ರೀಲ್ಸ್ನಲ್ಲಿ ಬಟರ್ ಫ್ಲೈ ಹಾರಾಟ – ಬಾಲಿವುಡ್ ಸ್ಟಾರ್ಸ್ ಬಾಯಲ್ಲೂ ಬಟರ್ ಫ್ಲೈ!
ಸೋಶಿಯಲ್ ಮೀಡಿಯಾ ಒಪನ್ ಮಾಡಿದ್ರೆ ಸಾಕು.. ಓನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ.. ಬಿಟ್ರೆ ಬಟರ್ ಫ್ಲೈ ಬಟರ್ ಫ್ಲೈ ವೇರ್ ಆರ್ ಯು ಗೋಯಿಂಗ್ ಅನ್ನೋ ಸಾಂಗೇ ಬರುತ್ತೆ. ಸರ್ಕಾರಿ ಶಾಲೆಯೊಂದರ ಮಕ್ಕಳು ಬಟರ್ ಫ್ಲೈ ಬಟರ್ ಫ್ಲೈ ವೇರ್ ಆರ್ ಯು ಗೋಯಿಂಗ್ ಅಂತಾ ಹಾಡುತ್ತಾ ಹೆಜ್ಜೆ ಹಾಕಿದ್ರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಈ ಹಾಡಿಗೆ ರೀಲ್ಸ್ ಮಾಡ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಯಾವ ಹಾಡು ಯಾವಾಗ ಟ್ರೆಂಡ್ ಆಗುತ್ತೆ, ವೈರಲ್ ಆಗುತ್ತೆ ಅಂತಾ ಹೇಳೋಕೆ ಸಾಧ್ಯವೇ ಇಲ್ಲ. ಜನರ ಕ್ರೇಜ್ ಕೂಡ ಆಗಾಗ ಬದಲಾಗುತ್ತೆ ಅನ್ನೋದಕ್ಕೆ ಇತ್ತೀಚೆಗೆ ಜನ ಮಾಡ್ತಿರುವ ರೀಲ್ಸ್ ಗಳೇ ಸಾಕ್ಷಿ. ಈಗ ಬಟರ್ ಫ್ಲೈ ಬಟರ್ ಫ್ಲೈ.. ವೇರ್ ಆರ್ ಯೂ ಗೋಯಿಂಗ್.. ಈ ಸಾಂಗ್ ಭಾರಿ ವೈರಲ್ ಆಗ್ತಾ ಇದೆ. ಈ ಹಾಡಿಗೆ ಜನ ಡ್ಯಾನ್ಸ್.. ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.
ಇದನ್ನೂ ಓದಿ: 3 ನೇ ವರ್ಷಕ್ಕೆ ಕಾಲಿಟ್ಟ ರಷ್ಯಾ – ಉಕ್ರೇನ್ ಯುದ್ಧ – ರಷ್ಯಾ ವಿರುದ್ಧ 500 ಹೊಸ ನಿರ್ಬಂಧಗಳನ್ನು ವಿಧಿಸಿದ ಅಮೆರಿಕ
ವೈರಲ್ ಆಗ್ತಿರೋ ಈ ಮಕ್ಕಳ ಡ್ಯಾನ್ಸ್ ಅನ್ನ ಸುಮಾರು ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನುಸಿಕೊತ್ತಲ ಎಂಬಲ್ಲಿನ ಬಿಕ್ಕಿ ಶ್ರೀನಿವಾಸುಲು, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ನಾಲ್ಕು ವರ್ಷಗಳ ಹಿಂದೆ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ರು. ವಿದ್ಯಾರ್ಥಿಗಳು ಕೂಡ ಶಿಕ್ಷಕರು ಹೇಳಿಕೊಟ್ಟಿರುವ ಹಾಡಿಗೆ ಡ್ಯಾನ್ಸ್ ಮಾಡಿದ್ರು. ಆ ಟೈಮ್ ನಲ್ಲಿ ಪುಟಾಣಿ ಮಕ್ಕಳ ಡ್ಯಾನ್ಸ್ ಅಷ್ಟೊಂದಾಗಿ ವೀವ್ಸ್ ಪಡ್ಕೊಂಡಿರ್ಲಿಲ್ಲ. ಆದ್ರೆ ರೀಸೆಂಟ್ ಆಗಿ ಈ ಮಕ್ಕಳ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದೆ.
ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಬಟರ್ ಫ್ಲೈ ಹಾರಾಟ ಜೋರಾಗಿಯೇ ಇದೆ. ಈ ಸಾಂಗ್ ಗೆ ಲಿಪ್ ಸಿಂಕ್ ಮಾಡಿ ಹೆಜ್ಜೆ ಹಾಕ್ತಿದ್ದಾರೆ ನಮ್ ಜನ. ಸಿನಿಮಾ, ಸೀರಿಯಲ್ ತಾರೆಯರು ಕೂಡ ಈ ಸಾಂಗ್ ಗೆ ಸ್ಟೆಪ್ ಹಾಕಿದ್ದಾರೆ. ಟ್ರೋಲ್ ಪೇಜ್ ಗಳಲ್ಲೂ ಕೂಡಾ ಇದೇ ಸಾಂಗ್ ಸಿಕ್ಕಾ ಪಟ್ಟೆ ಸದ್ದು ಮಾಡ್ತಿದೆ.
ಇನ್ಸ್ಟಾಗ್ರಾಮ್ ರೀಲ್ಸ್ ಅಲ್ಲಿ ಬಹಳನೇ ಟ್ರೆಂಡಿಂಗ್ ನಲ್ಲಿರುವ “ಬಟರ್ ಫ್ಲೈ, ಬಟರ್ ಫ್ಲೈ ವೇರ್ ಆರ್ ಯೂ” ಹಾಡಿಗೆ ವೃದ್ಧರ ತಂಡವೊಂದು ಸಖತ್ ಆಗಿ ನೃತ್ಯ ಮಾಡಿದೆ. ಕೇರಳದ ಅಡೈಕ್ಕಲಂ ವೃದ್ಧಾಶ್ರಮದ ಅಧೀಕೃತ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದ್ದು, ಏಜ್ ಇಸ್ ಜಸ್ಟ್ ಎ ನಂಬರ್ ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.
ಇನ್ನೂ ಡ್ಯಾನ್ಸ್ ಕ್ಲಾಸ್ ಗಳಲ್ಲೂ ಈ ಸಾಂಗ್ ಸದ್ದು ಮಾಡ್ತಿದೆ. ಡ್ಯಾನ್ಸ್ ಮಾಸ್ಟರ್ಸ್ ಕೂಡ ತಮ್ಮ ಸ್ಟೂಡೆನ್ಸ್ ಜೊತೆ ಈ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಸಿ.ಹೆಚ್ ಮಲ್ಲ ರೆಡ್ಡಿ ಕೂಡ ಈ ಸಾಂಗ್ ಗೆ ಡ್ಯಾನ್ಸ್ ಮಾಡಿದ್ದಾರೆ.. ಕೆಲ ಟ್ರೋಲ್ ಪೇಜ್ ಗಳು, ಸಿನಿಮಾ ಸೀನ್ ಗಳಿಗೂ ಈ ಸಾಂಗ್ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿವೆ..
ಇನ್ನು ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಯಾವುದಾದ್ರೂ ಒಂದು ಟ್ರೆಂಡಿಂಗ್ ಆದ್ರೆ ಅದಕ್ಕೆ ಹೊಸ ಹೊಸ ಸ್ವರೂಪಗಳನ್ನು ನೀಡ್ತಾರೆ.. ಇದೀಗ ಬಟರ್ ಫ್ಲೈ ಸಾಂಗ್ ಗೆ ಹೊಸ ರೂಪ ಕೊಟ್ಟಿದ್ದಾರೆ. ಈಗ ಸಾಂಗ್ ಅನ್ನ ಸ್ಯಾಲರಿ.. ಸ್ಯಾಲರಿ.. ವೇರ್ ಆರ್ ಯು ಗೋಯಿಂಗ್.. ಅಂತಾ ಕೆಲಸಕ್ಕೆ ಹೋಗೋರು ತಮ್ಮ ಹೊಟ್ಟೆಪಾಡಿನ ಬಗ್ಗೆ ಹೇಳ್ಕೊಂಡಿದ್ದಾರೆ..
ಇನ್ನು ಆಂದ್ರಪ್ರದೇಶದ ಅದೇ ಸ್ಕೂಲ್ ನ ಮಕ್ಕಳು ತುಂಬಾ ಹಾಡುಗಳನ್ನು ಹಾಡಿ ಡ್ಯಾನ್ಸ್ ಮಾಡಿದ್ದಾರೆ.. ಅದ್ರಲ್ಲಿ ಆಪಲ್.. ಆಪಲ್.. ರೆಡ್ ರೆಡ್ ರೆಡ್ ಆಪಲ್.. ಸಾಂಗ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿಗೂ ಕೂಡ ಅನೇಕರು ಹೆಜ್ಜೆ ಹಾಕಿದಾರೆ..
ಈಗ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ಗಳದ್ದೇ ಹವಾ. ಹೀಗಾಗಿಯೇ ಕೆಲವರು ತಂತ್ರಜ್ಞಾನ ಬಳಕೆ ಮೂಲಕ ಬಾಲಿವುಡ್ ನಟರು ರೀಲ್ಸ್ ಮಾಡಿರುವ ಹಾಗೆ ಎಡಿಟ್ ಮಾಡಿ ಪೋಸ್ಟ್ ಮಾಡ್ತಿದ್ದಾರೆ. ನಟ ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್, ಅಕ್ಷಯ್ ಸೇರಿದಂತೆ ಕೆಲವು ಬಾಲಿವುಡ್ ಸ್ಟಾರ್ ಗಳು ಈ ಆಪಲ್ ಸಾಂಗ್ ಗೆ ಡ್ಯಾನ್ಸ್ ಮಾಡ್ತಿರುವ ವಿಡಿಯೋವೊಂದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಚಿಕ್ಕ ಮಕ್ಕಳಂತೆ ಈ ನಟರನ್ನು ಬಿಂಬಿಸಲಾಗಿದೆ. ಜೊತೆಗೆ ಹುಡುಗಿಯರಂತೆಯೂ ಬಿಂಬಿಸಲಾಗಿದೆ. ಒಟ್ಟಾರೆಯಾಗಿ ಸರ್ಕಾರಿ ಶಾಲೆಯ ಪುಟಾಣಿ ಗಳು ಬಟರ್ ಫ್ಲೈ ಬಟರ್ ಫ್ಲೈ ವೇರ್ ಆರ್ ಯು ಗೋಯಿಂಗ್ ಅಂತ ಮುದ್ದು ಮುದ್ದಾಗಿ ಹಾಡುತ್ತಾ ಡ್ಯಾನ್ಸ್ ಮಾಡಿರುವ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.