರೂ ಅದನ್ನ ಒಪ್ಪಿಕೊಳ್ಳೋಕೆ ಅವರಿಗೆ ಕಷ್ಟ ಆಗಿದೆ ಅಷ್ಟೇ.

ಆ್ಯಕ್ಚುವಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್​ ಪೋಕ್ಸ್​​ಗೆ ಕ್ಯಾಚ್ ಅಲ್ಲ ಅಂತಾ ಗೊತ್ತಿದ್ರೂ ಅವರು ಔಟ್​​ಗೆ ಅಪೀಲ್ ಮಾಡಿದ್ರು. ಟೋಟಲಿ ಇಡೀ ಇಂಗ್ಲೆಂಡ್ ಟೀಮ್ ಸ್ಪಿರಿಟ್ ಆಫ್ ಕ್ರಿಕೆಟ್​​ನ್ನ ಡಸ್ಟ್​​ಬಿನ್​ಗೆ ಎಸೆದೇ ಗ್ರೌಂಡ್​​ಗೆ ಎಂಟ್ರಿಯಾಗಿದ್ದಾರೆ. ಆದ್ರೆ ನಮ್ಮ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಸ್ಲಿಪ್​ನಲ್ಲಿ ಇಂಥದ್ದೇ ಕ್ಲೋಸ್ ಕ್ಯಾಚ್ ಹಿಡಿದಿದ್ರು. ಆದ್ರೆ ಕ್ಯಾಚ್ ಮಾಡೋ ಮುನ್ನವೇ ಬಾಲ್ ನೆಲಕ್ಕೆ ಬೌನ್ಸ್ ಆಗಿತ್ತು. ಹೀಗಾಗಿ ರೋಹಿತ್ ಶರ್ಮಾರೇ ನಾಟೌಟ್ ಎಂಬಂತೆ ಎಕ್ಸ್​​ಪ್ರೆಶನ್ ಕೊಡ್ತಾರೆ. ಇದನ್ನೇ ನೋಡಿ ಸ್ಪಿರಿಟ್ ಆಫ್ ಕ್ರಿಕೆಟ್ ಅನ್ನೋದು. ಹೀಗಾಗಿ ಇಂಗ್ಲೆಂಡ್​ ಪ್ಲೇಯರ್ಸ್​​ಗಳ ಬಿಹೇವಿಯರ್​​ನ್ನ ಇಂಡಿಯನ್ ಫ್ಯಾನ್ಸ್​ ಫುಲ್ ಟ್ರೋಲ್ ಮಾಡಿದ್ದಾರೆ.

ಈಗ ಫಸ್ಟ್ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಚಾರಕ್ಕೆ ಬರೋದಾದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತೆ ಜೇಮ್ಸ್ ಆ್ಯಂಡರ್ಸನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಫಸ್ಟ್ ಇನ್ನಿಂಗ್ಸ್​ನಲ್ಲಿ ಕೇವಲ ಎರಡು ರನ್​ಗೆ ಔಟಾದ್ರು. ಬಟ್ ಎರಡನೇ ವಿಕೆಟ್ ಯಶಸ್ವಿ ಜೈಸ್ವಾಲ್ ಮತ್ತು ಶುಬ್ಮನ್ ಗಿಲ್ ನಡುವೆ ಒಳ್ಳೆಯ ಪಾರ್ಟ್ನರ್​​ಶಿಪ್ ಬಂತು. ಅದ್ರಲ್ಲೂ ಯಶಸ್ವಿ ಜೈಸ್ವಾಲ್ ಅಂತೂ ಇಂಗ್ಲೆಂಡ್ ಬೌಲರ್ಸ್​ಗಳ ಮೇಲಿನ ಸವಾರಿ ಮುಂದುವರಿಸಿದ್ದಾರೆ. ಈ ಸರಣಿಯಲ್ಲಿ ಮ್ಯಾನ್​ ಆಫ್ ದಿ ಸೀರಿಸ್​​ ಜೈಸ್ವಾಲ್​​ಗೆ ಸಿಗಬಹುದು ಅನ್ಸುತ್ತೆ. 4ನೇ ಮ್ಯಾಚ್​ನ ಫಸ್ಟ್​ ಇನ್ನಿಂಗ್ಸ್​ನಲ್ಲಿ 117 ಬಾಲ್​​ಗಳಲ್ಲಿ 73 ರನ್ ಹೊಡೆದ್ರು. ಎಂಟು ಬೌಂಡರಿ, ಒಂದು ಸಿಕ್ಸರ್. ಕಳೆದ ಮೂರು ಮ್ಯಾಚ್​​ಗಳಲ್ಲಿ ಜೈಸ್ವಾಲ್​ ಬ್ಯಾಟಿಂಗ್​ಗೆ ಕಂಪೇರ್​ ಮಾಡಿದ್ರೆ ಈ ಮ್ಯಾಚ್​​ನಲ್ಲಿ ಅವರು ಮೋಡ್ ಸ್ವಲ್ಪ ಚೇಂಜ್ ಮಾಡಿದ್ದಾರೆ. ಅಫ್​​ಕೋಸ್ ರೋಹಿತ್​ ಶರ್ಮಾ ಬೇರೆ ಬೇಗನೆ ಔಟಾಗಿದ್ರೂ. ಆದ್ರೂ ಎಂದಿನಂತೆ ತುಂಬಾ ಆಗ್ರೆಸಿವ್ ಆಗಿ ಆಡೋಕೆ ಹೋಗಿರಲಿಲ್ಲ. ಕಳೆದ ಮ್ಯಾಚ್​ಗಳಲ್ಲೆಲ್ಲಾ ಮೇಲಿಂದ ಮೇಲೆ ಸಿಕ್ಸರ್ ಹೊಡೆದಿದ್ರು. ಆದ್ರೆ ಈ ಬೌಂಡರಿ, ರನ್ನಿಂಗ್​ ಬಿಟ್ವೀನ್​ ದಿ ವಿಕೆಟ್​ನಲ್ಲೇ ಡೀಲ್ ಮಾಡಿದ್ರು. ಈ ನಡುವೆ ಶುಬ್ಮನ್ ಗಿಲ್ 38 ರನ್​ಗೆ ಔಟಾಗ್ತಾರೆ. ಎಲ್​ಬಿಡ್ಬ್ಲು.. ಅಂಪೈರ್ಸ್​ ಕಾಲ್​ನಿಂದಾಗಿ ಡಿಆರ್​​ಎಸ್​​ ಇಂಗ್ಲೆಂಡ್ ಫೇವರ್ ಆಗುತ್ತೆ. ಆ್ಯಕ್ಚುವಲಿ ಫಸ್ಟ್ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡೋವಾಗ, ಈ ಹಿಂದಿನ ಮ್ಯಾಚ್​​ಗಳಲ್ಲೂ ಆಗಿತ್ತು. ಇದೇ ಡಿಆರ್​ಎಸ್​ ಟೀಂ ಭಾರತದ ಫೇವರ್ ಆಗಿ ಬಂದಾಗ ಬೆನ್​ ಸ್ಟೋಕ್ಸ್ ಅಂಪೈರ್ಸ್​ ಕಾಲ್ ಸಿಸ್ಟಮ್ ಸರಿ ಇಲ್ಲ. ನಾಟೌಟ್ ಆದ್ರೂ ಅಂಪೈರ್ಸ್​ ಕಾಲ್​ನಿಂದಾಗಿ ನಮ್ಮ ಬ್ಯಾಟ್ಸ್​​ಮನ್​ಗಳು ಔಟಾಗಿದ್ದಾರೆ ಅಂತೆಲ್ಲಾ ಕಾಮೆಂಟ್ ಮಾಡಿದ್ರು. ಆದ್ರೀಗ ಶುಬ್ಮನ್ ಗಿಲ್ ವಿಚಾರದಲ್ಲಿ ಇದೇ ಅಂಪೈರ್ಸ್ ಕಾಲ್​ ರೂಲ್ಸ್​​ನಿಂದಾಗಿ ಡಿಸೀಶನ್ ಇಂಗ್ಲೆಂಡ್ ಫೇವರ್ ಆಗಿದೆ. ಈಗ ಅಂಪೈರ್ಸ್ ಕಾಲ್ ಬಗ್ಗೆ ಬೆನ್​​ಸ್ಟೋಕ್ಸ್ ಏನಂತಾರೆ ಹಾಗಿದ್ರೆ? ಬೆನ್​ ಸ್ಟೋಕ್ಸ್​ಗೆ ಇಲ್ಲಿ ಇನ್ನೊಂದು ಕ್ವಶ್ಚನ್ ಕೂಡ ಇದೆ. NEXT ಆ ಬಗ್ಗೆಯೂ ಹೇಳ್ತೀನಿ. ಅದಕ್ಕೂ ಮುನ್ನ ಟೀಂ ಇಂಡಿಯಾದ ವಿಕೆಟ್​​ಗಳು ಇದ್ದಕ್ಕಿದ್ದಂತೆ ಕೊಲ್ಯಾಪ್ಸ್​ ಆಗಿರೋ ವಿಚಾರ ಇದೆ. ಗಿಲ್ ಔಟಾದ ಬಳಿಕ ನಮ್ಮ ಮಿಡ್ಲ್ ಆರ್ಡರ್ ಬ್ಯಾಟ್ಸ್​ಮನ್​ಗಳು ಪರೇಡ್ ಮಾಡಿದ್ರು. ರಜತ್ ಪಾಟೀದಾರ್, ರವೀಂದ್ರ ಜಡೇಜ, ಸರ್ಫರಾಜ್ ಖಾನ್ ನಂತರ ಆರ್.ಅಶ್ವಿನ್ ಎಲ್ಲಾ ಹಾಗೆ ಬಂದು ಹೀಗೆ ಹೋದ್ರು. ಇಲ್ಲಿ ರಜತ್ ಪಾಟೀದಾರ್ ನೋಡಿ, ಮೇಲಿಂದ ಮೇಲೆ ಅವಕಾಶ ಕೊಟ್ರೂ ಫ್ಲಾಪ್​ ಶೋ ಕಂಟಿನ್ಯೂ ಮಾಡಿದ್ದಾರೆ. ಇಂಗ್ಲೆಂಡ್ ಸೀರಿಸ್​​ನಲ್ಲಿ ಅವರ ಎವರೇಜ್ 12.60. ಕುಲ್​ದೀಪ್​ ಯಾದವ್ ಮತ್ತು ಆರ್. ಅಶ್ವಿನ್​​ ಬ್ಯಾಟಿಂಗ್ ಎವರೇಜ್ ಕೂಡ ಇದಕ್ಕಿಂತ ಹೆಚ್ಚಿದೆ. ಈ ಸೀರಿಸ್​ನಲ್ಲಿ ರಜತ್ ಸ್ಕೋರ್ 9, 32, 0, 5, 17. ಸರ್ಫರಾಜ್​ ಖಾನ್​​ಗಿಂತಲೂ ಮೊದಲೇ ಡೆಬ್ಯೂ ಆದ್ರೂ ಈ ಸೀರಿಸ್​​ನಲ್ಲಿ ಒಂದು ಹಾಫ್ ಸೆಂಚೂರಿ ಕೂಡ ಹೊಡೆದಿಲ್ಲ. NEXT ಮ್ಯಾಚ್​​ಗೆ ರಜತ್ ಪಾಟೀದಾರ್​ರನ್ನ ಡ್ರಾಪ್ ಮಾಡಿದ್ರೂ ಆಶ್ಚರ್ಯ ಇಲ್ಲ. ಇನ್ನೊಂದು ವಿಚಾರ ಏನಂದ್ರೆ ರಜತ್​ ಈ ಬಾರಿಯೂ ಆರ್​ಸಿಬಿಯಲ್ಲಿ ಆಡ್ತಾ ಇದ್ದಾರೆ. ಸೋ ಅವರ ಫಾರ್ಮ್​ ಬಗ್ಗೆ ಆರ್​ಸಿಬಿ ಕೂಡ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ. ನಿಮಗೆ ಗೊತ್ತಿರೋ ಹಾಗೆ ಆರ್​ಸಿಬಿ ಬ್ಯಾಟಿಂಗ್​ ಲೈನ್​ಅಪ್​ನಲ್ಲಿ ರಜತ್ ಪಾಟೀದಾರ್ ಕೂಡ ಮೇನ್ ರೋಲ್​ನಲ್ಲಿದ್ದಾರೆ. ಓಕೆ ಏಳು ವಿಕೆಟ್ ಕಳೆದುಕೊಂಡು ಟ್ರಬಲ್​ನಲ್ಲಿರೋ ಟೀಂ ಇಂಡಿಯಾಗೆ ವಿಕೆಟ್ ಕೀಪರ್ ಧ್ರುವ್ ಜ್ಯುರೆಲ್ ಮತ್ತು ಕುಲ್​​ದೀಪ್ ಯಾದವ್ ಸ್ವಲ್ಪ ನೆರವಾಗಿದ್ದಾರೆ. ಅದ್ರಲ್ಲೂ ಕುಲ್​ದೀಪ್ ಯಾದವ್ ಬ್ಯಾಟಿಂಗ್ ಮಾಡಿದ ರೀತಿ ನಿಜಕ್ಕೂ ಇಂಪ್ರೆಸಿವ್. ಡೇ-1 ತುಂಬಾ ಸೀರಿಯಸ್ ಆಗಿ, ಪ್ರೊಫೆಷನಲ್ ಬ್ಯಾಟ್ಸ್​​ಮನ್ ರೀತಿಯೇ ಬ್ಯಾಟಿಂಗ್ ಮಾಡಿದ್ದಾರೆ. 72 ಬಾಲ್​​ ಫೇಸ್ ಮಾಡಿ 17 ರನ್ ನಾಟೌಟ್. ರೀಯಲಿ ಗುಡ್​ ಬ್ಯಾಟಿಂಗ್. ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ಕುಲ್​ದೀಪ್​ ಯಾದವ್ ಕೆಲವು ಹಾಫ್​ ಸೆಂಚೂರಿ, ಒಂದು ಸೆಂಚೂರಿ ಎಲ್ಲಾ ಹೊಡೆದಿದ್ದಾರೆ. ಹೀಗಾಗಿ ಅವರಿಗೆ ಬ್ಯಾಟಿಂಗ್ ಟಚ್ ಇಲ್ಲ ಅಂತೇನಲ್ಲ. ಆದ್ರೆ ಅವರ ಡಿಫೆನ್ಸ್ ಶಾಟ್​ಗಳೆಲ್ಲಾ ಪರ್ಫೆಕ್ಟ್ ಆಗಿತ್ತು. ಡಿಫೆನ್ಸ್ ಮಾಡಿ ಬಳಿಕ ಫಾಲೋ ಥ್ರೂ ಇವೆಲ್ಲವೂ ಸಾಲಿಡ್ ಆಗಿತ್ತು. ಕುಲ್​ದೀಪ್​ ಡಿಫೆನ್ಸ್ ನೋಡಿ ಈವನ್ ಪೆವಿಲಿಯನ್​ನಲ್ಲಿ ರೋಹಿತ್, ಶುಬ್ಮನ್ ಗಿಲ್, ಜೈಸ್ವಾಲ್​ ಆಶ್ಚರ್ಯದಿಂದ ನೋಡ್ತಾ ಇದ್ರು. 72 ಬಾಲ್​ಗಳಲ್ಲಿ 17 ರನ್.. ಕುಲ್​ದೀಪ್ ದಿ ಬ್ಲಾಕರ್. ಕುಲ್​ದೀಪ್ ಬ್ಯಾಟಿಂಗ್ ಮಾಸ್ಟರ್ ಕ್ಲಾಸ್.. ಡೇ-3 ಕೂಡ ಕುಲ್​ದೀಪ್​ ಮತ್ತು ಜ್ಯುರೆಲ್ ಮಧ್ಯೆ ಒಂದಷ್ಟು ಪಾಟ್ನರ್​​ಶಿಪ್ ಬಿಲ್ಡ್ ಆದ್ರೆ ಚೆನ್ನಾಗಿರುತ್ತೆ. ಇಲ್ಲಾಂದ್ರೆ ಟೀಂ ಇಂಡಿಯಾ ಫಸ್ಟ್​ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಬೇಕಾಗುತ್ತೆ. ಸದ್ಯ ನಾವು ಇಂಗ್ಲೆಂಡ್ ಸ್ಕೋರ್​ಗಿಂತ 134 ರನ್​​ ಹಿಂದೆ ಇದ್ದೇವೆ. 219/7. ಮೂರನೇ ದಿನ ನಮ್ಮ ಬೌಲರ್ಸ್​ ಮೇಲೆ ಹೆಚ್ಚು ರೆಸ್ಪಾನ್ಸಿಬಿಲಿಟಿ ಇದೆ. ಅಗ್ರೆಸ್ಸಿವ್ ಆಗಿ ಬೌಲ್ ಮಾಡಲೇಬೇಕು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​​ನ್ನ ಆಲೌಟ್ ಮಾಡಲೇಬೇಕು. ಇಂಥಾ ಪಿಚ್​​ನ್ನ ನಾನ್ಯಾವತ್ತೂ ನೋಡಿಯೇ ಇಲ್ಲ ಎಂದಿದ್ದ ಅದೇ ಬೆನ್​ ಸ್ಟೋಕ್ಸ್​ ಟೀಮ್ ಫಸ್ಟ್​ ಇನ್ನಿಂಗ್ಸ್​ನಲ್ಲಿ ನಮ್ಮ ಬ್ಯಾಟ್ಸ್​ಮನ್​ಗಳ ಪಿಕ್ಚರ್ ಬಿಡಿಸಿದ್ದಾರೆ. ಈ ಪಿಚ್​ನಲ್ಲಿ ಇಂಗ್ಲೆಂಡ್ ಬೌಲರ್ಸ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಈಗ ಪಿಚ್ ಬಗ್ಗೆ ಬೆನ್​ಸ್ಟೋಕ್ಸ್ ಏನಂತಾರಂತೆ. ಈಗ ಪಿಚ್ ಸರಿ ಇದ್ಯಾ ಅವರಿಗೆ? ಬಟ್ ಕೆಲ ಬಾಲ್​ಗಳು ಸಡನ್ ಆಗಿ ತುಂಬಾ ಲೋ ಬರ್ತಿದೆ. ಕೆಲವೊಂದು ಬಾಲ್ ಭಾರಿ ಬೌನ್ಸ್ ಆಗ್ತಿದೆ. ಹೀಗಾಗಿ ಬ್ಯಾಟ್ಸ್​​ಮನ್​​ಗಳು ತುಂಬಾ ಕೇರ್​​ಫುಲ್ ಆಗಿಯೇ ಬ್ಯಾಟಿಂಗ್ ಮಾಡಬೇಕಾಗುತ್ತೆ ಈ ಪಿಚ್​ನಲ್ಲಿ.

Shwetha M